ETV Bharat / sitara

ಸ್ಯಾಂಡಲ್​​​​ವುಡ್ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬು ಒಂದು ನೆನಪು

ಡಿ. ರಾಜೇಂದ್ರ ಬಾಬು ಸಿನಿಮಾರಂಗದಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಟ ಆಗಬೇಕು ಎಂದು ಬಂದವರು ಎಸ್​​​.ವಿ. ರಾಜೇಂದ್ರ ಸಿಂಗ್ ಬಾಬು ತಂಡವನ್ನು ಸೇರಿ ನಿರ್ದೇಶನ ಕಲಿತರು. ಅವರ ಬರವಣಿಗೆ ಶಕ್ತಿ, ಜ್ಞಾಪಕ ಶಕ್ತಿ ಅವರನ್ನು ಬಹು ಬೇಗ ಚಿತ್ರಕಥೆ ಬರೆಯುವುದಕ್ಕೆ ದಾರಿ ಮಾಡಿಕೊಟ್ಟಿತು.

author img

By

Published : May 16, 2020, 6:50 PM IST

Director Rajendra babu
ಡಿ. ರಾಜೇಂದ್ರ ಬಾಬು

ಕನ್ನಡದ ಶ್ರೇಷ್ಠ ನಿರ್ದೇಶಕರ ಪೈಕಿ ದಿವಂಗತ ಡಿ. ರಾಜೇಂದ್ರ ಬಾಬು ಕೂಡಾ ಒಬ್ಬರು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ಡಿ. ರಾಜೇಂದ್ರ ಬಾಬು ಇಂದು ನಮ್ಮೊಂದಿಗೆ ಇಲ್ಲ. ಕೆಲವು ಕಲಾವಿದರನ್ನು ಪ್ರತಿವರ್ಷ ನೆನೆಯುವ ಸ್ಯಾಂಡಲ್​ವುಡ್​​​​, ಮತ್ತೆ ಕೆಲವರನ್ನು ಮರೆಯುತ್ತಿದೆ.

ಯಶಸ್ವಿ ನಿರ್ದೇಶಕ ಡಿ. ರಾಜೇಂದ್ರ ಬಾಬು ಜನ್ಮದಿನ ಮಾರ್ಚ್ 30. ಆದರೆ ಈ ಬಾರಿ ಕೂಡಾ ಚಿತ್ರರಂಗ ಅವರ ಜನ್ಮದಿನ ಆಚರಿಸಲಿಲ್ಲ ಅಥವಾ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿಲ್ಲ. ರಾಜೇಂದ್ರ ಬಾಬು ಅವರನ್ನು ಸಾಂಸಾರಿಕ, ಭಾವನಾತ್ಮಕ ಚಿತ್ರಗಳ ಗಾರುಡಿಗ ಎಂದೇ ಹೇಳಬಹುದು. ಸ್ಯಾಂಡಲ್​​ವುಡ್​​ ಖ್ಯಾತ ನಿರ್ದೇಶಕರಲ್ಲಿ ಇವರು ಕೂಡಾ ಒಬ್ಬರು.

Rajendra babu movies
ಡಿ. ರಾಜೇಂದ್ರ ಬಾಬು

ರಾಜೇಂದ್ರ ಬಾಬು ಸುಮಾರು 51 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಶಿವರಾಜ್​ಕುಮಾರ್ ಹಾಗೂ ರಮ್ಯಾ ಅಭಿನಯದ 'ಆರ್ಯನ್' ರಾಜೇಂದ್ರ ಬಾಬು ನಿರ್ದೇಶನದ 50 ನೇ ಸಿನಿಮಾ. ಇದರ ನಂತರ 'ಕುಚಿಕು ಕುಚಿಕು' ಚಿತ್ರವನ್ನು ನಿರ್ದೇಶಿಸಿದರು. ಆದರೆ 'ಆರ್ಯನ್' ಬಿಡುಗಡೆಯಾಗುವ ಮುನ್ನವೇ ರಾಜೇಂದ್ರ ಬಾಬು ನಿಧನರಾದರು. ಕನ್ನಡದಲ್ಲಿ ಓಂ ಸಾಯಿ ಪ್ರಕಾಶ್​​​​​​​ 100 ಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ್ದರೆ, ಭಾರ್ಗವ, ದೊರೈ-ಭಗವಾನ್​​, ದಿನೇಶ್ ಬಾಬು, ಬಿ.ಆರ್​. ರಾಮಮೂರ್ತಿ, ಬಿ.ಆರ್​​​​. ಕೇಶವ ಹಾಗೂ ರಾಜೇಂದ್ರ ಬಾಬು 50 ಸಿನಿಮಾಗಳನ್ನು ನಿರ್ದೇಶನ ಮಾಡಿದ ಹಿರಿಯ ನಿರ್ದೇಶಕರು.

