ETV Bharat / sitara

ದೃಶ್ಯಂ 2 ಸಿನಿಮಾ ಮೂಲಕ ಮತ್ತೆ ಒಂದಾದ ರವಿಚಂದ್ರನ್-ಪಿ.ವಾಸು - ದೃಶ್ಯ 2

'ದೃಶ್ಯ' ಚಿತ್ರವನ್ನು ನಿರ್ಮಿಸಿದ್ದ ಎ4 ಎಂಟರ್‍ಟೈನ್‍ಮೆಂಟ್ ಸಂಸ್ಥೆಯೇ ಈ ಚಿತ್ರವನ್ನೂ ಕನ್ನಡಕ್ಕೆ ರಿಮೇಕ್ ಮಾಡುತ್ತಿದೆ. ಪಿ.ವಾಸು ಅವರೇ ಮುಂದುವರೆದ ಭಾಗವನ್ನು ನಿರ್ದೇಶಿಸಲಿದ್ದಾರೆ. ಅಷ್ಟೇ ಅಲ್ಲ, ಮೂಲ ಚಿತ್ರದಲ್ಲಿ ನಟಿಸಿದ್ದ ವಿ.ರವಿಚಂದ್ರನ್, ನವ್ಯ ನಾಯರ್, ಆರೋಹಿ ನಾರಾಯಣ್, ಪ್ರಭು, ಆಶಾ ಶರತ್ ಮತ್ತು ಉನ್ನತಿ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ.

Ravichandran and P Vasu to team up for Kannada remake of Drishyam-2
ದೃಶ್ಯ 2 ಸಿನಿಮಾ ಮೂಲಕ ಮತ್ತೆ ಒಂದಾದ ರವಿಚಂದ್ರನ್- ಪಿ.ವಾಸು
author img

By

Published : Apr 14, 2021, 12:31 PM IST

ಯಾವಾಗ ಮಲಯಾಳಂನಲ್ಲಿ 'ದೃಶ್ಯಂ 2' ಚಿತ್ರ ಹಿಟ್ ಆಯಿತೋ, ಆ ಚಿತ್ರವೂ ಕನ್ನಡದಲ್ಲಿ ರಿಮೇಕ್ ಆಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಏಕೆಂದರೆ, ದೃಶ್ಯಂ ಚಿತ್ರವು ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ ರಿಮೇಕ್ ಆಗಿತ್ತು. ಪಿ.ವಾಸು ನಿರ್ದೇಶನದ ಈ ಚಿತ್ರ ವಿ. ರವಿಚಂದ್ರನ್​ ಅವರಿಗೆ ಮತ್ತೊಂದು ಬ್ರೇಕ್​ ತಂದುಕೊಟ್ಟಿತ್ತು. ಈಗ ಅದರ ಮುಂದುವರೆದ ಭಾಗವೂ ಸಹ ಕನ್ನಡದಲ್ಲಿ ಬರಲು ತಯಾರಾಗುತ್ತಿದೆ.

'ದೃಶ್ಯ' ಚಿತ್ರವನ್ನು ನಿರ್ಮಿಸಿದ್ದ ಎ4 ಎಂಟರ್‍ಟೈನ್‍ಮೆಂಟ್ ಸಂಸ್ಥೆಯೇ ಈ ಚಿತ್ರವನ್ನೂ ಕನ್ನಡಕ್ಕೆ ರಿಮೇಕ್ ಮಾಡುತ್ತಿದೆ. ಪಿ. ವಾಸು ಅವರೇ ಮುಂದುವರೆದ ಭಾಗವನ್ನು ನಿರ್ದೇಶಿಸಲಿದ್ದಾರೆ. ಮೂಲ ಚಿತ್ರದಲ್ಲಿ ನಟಿಸಿದ್ದ ವಿ.ರವಿಚಂದ್ರನ್, ನವ್ಯ ನಾಯರ್, ಆರೋಹಿ ನಾರಾಯಣ್, ಪ್ರಭು, ಆಶಾ ಶರತ್ ಮತ್ತು ಉನ್ನತಿ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ಒಂದು ಪ್ರಮುಖ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರದ ಪ್ರೀ ಪ್ರೋಡಕ್ಷನ್​ ಕೆಲಸಗಳು ಈಗಾಗಲೇ ಶುರುವಾಗಿದೆ. ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಈ ಚಿತ್ರಕ್ಕೆ ಜಿ.ಎಸ್.ವಿ. ಸೀತಾರಾಂ ಅವರ ಛಾಯಾಗ್ರಹಣ ಇರಲಿದೆ.

ಇದನ್ನೂ ಓದಿ : ಸಿಲ್ವರ್ ಸ್ಕ್ರೀನ್​ನಲ್ಲಿ ಮಿಂಚಲು ರೆಡಿಯಾದ್ರು 'ಚಾರ್ ಮಿನಾರ್' ಚೆಲುವೆ

ತೆಲುಗಿನಲ್ಲೂ ದೃಶ್ಯಂ 2 ಮೂಡಿಬರುತ್ತಿದೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಜೀತು ಜೋಸಫ್ ಅವರೇ ಈ ಚಿತ್ರವನ್ನು ಸಹ ನಿರ್ದೇಶಿಸುತ್ತಿದ್ದಾರೆ. ವಿಕ್ಟರಿ ವೆಂಕಟೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.