ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಸಹೋದರನ ವಿರುದ್ಧ ಅತ್ಯಾಚಾರ ಆರೋಪವೊಂದು ಕೇಳಿ ಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಟಿಯ ಸಹೋದರ ಕೀರ್ತಿ ಚಂದ್ರ, ತನ್ನ ತಂಗಿ ಖ್ಯಾತ ನಟಿ. ನಾನು ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿ ವಂಚಿಸಿದ್ದಾರೆ. ಬಲವಂತವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಮ್ಯಾಟರಿಮೋನಿ ವೆಬ್ಸೈಟ್ Shaadi.comನಲ್ಲಿ ಯುವತಿ ಸ್ವವಿವರ ಹಾಕಿದ್ದರು. 2021ರ ಮೇ ತಿಂಗಳಲ್ಲಿ ಯುವತಿಗೆ ಕೀರ್ತಿ ಚಂದ್ರ@ವಿರಾಜ್ ಪರಿಚಯವಾಗಿತ್ತು. ನಾನು ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ. ನನ್ನ ತಂಗಿ ಫೇಮಸ್ ಸಿನಿ ತಾರೆ ಎಂದು ಹೇಳಿಕೊಂಡಿದ್ದಾನೆ.
ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿ ಪರಸ್ಪರ ಇಬ್ಬರು ಚಾಟಿಂಗ್ ಮಾಡಲು ಆರಂಭಿಸಿದ್ದಾರೆ. ಅದೇ ಸಲುಗೆಯಲ್ಲಿ ಕೀರ್ತಿ ಚಂದ್ರನಿಗೆ ಯುವತಿ ಹುಟ್ಟು ಹಬ್ಬಕ್ಕೆ ಐ ಫೋನ್, ಲ್ಯಾಪ್ಟಾಪ್, ಆ್ಯಪಲ್ ವಾಚ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾಳಂತೆ.
ಇದಾದ ಬಳಿಕ ಜನವರಿ 18ರಂದು ಜಯನಗರದ ಖಾಸಗಿ ಹೋಟೆಲ್ಗೆ ಯುವತಿಯನ್ನು ಕರೆಸಿಕೊಂಡಿದ್ದಾನೆ. ಸುಳ್ಳು ಭರವಸೆ ನೀಡಿ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿ ಮೋಸ ಮಾಡಿದ್ದಾನೆ.
ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಆರೋಪಿ ವಿರುದ್ಧ ವಿರುದ್ಧ ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ಮನವಿ ಮಾಡಿದ್ದಾರೆ. ಸದ್ಯ ಈ ನಟಿಯ ಸಹೋದರನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಅಂಥ ಕೆಲಸ ಮಾಡಿದರೆ ಇದೇ ಗತಿ ಬರುತ್ತೆ'- ಟ್ರೋಲಿಗರ ಬಾಯಿಗೆ ಸಿಕ್ಕ ರಾಜ್ ಕುಂದ್ರಾ ಹೊಸ ಅವತಾರ