Rajendra babu movies
ಡಿ. ರಾಜೇಂದ್ರ ಬಾಬು ನಿರ್ದೇಶನದ ಚಿತ್ರ ಹಾಲುಂಡ ತವರು

ಡಿ. ರಾಜೇಂದ್ರ ಬಾಬು ಪತ್ನಿ ಸುಮಿತ್ರ ಕೂಡಾ ಖ್ಯಾತ ನಟಿ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸುಮಿತ್ರ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರನ್ನು ಇಂದು ಕಲಾರಂಗದಲ್ಲಿ ಸುಮಿತ್ರಮ್ಮ ಎಂದೇ ಗುರುತಿಸಲಾಗುವುದು. ಡಿ. ರಾಜೇಂದ್ರ ಬಾಬು ಹಾಗೂ ಸುಮಿತ್ರಮ್ಮ ದಂಪತಿ ಮಕ್ಕಳು ಉಮಾಶಂಕರಿ ಹಾಗೂ ನಕ್ಷತ್ರ ಕೂಡಾ ಕಲಾವಿದರು. ಉಮಾಶಂಕರಿ ವಿವಿಧ ಭಾಷೆಗಳಲ್ಲಿ ಸುಮಾರು 30 ಸಿನಿಮಾಗಳಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ನಕ್ಷತ್ರ ಕೂಡಾ ಮಲಯಾಳಂ, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಗೋಕುಲ, ಹರೇ ರಾಮ ಹರೇ ಕೃಷ್ಣ, ಫೇರ್ ಅ್ಯಂಡ್ ಲವ್ ಲಿ ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ.

Rajendra babu movies
'ಪ್ರೀತ್ಸೆ'

ಡಿ. ರಾಜೇಂದ್ರ ಬಾಬು ಸಿನಿಮಾರಂಗದಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಟ ಆಗಬೇಕು ಎಂದು ಬಂದವರು ಎಸ್​​​.ವಿ. ರಾಜೇಂದ್ರ ಸಿಂಗ್ ಬಾಬು ತಂಡವನ್ನು ಸೇರಿ ನಿರ್ದೇಶನ ಕಲಿತರು. ಅವರ ಬರವಣಿಗೆ ಶಕ್ತಿ, ಜ್ಞಾಪಕ ಶಕ್ತಿ ಅವರನ್ನು ಬಹು ಬೇಗ ಚಿತ್ರಕಥೆ ಬರೆಯುವುದಕ್ಕೆ ದಾರಿ ಮಾಡಿಕೊಟ್ಟಿತು. 1983 ರಲ್ಲಿ ಟೈಗರ್ ಪ್ರಭಾಕರ್ ಹಾಗೂ ಜಯಮಾಲ ಅಭಿನಯದ ‘ಜಿದ್ದು’ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶನಕ್ಕೆ ಕಾಲಿಟ್ಟರು. ಡಾ. ವಿಷ್ಣುವರ್ಧನ್​​​​, ಅಂಬರೀಶ್, ವಿ. ರವಿಚಂದ್ರನ್, ಶಶಿಕುಮಾರ್, ಉಪೇಂದ್ರ, ಶಿವರಾಜ್​​​​​​​​​ಕುಮಾರ್, ರಾಮ್​​​​​​​​​​​​​​​​​​​​ಕುಮಾರ್, ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಗಣೇಶ್ ಹೀಗೆ ಬಹುತೇಕ ಎಲ್ಲಾ ನಟರ ಚಿತ್ರಗಳಿಗೆ ರಾಜೇಂದ್ರ ಬಾಬು ಆ್ಯಕ್ಷನ್ ಕಟ್ ಹೇಳಿದ್ದಾರೆ.

