ಕನ್ನಡದಲ್ಲಿ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ತಯಾರಾಗುತ್ತಿವೆ. ಆ ಚಿತ್ರಗಳಿಗೆ ಒಳ್ಳೆಯ ಪ್ರಶಂಸೆ ಕೂಡಾ ದೊರೆತಿದೆ. ಮಕ್ಕಳು ನಟಿಸಿರುವ 'ಗಿರ್ಮಿಟ್' ಸಿನಿಮಾ ನವೆಂಬರ್ 8 ರಂದು ಬಿಡುಗಡೆಯಾಗಿತ್ತು. ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯದಿದ್ದಕ್ಕೆ ನಿರ್ದೇಶಕ ರವಿ ಬಸ್ರೂರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಗೀತ ನಿರ್ದೇಶನದ ಜೊತೆ ಚಿತ್ರ ನಿರ್ದೇಶನಕ್ಕೂ ಮುಂದಾದ ರವಿ ಬಸ್ರೂರು ಅವರಿಗೆ ಹೊಳೆದದ್ದು ಮಕ್ಕಳನ್ನು ಬಳಸಿಕೊಂಡು ಯಾವುದಾದರೂ ಸಿನಿಮಾ ಮಾಡಬೇಕು ಎಂಬ ಐಡಿಯಾ. ಕೊನೆಗೂ ಅಷ್ಟೂ ಮಕ್ಕಳನ್ನೂ ಒಂದುಗೂಡಿಸಿ ಆ ಪ್ರಯತ್ನ ಮಾಡೇ ಬಿಟ್ರು. ವಿಮರ್ಶಕರಿಂದಲೂ ಚಿತ್ರ ಮೆಚ್ಚುಗೆ ಪಡೆದಿತ್ತು. ಆದರೆ ಸಿನಿಮಾ ನೋಡಲು ಥಿಯೇಟರ್ಗೆ ಪ್ರೇಕ್ಷಕರು ಬರದಿದ್ದಕ್ಕೆ ರವಿ ಬಸ್ರೂರು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ನೋವನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಮನನೊಂದು ನಿರ್ದೇಶಕ ರವಿ ಬಸ್ರೂರು ಕಣ್ಣೀರು ಹಾಕಿದ್ದಾರೆ.
'ಇದು ಒಂದೊಳ್ಳೆ ಮಕ್ಕಳ ಸಿನಿಮಾ, ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸೋಕೆ ಇಂತಹ ಪ್ರಯತ್ನ ಮಾಡಿದ್ದೆ, ನಾನು ಆಲ್ಬಮ್ ಹಾಡುಗಳನ್ನು ಮಾಡುವಾಗಲೂ ನಮ್ಮ ಭಾಷೆ, ನಮ್ಮ ಊರು ಎಂದು ಯಾರಿಗೆ ಅಭಿಮಾನಿ ಇರುತ್ತದೆಯೋ ಅಂತವರನ್ನು ಬೆಳಕಿಗೆ ತರುವ ಪ್ರಯತ್ನಿ ಮಾಡಿದ್ದೆ. ನನ್ನನ್ನು ಬೆಳಕಿಗೆ ತಂದಿರುವ ಎಷ್ಟೋ ಜನರಿದ್ದಾರೆ. ಆದರೆ ಅವರಿಗೆ 280 ಮಕ್ಕಳ ಪ್ರತಿಭೆ ಕಾಣಸಿಲಿಲ್ಲ. 'ಗಿರ್ಮಿಟ್' ಒಳ್ಳೆ ಸಿನಿಮಾ ಆಗಿದ್ರು ಅನ್ನು ನೋಡೋಕೆ ಥಿಯೇಟರ್ನತ್ತ ಯಾರೂ ಬರುತ್ತಿಲ್ಲ ಎಂದು ನಿರ್ದೇಶಕ ರವಿ ಬಸ್ರೂರು ಅಳಲು ತೋಡಿಕೊಂಡಿದ್ದಾರೆ.