ETV Bharat / sitara

ಕಪಿಲ್​ ಅವತಾರ ಎತ್ತಿದ ರಣವೀರ್​.. ಫಸ್ಟ್​ ಲುಕ್​ಗೆ ಅಭಿಮಾನಿಗಳು ಫಿದಾ - birthday

ರಣ್​ವೀರ್ ಸಿಂಗ್ ತಮ್ಮ ಜನ್ಮದಿನದಂದು '83' ಚಿತ್ರದ ಲುಕ್ ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ವೀಕ್ಷಕರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ranveer
author img

By

Published : Jul 6, 2019, 12:27 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಕಪಿಲ್ ದೇವ್​ ಜೀವನ ಆಧಾರಿತ ಸಿನಿಮಾವೊಂದು ತೆರೆಗೆ ಬರುತ್ತಿರುವುದು ಗೊತ್ತೇ ಇದೆ. ಕಪಿಲ್​ ಪಾತ್ರ ನಿರ್ವಹಿಸುತ್ತಿರುವ ನಟ ರಣವೀರ್​ ಸಿಂಗ್​ ತಮ್ಮ ಹುಟ್ಟು ಹಬ್ಬದ ನಿಮಿತ್ತ ಸಿನಿಮಾದ ಲುಕ್​ ಅನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಣ್​ವೀರ್ ತಮ್ಮ ಮುಂಬರುವ ಚಿತ್ರದಲ್ಲಿ ಕಪಿಲ್​ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ ಚಿತ್ರ ತಂಡವು ಚಿತ್ರ ನಿರ್ಮಾಣದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿತ್ತು. ಆದರೆ, ಈಗ ತಮ್ಮ ಲುಕ್ ಬಿಡುಗಡೆ ಮಾಡುವ ಮೂಲಕ ರಣ್​ವೀರ್ ವೀಕ್ಷಕರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ರಣ್​ವೀರ್
'83' ಚಿತ್ರದ ರಣ್​ವೀರ್​ ಫಸ್ಟ್ ಲುಕ್

34ನೇ ಜನ್ಮದಿನವನ್ನು ಆಚರಿಸುತ್ತಿರುವ ಈ ನಟ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, "ಈ ವಿಶೇಷ ದಿನದಂದು ಹರಿಯಾಣ ಹರಿಕೇನ್ ಕಪಿಲ್​ ದೇವ್ ಅನ್ನು ಪ್ರಸ್ತುತಪಡಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಬಿಳಿ ಜೆರ್ಸಿ ಧರಿಸಿ, ಚೆಂಡನ್ನು ಗಾಳಿಯಲ್ಲಿ ತೂರುತ್ತಾ, ಕ್ಯಾಮೆರಾವನ್ನು ದಿಟ್ಟಿಸುತ್ತಿರುವ '83' ಚಿತ್ರದ ರಣ್​ವೀರ್ ಲುಕ್, ಯೌವನದ ಕಪಿಲ್​ ದೇವ್ ಲುಕ್​ಗೆ ಹೋಲಿಕೆಯಾಗುತ್ತಿದೆ.

1983ರ ವಿಶ್ವಕಪ್​ನಲ್ಲಿ ಭಾರತದ ಐತಿಹಾಸಿಕ ಗೆಲುವನ್ನು ಆಧರಿಸಿ ತಯಾರಾಗುತ್ತಿರುವ '83' ಚಿತ್ರದಲ್ಲಿ ರಣ್​ವೀರ್ ಸಿಂಗ್, ಕಪಿಲ್ ದೇವ್​ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಕಬೀರ್ ಖಾನ್ ನಿರ್ದೇಶನದಲ್ಲಿ, ರಿಲಯನ್ಸ್ ಎಂಟರ್​ಟೈನ್​ಮೆಂಟ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ, ಶಕೀಬ್​ ಸಲೀಮ್ ಮೊದಲಾದವರು ತಾರಾ ಬಳಗದಲ್ಲಿದ್ದಾರೆ. ಸದ್ಯ ಲಂಡನ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

Intro:Body:

ಕಪಿಲ್​ ಅವತಾರ ಎತ್ತಿದ ರಣವೀರ್​.. ಫಸ್ಟ್​ ಲುಕ್​ಗೆ ಅಭಿಮಾನಿಗಳು ಫಿದಾ

ರಣ್​ವೀರ್ ಸಿಂಗ್ ತಮ್ಮ ಜನ್ಮದಿನದಂದು '83' ಚಿತ್ರದ ಲುಕ್ ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ವೀಕ್ಷಕರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಕಪಿಲ್ ದೇವ್​ ಜೀವನ ಆಧಾರಿತ ಸಿನಿಮಾವೊಂದು ತೆರೆಗೆ ಬರುತ್ತಿರುವುದು ಗೊತ್ತೇ ಇದೆ. ಕಪಿಲ್​ ಪಾತ್ರ ನಿರ್ವಹಿಸುತ್ತಿರುವ ನಟ ರಣವೀರ್​ ಸಿಂಗ್​ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸಿನಿಮಾದ ತಮ್ಮ ಲುಕ್​ ಅನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ರಣ್​ವೀರ್ ತಮ್ಮ ಮುಂಬರುವ ಚಿತ್ರದಲ್ಲಿ ಕಪಿಲ್​ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ ಚಿತ್ರ ತಂಡವು ಚಿತ್ರ ನಿರ್ಮಾಣದ ಫೊಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿತ್ತು; ಆದರೆ ಈಗ ತಮ್ಮ ಲುಕ್ ಬಿಡುಗಡೆ ಮಾಡುವ ಮೂಲಕ ರಣ್​ವೀರ್ ವೀಕ್ಷಕರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. 

34ನೇ ಜನ್ಮದಿನವನ್ನು ಆಚರಿಸುತ್ತಿರುವ ಈ ನಟ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಶೇರ್ ಮಾಡಿ, "ಈ ವಿಶೇಷ ದಿನದಂದು ಹರ್ಯಾಣಾ ಹರಿಕೇನ್ ಕಪಿಲ್​ ದೇವ್ ಅನ್ನು ಪ್ರಸ್ತುತಪಡಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಬಿಳಿ ಜೆರ್ಸಿ ಧರಿಸಿ, ಚೆಂಡನ್ನು ಗಾಳಿಯಲ್ಲಿ ತೂರುತ್ತಾ, ಕ್ಯಾಮೆರಾವನ್ನು ದಿಟ್ಟಿಸುತ್ತಿರುವ '83' ಚಿತ್ರದ ರಣ್​ವೀರ್ ಲುಕ್, ಯೌವನದ ಕಪಿಲ್​ ದೇವ್ ಲುಕ್​ಗೆ ಹೋಲಿಕೆಯಾಗುತ್ತಿದೆ.

1983ರ ವಿಶ್ವಕಪ್​ನಲ್ಲಿ ಭಾರತದ  ಐತಿಹಾಸಿಕ ಗೆಲುವನ್ನು ಆಧರಿಸಿ ತಯಾರಾಗುತ್ತಿರುವ '83' ಚಿತ್ರದಲ್ಲಿ ರಣ್​ವೀರ್ ಸಿಂಗ್, ಕಪಿಲ್ ದೇವ್​ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಕಬೀರ್ ಖಾನ್ ನಿರ್ದೇಶನದಲ್ಲಿ, ರಿಲಯನ್ಸ್ ಎಂಟರ್​ಟೈನ್​ಮೆಂಟ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ, ಶಕೀಬ್​ ಸಲೀಮ್ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಸದ್ಯ ಲಂಡನ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.