ತೆಲುಗು ಸುಂದರ ನಟ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅಭಿನಯದ 'ಮಿಡಲ್ ಕ್ಲಾಸ್ ಮೆಲೋಡಿಸ್' ಚಿತ್ರ ಇದೇ ನವೆಂಬರ್ 20 ರಂದು ಆನ್‌ಲೈನ್‌ನಲ್ಲಿ ರಿಲೀಸ್ ಆಗುತ್ತಿದೆ. ನಿನ್ನೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಇದಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ಫುಲ್ ಖುಶ್ ಆಗಿ ಟ್ವೀಟ್ ಮಾಡಿದ್ದಾರೆ.
'ಮಿಡಲ್ ಕ್ಲಾಸ್ ಮೆಲೋಡಿಸ್' ಚಿತ್ರದಲ್ಲಿ ವಿಜಯ್ ದೇವರ ಕೊಂಡ ಸಹೋದರ ಆನಂದ್ ದೇವರಕೊಂಡ ಜೊತೆಯಾಗಿ ನಟಿ ವರ್ಷಾ ಬೊಲ್ಲಮ್ಮ ಹೆಜ್ಜೆ ಹಾಕಿದ್ದಾರೆ. ಟ್ವೀಟರ್ನಲ್ಲಿ ಇವರ ಕಾಂಬಿನೇಷನ್ ಬಗ್ಗೆ ಮೆಚ್ಚಿರುವ ಕೊಡಗಿನ ಬೆಡಗಿ ರಶ್ಮಿಕಾ, ನಾನು ಸಿನಿಮಾ ನೋಡಿದ್ದೇನೆ.. ತುಂಬಾ ನಕ್ಕಿದ್ದೇನೆ .. ಆ ನನ್ನಿಬ್ಬರು ಸ್ನೇಹಿತರನ್ನು ದೊಡ್ಡ ಪರದೆಯಲ್ಲಿ ನೋಡತ್ತಿರುವುದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
-
I watched it.. Laughed a lot.. Was gripped by the film.. Couldn’t believe two of my friends were actually on that big screen.. Watching them do their craft made me feel happy, protective and loved.
— Rashmika Mandanna (@iamRashmika) November 10, 2020 " class="align-text-top noRightClick twitterSection" data="
">I watched it.. Laughed a lot.. Was gripped by the film.. Couldn’t believe two of my friends were actually on that big screen.. Watching them do their craft made me feel happy, protective and loved.
— Rashmika Mandanna (@iamRashmika) November 10, 2020I watched it.. Laughed a lot.. Was gripped by the film.. Couldn’t believe two of my friends were actually on that big screen.. Watching them do their craft made me feel happy, protective and loved.
— Rashmika Mandanna (@iamRashmika) November 10, 2020
ಆನಂದ್ ದೇವರಕೊಂಡ ಮತ್ತು ವರ್ಷಾ ಬೊಲ್ಲಮ್ಮ ಲವ್ ಯೂ. ನಿಮ್ಮ ಆ ಪಾತ್ರಗಳು ನನಗೆ ತುಂಬಾ ಮೆಚ್ಚುಗೆಯಾಗಿವೆ. ಪ್ರೇಕ್ಷಕರೂ ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ. ಚಿತ್ರದ ನಿರ್ದೇಶಕರಿಗೆ ಅಭಿನಂದನೆ ಎಂದಿದ್ದಾರೆ.
ಇನ್ನು ತನ್ನ ಸಹೋದರನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ವಿಜಯ್ ದೇವರಕೊಂಡ, ಸಿನಿಮಾ ಎಲ್ಲರ ಮನಸನ್ನು ಗೆಲ್ಲುವ ಭರವಸೆ ಇದೆ. ನಾನು ಈ ಚಿತ್ರದ ಬಗ್ಗೆ ಉತ್ಸುಕನಾಗಿದ್ದೇನೆ ಎಂದಿದ್ದಾರೆ.