ರಾನು ಮಂಡಲ್ ಒಂದೇ ದಿನದಲ್ಲಿ ವಿಶ್ವದ ಸಂಗೀತ ಪ್ರಿಯರನ್ನು ತನ್ನತ್ತ ಸೆಳೆದುಕೊಂಡ ಮಹಿಳೆ. ಇದಕ್ಕೆ ಕಾರಣ ಅವರು ರೈಲ್ವೆ ನಿಲ್ದಾಣದಲ್ಲಿ ಹಾಡಿದ್ದ ಲತಾ ಮಂಗೇಶ್ಕರ್ ಏಕ್ ಪ್ಯಾರ್ ಕಾ ನಗಮಾ ಹೈ ಹಾಡು.
ರಾನು ಇದೀಗ ಲತಾ ಮಗೇಶ್ಕರ್ ಬಗ್ಗೆ ತನ್ನ ಮನದಾಳ ಬಿಚ್ಚಿಟ್ಟು, ಲತಾಜೀ ನನಗೆ ಯಾವಾಗಲೂ ಹಿರಿಯರು ಮತ್ತು ಅವರು ಹಾಡುಗಳೆಂದರೆ ನನಗೆ ಬಾಲ್ಯದಿಂದಲೂ ಇಷ್ಟ ಎಂದಿದ್ದಾರೆ.
ಇನ್ನು ರಾನು ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್, ನನ್ನ ಹೆಸರಿಂದ ಯಾರಾದರೂ ಅನುಕೂಲಗಳನ್ನು ಪಡೆದುಕೊಂಡರೆ ಅದು ನನ್ನ ಅದೃಷ್ಟ. ಆದ್ರೆ ಯಾರನ್ನಾದರು ಅನುಕರಣೆ ಮಾಡುವುದರಿಂದ ಅದರಲ್ಲಿ ನೈಜತೆ ಮತ್ತು ಸ್ವಂತತೆ ಇರುವುದಿಲ್ಲ. ಅಲ್ಲದೆ ಅದರಿಂದ ಯಶಸ್ಸು ಸಿಗುವುದು ಕೂಡ ಕಡಿಮೆ ಎಂದಿದ್ದಾರೆ.
ಬಾಲಿವುಡ್ ಸಿಂಗರ್ ಅಂಡ್ ಮ್ಯೂಸಿಕ್ ಕಂಪೋಸರ್ ಆಗಿರುವ ಹಿಮೇಶ್, ರಾನು ಮಂಡಲ್ ಧ್ವನಿಯಲ್ಲಿ ಮೂರು ಟ್ರಾಕ್ಗಳನ್ನು ಹಾಡಿಸಿದ್ದು ರಾತ್ರೋರಾತ್ರಿ ರಾನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದರು.