ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕಳೆದ ವರ್ಷ ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ ಸಾಕಷ್ಟು ದಾಖಲೆ ಸೃಷ್ಟಿಸಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿತ್ತು.
ಮತ್ತೆ ಕೆಜಿಎಫ್ ಭಾಗ 2 ರ ಮೂಲಕ ಕಮಾಲ್ ಮಾಡಲು ಹೊರಟಿದ್ದು ಮೊದಲ ಭಾಗ ನೋಡಿದ ಎಲ್ಲರೂ ಎರಡನೇ ಭಾಗಕ್ಕಾಗಿ ಕಾಯುವಂತಾಗಿದೆ. ಚಾಪ್ಟರ್ 2ನ್ನು ಭರ್ಜರಿಯಾಗಿ ತೆರೆಗೆ ತರಲು ಪ್ರಶಾಂತ್ ನೀಲ್ ಹಾಗೂ ತಂಡ ಸಕಲ ಸಿದ್ಧತೆ ನಡೆಸಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದರಿಂದ ಪ್ರಶಾಂತ್ ನೀಲ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೆಜಿಎಫ್ ಚಾಪ್ಟರ್- 2 ಹಾಡುಗಳ ಸಂಯೋಜನೆಯಲ್ಲಿ ತೊಡಗಿದ್ದರು.
ಈ ಗ್ಯಾಪ್ನಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಮ್ಯೂಸಿಕ್ ಸ್ಟುಡಿಯೋವನ್ನು ಮಿರಮಿರ ಹೊಳೆಯುವ ಹಾಗೆ ಮಾಡಿದ್ದಾರೆ. ಅಂದರೆ ಬಸ್ರೂರು ತಮ್ಮ ಸ್ಟುಡಿಯೋವನ್ನು ರೀಡಿಸೈನ್ ಮಾಡಿಸಿದ್ದಾರೆ. ಕೆಂಪು ಹಾಗೂ ಬಿಳಿ ಕಾಂಬಿನೇಷನ್ನಲ್ಲಿ ಸ್ಟುಡಿಯೋ ಡಿಸೈನ್ ಮಾಡಿಸಿದ್ದಾರೆ. ಸ್ಟುಡಿಯೋ ತುಂಬೆಲ್ಲಾ ವಾದ್ಯಗಳ ಚಿತ್ರವನ್ನೂ ಬಿಡಿಸಿದ್ದಾರೆ. ಕೆಜಿಎಫ್ ಹಾಡುಗಳನ್ನು ಕಂಪೋಸ್ ಮಾಡಿದ್ದ ಸ್ಟುಡಿಯೋ ಈಗ ಹೊಸ ರೂಪ ಪಡೆದಿದ್ದು ಹೊಸ ಉತ್ಸಾಹದೊಂದಿಗೆ ಬಸ್ರೂರ್ ಟ್ಯೂನ್ ಕಂಪೋಸ್ ಮಾಡೋಕೆ ರೆಡಿಯಾಗಿದ್ದಾರೆ.
ಬಸ್ರೂರ್ ಅವರ ಹೊಸ ಸ್ಟುಡಿಯೋಗೆ ರಾಕಿ ಭಾಯ್ ಸೇರಿದಂತೆ ಇಡೀ ಟೀಂ ಭೇಟಿ ನೀಡಿದ್ದು ಸ್ಟುಡಿಯೋ ಹೊಸ ರೂಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ತಂಡದ ಸ್ಟುಡಿಯೋ ಭೇಟಿಯಿಂದ ಬಸ್ರೂರ್ ಅವರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆಯಂತೆ.