ETV Bharat / sitara

'ಸೈರಾ'ಗೆ ಮತ್ತೊಂದು ಕಂಟಕ: ನಿರ್ಮಾಪಕರಿಗೆ ಸಿಬಿಎಫ್​​ಸಿ ಹೇಳಿದ್ದೇನು?

ಸೈರಾ ಸಿನಿಮಾದಲ್ಲಿ ಬಳಸಿರುವ ತಪ್ಪು ಸಂಭಾಷಣೆಗಳನ್ನು ತೆಗೆದು ಹಾಕಿ ಎಂದು ಸಿನಿಮಾ ನಿರ್ಮಾಪಕರಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್​ ಮಂಡಳಿ ತಾಕೀತು ಮಾಡಿದೆ. ಸೈರಾ ಸಿನಿಮಾದಲ್ಲಿ ಬರುವ ನರಸಿಂಹ ರೆಡ್ಡಿ ಕಥೆಯ ಪ್ರಕಾರ 1857ರಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆದಿದೆ. ಆದ್ರೆ ಇದಕ್ಕೂ ಮೊದಲು ಅಂದ್ರೆ ಇದೀಗ 1817ರಲ್ಲಿ  ಪೈಕಾ ದಂಗೆ ನಡೆದಿತ್ತು ಎಂದು ಹೇಳಲಾಗಿದೆ.

author img

By

Published : Oct 1, 2019, 8:09 PM IST

"ಸೈರಾ"ಕ್ಕೆ ಮತ್ತೊಂದು ಕಂಟಕ

ನಾಳೆ ಬಿಡುಗಡೆಯಾಗಲು ತಯಾರಾಗಿರುವ ಸೈರಾ ಸಿನಿಮಾಕ್ಕೆ ಕಂಟಕ ಎದುರಾಗಿದ್ದು, ಸಿನಿಮಾದಲ್ಲಿ ಬಳಸಿರುವ ತಪ್ಪು ಸಂಭಾಷಣೆಗಳನ್ನು ತೆಗೆದು ಹಾಕಿ ಎಂದು ಸಿನಿಮಾ ನಿರ್ಮಾಪಕರಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್​ ಮಂಡಳಿ ತಾಕೀತು ಮಾಡಿದೆ.

ಈ ಬಗ್ಗೆ ಆಕ್ಷೇಪಣೆ ಮಾಡಿರುವ ಒಡಿಶಾ ಕಳಿಂಗ ಸೇನಾ ಅಧ್ಯಕ್ಷ ಹೇಮಂತ್​ ಕುಮಾರ್​, ಸೈರಾ ಸಿನಿಮಾ ಮಾಡುವ ಮೊದಲು ಸಿನಿಮಾ ನಿರ್ಮಾಪಕರು ಸಂಶೋಧನೆ ಮಾಡಬೇಕಿತ್ತು ಎಂದಿದ್ದಾರೆ. ಅಲ್ಲದೆ 1817ರಲ್ಲೇ ಮೊದಲ ಸ್ವಾತಂತ್ರ್ಯ ಹೋರಾಟ ನಡೆದಿತ್ತು ಎಂದು ಹೇಳಿದ್ದಾರೆ. ಈ ವಿಷಯವನ್ನು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಕೂಡ ಪ್ರಸ್ತಾಪ ಮಾಡಿದ್ದರು ಎಂದಿದ್ದಾರೆ.

ಸೈರಾ ಸಿನಿಮಾದಲ್ಲಿ ಬರುವ ನರಸಿಂಹ ರೆಡ್ಡಿ ಕಥೆಯ ಪ್ರಕಾರ 1857ರಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆದಿದೆ ಎಂದು ಹೇಳಲಾಗಿದೆ. ಆದ್ರೆ ಇದಕ್ಕೂ ಮೊದಲು ಅಂದ್ರೆ ಇದೀಗ 1817ರಲ್ಲಿ ಪೈಕಾ ದಂಗೆ ನಡೆದಿತ್ತು ಎಂದು ಹೇಳಲಾಗಿದೆ.

ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟಕೊಂಡು ಪ್ರಶ್ನಾರ್ಥಕವಾಗಿ ಯಾವೆಲ್ಲ ಅಂಶಗಳು ಸಿನಿಮಾದಲ್ಲಿ ಇವೆಯೋ ಅವನ್ನೆಲ್ಲ ತೆಗೆದು ಹಾಕುವಂತೆ ಸೈರಾ ಸಿನಿಮಾ ನಿರ್ಮಾಪಕರಿಗೆ ಸೆನ್ಸಾರ್​ ಮಂಡಳಿ ಆದೇಶಿಸಿದೆ. ಸೈರಾ ಸಿನಿಮಾ ನಾಳೆ ತೆರೆಗೆ ಬರುತ್ತಿದ್ದು, ಹಿಂದಿ, ತೆಲುಗು, ತಮಿಳು, ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

Intro:Body:

giri

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.