ETV Bharat / sitara

ತನ್ನನ್ನ ನೋಡಲು 900 ಕಿ.ಮೀ ದೂರ ಬಂದ ಅಭಿಮಾನಿಯ ಹುಚ್ಚಾಟಕ್ಕೆ ರಶ್ಮಿಕಾ ಬೇಸರ

ನನ್ನನ್ನು ನೋಡಲು ನೀವು ಇಲ್ಲಿಗೆ ಹುಡುಕಿಕೊಂಡು ಬಂದ ವಿಚಾರ ನನ್ನ ಗಮನಕ್ಕೆ ಬಂತು. ದಯವಿಟ್ಟು ಈ ರೀತಿ ಯಾರೂ ಮಾಡಬೇಡಿ. ಅಲ್ಲದೇ ಇಷ್ಟು ದೂರ ಬಂದರೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ರಶ್ಮಿಕಾ ಬೇಸರ ಹೊರ ಹಾಕಿದ್ದಾರೆ. ಒಂದಲ್ಲಾ ಒಂದು ದಿನ ನಾನು ನಿಮ್ಮನ್ನು ಖಂಡಿತಾ ಭೇಟಿ ಮಾಡ್ತೇನೆ.. ನೀವು ಇರುವೆಡೆಯಿಂದಲೇ ನನಗೆ ನಿಮ್ಮ ಪ್ರೀತಿಯನ್ನು ತೋರಿಸಿ, ನಾನು ಖುಷಿ ಪಡುತ್ತೇನೆ..

rashimka
rashimka
author img

By

Published : Jun 27, 2021, 6:53 PM IST

ಬೆಂಗಳೂರು : ತಮ್ಮನ್ನು ಭೇಟಿಯಾಗಲು ತೆಲಂಗಾಣದಿಂದ ಸುಮಾರು 900 ಕಿ.ಮೀ. ದೂರದಲ್ಲಿರುವ ಕರ್ನಾಟಕದ ಕೊಡಗು ಜಿಲ್ಲೆಯ ತಮ್ಮ ನಿವಾಸಕ್ಕೆ ಬಂದ ಹುಚ್ಚು ಅಭಿಮಾನಿಯ ಬಗ್ಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

  • Guys it just came to my notice that one of you had travelled super far and have gone home to see me..
    Please don’t do something like that.. i feel bad that I didn’t get to meet you🥺 I really really hope to meet you one day❤️ but for now show me love here.. I’ll be happy! 🌸🥰

    — Rashmika Mandanna (@iamRashmika) June 27, 2021 " class="align-text-top noRightClick twitterSection" data=" ">

''ನನ್ನನ್ನು ನೋಡಲು ನೀವು ಇಲ್ಲಿಗೆ ಹುಡುಕಿಕೊಂಡು ಬಂದ ವಿಚಾರ ನನ್ನ ಗಮನಕ್ಕೆ ಬಂತು. ದಯವಿಟ್ಟು ಈ ರೀತಿ ಯಾರೂ ಮಾಡಬೇಡಿ'' ಎಂದು ರಶ್ಮಿಕಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಇಷ್ಟು ದೂರ ಬಂದರೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ರಶ್ಮಿಕಾ ಬೇಸರ ಹೊರ ಹಾಕಿದ್ದಾರೆ. 'ಒಂದಲ್ಲಾ ಒಂದು ದಿನ ನಾನು ನಿಮ್ಮನ್ನು ಖಂಡಿತಾ ಭೇಟಿ ಮಾಡ್ತೇನೆ.. ನೀವು ಇರುವೆಡೆಯಿಂದಲೇ ನನಗೆ ನಿಮ್ಮ ಪ್ರೀತಿಯನ್ನು ತೋರಿಸಿ, ನಾನು ಖುಷಿ ಪಡುತ್ತೇನೆ' ಎಂದು ರಶ್ಮಿಕಾ ಟ್ವೀಟ್​ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಆಕಾಶ್ ತ್ರಿಪಾಠಿ ಎಂಬ ತೆಲಂಗಾಣ ಮೂಲದ ಯುವಕ ಗೂಗಲ್ ಮೂಲಕ ಕೊಡಗಿಗೆ ನೆಚ್ಚಿನ ನಟಿ ರಶ್ಮಿಕಾ ನೋಡಲು ಪ್ರಯಾಣ ಬೆಳೆಸಿದ್ದ. ಆದರೆ, ಈ ವೇಳೆ ರಶ್ಮಿಕಾ ಮುಂಬೈನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಆ ಅಭಿಮಾನಿ ರಶ್ಮಿಕಾ ಮನೆ ಗೊತ್ತಾಗದೇ ಯಾವುದೇ ಬೇರೆ ಸ್ಥಳಕ್ಕೆ ತಲುಪಿದ್ದರು. ಈ ವೇಳೆ ಸಿಕ್ಕ ಸಿಕ್ಕ ಜನರನ್ನು ರಶ್ಮಿಕಾ ಮನೆ ಯಾವುದು ಎಂದು ವಿಚಾರಿಸಿದ್ದಾನೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಆಕಾಶ್​ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಆತನಿಗೆ ಪೊಲೀಸರು ಕೊಡಗಿನಲ್ಲಿ ಲಾಕ್​ಡೌನ್​ ಇದೆ. ತೆಲಂಗಾಣಕ್ಕೆ ವಾಪಸ್​ ಹೋಗು ಎಂದು ಸೂಚಿಸಿದ್ದಾರೆ. ಜೊತೆಗೆ ರಶ್ಮಿಕಾ ಸದ್ಯ ಶೂಟಿಂಗ್​ಗಾಗಿ ಮುಂಬೈಗೆ ತೆರಳಿದ್ದು, ಈಗ ಹೋದರೂ ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.