Rajendra babu movies
'ದಿಗ್ಗಜರು'

ಹೊಸ ಇತಿಹಾಸ, ಧೀರ್ಘ ಸುಮಂಗಲಿ, ಎನ್​ಕೌಂಟರ್ ದಯಾನಾಯಕ್, ಡಾ. ವಿಷ್ಣುವರ್ಧನ್ ಜೊತೆ ಹಾಲುಂಡ ತವರು, ಜೀವನದಿ, ಹಬ್ಬ, ಅಪ್ಪಾಜಿ, ಡಾ. ಅಂಬರೀಶ್ ಜೊತೆ ದಿಗ್ಗಜರು, ಒಲವಿನ ಉಡುಗೊರೆ, ವಿ.ರವಿಚಂದ್ರನ್ ಜೊತೆ ಸ್ವಾಭಿಮಾನ, ನಾನು ನನ್ ಹೆಂಡ್ತಿ, ಯುಗ ಪುರುಷ, ಶ್ರೀ ರಾಮಚಂದ್ರ, ರಾಮಾಚಾರಿ, ಅಣ್ಣಯ್ಯ, ಯಾರೇ ನೀನು ಚೆಲುವೆ, ಕುರುಬನ ರಾಣಿ, ಕೃಷ್ಣಲೀಲ, ದೇವರ ಮಗ, ಯಾರೇ ನೀ ದೇವತೆ, ಪ್ರೀತ್ಸೆ, ಆರ್ಯನ್, ಉಪೇಂದ್ರ ಅವರ ಜೊತೆ ಪ್ರೀತ್ಸೆ, ಆಟೋ ಶಂಕರ್, ಉಪ್ಪಿದಾದಾ ಎಂಬಿಬಿಎಸ್, ಕಿಚ್ಚ, ಸ್ವಾತಿಮುತ್ತು ಹೀಗೆ ಅನೇಕ ಒಳ್ಳೆಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿ ಸ್ಟಾರ್ ನಿರ್ದೇಶಕ ಪಟ್ಟ ಅಲಂಕರಿಸಿದವರು ಡಿ. ರಾಜೇಂದ್ರ ಬಾಬು.

Rajendra babu movies
'ಜೀವನದಿ'

ಡಿ. ರಾಜೇಂದ್ರ ಬಾಬು ಕೆಲಸದ ಬಗ್ಗೆ ನಿಷ್ಠೆ, ಜವಾಬ್ದಾರಿಯನ್ನು ಎಂದು ಮರೆಯುತ್ತಿರಲಿಲ್ಲ. ಸಿನಿಮಾ ವೃತ್ತಿ ಬಗ್ಗೆ ಅವರಿಗೆ ಭಕ್ತಿ ಮತ್ತು ಗೌರವ. ಉಡುಗೆ ತೊಡುಗೆಯಲ್ಲಿ ಡಿ. ರಾಜೇಂದ್ರ ಬಾಬು ಸದಾ ಟಿಪ್ ಟಾಪ್. ಅರ್ಧ ತೋಳಿನ ಅಂಗಿ, ಇನ್​​​​​​​​​​​​​​​​​​​​ಶರ್ಟ್, ಬ್ಲ್ಯಾಕ್ ಜಿಪ್ ಶೂ ಇದರೊಂದಿಗೆ ಆತ್ಮೀಯತೆ, ನಗುಮೊಗದಿಂದ ಎಲ್ಲರನ್ನೂ ಸೆಳೆಯುತ್ತಿದ್ದ ಅವರು 3 ನವೆಂಬರ್ 2013 ರಂದು ಇಹಲೋಕ ತ್ಯಜಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.