ಸಿಂಬಾ ಚಿತ್ರದ ಭರ್ಜರಿ ಸಕ್ಸಸ್ ಅಲೆಯಲ್ಲಿರುವ ರಣ್ವೀರ್ ಸಿಂಗ್ ತಮ್ಮ ಮುಂಬರುವ ಸಿನಿಮಾ ಗಲ್ಲಿ ಬಾಯ್ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ನ ಈ ಬಿಂದಾಸ್ ನಟ ವಿಚಿತ್ರ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಲ್ಯಾಕ್ಮೆ ಫ್ಯಾಷನ್ ವೀಕ್ ಫಿನಾಲೆಯಲ್ಲಿ ರಣ್ವೀರ್ ಸಿಂಗ್ ಸ್ಟೈಲಾಗಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಇಷ್ಟೇ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಅತ್ಯುತ್ಸಾಹದಲ್ಲಿ ತಮ್ಮ ಚಿತ್ರದ ಹಾಡನ್ನು ಹಾಡುತ್ತಾ ರಣ್ವೀರ್ ಮುನ್ಸೂಚನೆ ಇಲ್ಲದೆ ಮುಂದಿದ್ದ ಪ್ರೇಕ್ಷಕರ ಮೇಲೆ ಹಾರಿದ್ದಾರೆ.
The crowd couldn’t get enough of @RanveerOfficial ’s impromptu performance and nor can we. Catch the Gully Boy at #LFWSR19 #5daysoffashion #allinclusiveatlfw @ILoveLakme @NexaExperience pic.twitter.com/0Ke4zsd8G5
— Lakmé Fashion Week (@LakmeFashionWk) February 3, 2019 " class="align-text-top noRightClick twitterSection" data="
">The crowd couldn’t get enough of @RanveerOfficial ’s impromptu performance and nor can we. Catch the Gully Boy at #LFWSR19 #5daysoffashion #allinclusiveatlfw @ILoveLakme @NexaExperience pic.twitter.com/0Ke4zsd8G5
— Lakmé Fashion Week (@LakmeFashionWk) February 3, 2019The crowd couldn’t get enough of @RanveerOfficial ’s impromptu performance and nor can we. Catch the Gully Boy at #LFWSR19 #5daysoffashion #allinclusiveatlfw @ILoveLakme @NexaExperience pic.twitter.com/0Ke4zsd8G5
— Lakmé Fashion Week (@LakmeFashionWk) February 3, 2019
ರಣ್ವೀರ್ ಅವರ ಅನಿರೀಕ್ಷಿತ ನಡೆಗೆ ನೆರೆದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಸೂಚನೆ ಇಲ್ಲದೆ ಹಾರಿದ ಪರಿಣಾಮ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪತ್ರಿಕೆಯೊಂದು ಈ ವಿಚಾರವನ್ನು ವರದಿ ಮಾಡಿದ್ದು, ಇದನ್ನು ಆಧರಿಸಿ ನೆಟಿಜನ್ಸ್ ರಣ್ವೀರ್ ಅನಿರೀಕ್ಷಿತ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.