ಈ ಹಿಂದೆ ಕನ್ನಡಕ್ಕೆ ಡಬ್ಬಿಂಗ್ ಬೇಡ ಎಂದು ಹಲವಾರು ಸಂಘ ಸಂಸ್ಥೆಗಳ ಮತ್ತು ಚಂದನವನದ ಹಲವಾರು ತಾರೆಯರು ಪ್ರತಿಭಟನೆ ನಡೆಸಿದ್ರು. ಆದರೆ, ಕೆಲವು ದಿನಗಳ ನಂತರ ಡಬ್ಬಿಂಗ್ ಸಿನಿಮಾಗಳು ಕಾನೂನು ರಕ್ಷಣೆಯಲ್ಲಿ ಕನ್ನಡಕ್ಕೆ ಲಗ್ಗೆ ಇಟ್ಟಿದ್ವು. ಇಷ್ಟಿದ್ರೂ ಹೇಳಿಕೊಳ್ಳುವ ಮಟ್ಟದಲ್ಲಿ ಗಳಿಕೆ ಮಾಡಲಿಲ್ಲ. ಕಾಲಿವುಡ್ ಸ್ಟಾರ್ ನಟ ಅಜೀತ್ ಅವರ ಕೆಲ ಸಿನಿಮಾಗಳು ಸಹ ಕನ್ನಡಕ್ಕೆ ಬಂದಿವೆ. ಅಲ್ಲದೆ ರಜನಿಕಾಂತ್ ಅವರ ‘ಪೇಟಾ’ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಸಿನಿಮಾಕ್ಕೆ ರಜಿನಿಕಾಂತ್ ಡಬ್ಬಿಂಗ್ ಮಾಡುತ್ತಾರೆ ಅಂತಾ ಹೇಳಲಾಗಿತ್ತು. ಆದರೆ, ಆ ಎರಡೂ ಸಹ ಕೂಡ ನೆರವೇರಲಿಲ್ಲ.
ಇದೀಗ ತೆಲುಗಿನ ಬ್ಲಾಕ್ ಬ್ಲಸ್ಟರ್ ಮೂವಿ ರಂಗಸ್ತಲಂ ಇದೇ ಜುಲೈ 5ರಂದು ಕನ್ನಡಕ್ಕೆ ಡಬ್ ಆಗಿ ತೆರೆಗೆ ಅಪ್ಪಳಿಸಲಿದೆಯಂತೆ. ಈ ಸಿನಿಮಾ 2018ರಲ್ಲಿ ತೆಲುಗಿನಲ್ಲಿ ರಿಲೀಸ್ ಆಗಿ 210 ಕೋಟಿ ದೋಚಿತ್ತು. ಸದ್ಯ ರಂಗಸ್ತಲಂ ಸಿನಿಮಾವನ್ನು ಕನ್ನಡದಲ್ಲಿ ರಂಗಸ್ಥಳ ಅಂತಾ ನಾಮಕರಣ ಮಾಡಿ ಬಿಡುಗಡೆ ಮಾಡಲಾಗುತ್ತಿದೆಯಂತೆ. ಈ ಸಿನಿಮಾ ಆಶು ಬೆದ್ರ ನಿರ್ಮಾಣದಲ್ಲಿ ಬಿಡುಗಡೆಗೆ ಸಿದ್ದವಾಗಿದೆ.
-
Watch @IamJagguBhai as Phaneendra Bhoopathi Teaser from #Rangasthala Kannada Movie.https://t.co/FCAZrLoWvo#ರಂಗಸ್ಥಳ #RamCharan #Sukumar @ThisIsDSP @MythriOfficial @JMovies2019 @LahariMusic #RangasthalamInKannada
— Lahari Music (@LahariMusic) July 1, 2019 " class="align-text-top noRightClick twitterSection" data="
">Watch @IamJagguBhai as Phaneendra Bhoopathi Teaser from #Rangasthala Kannada Movie.https://t.co/FCAZrLoWvo#ರಂಗಸ್ಥಳ #RamCharan #Sukumar @ThisIsDSP @MythriOfficial @JMovies2019 @LahariMusic #RangasthalamInKannada
— Lahari Music (@LahariMusic) July 1, 2019Watch @IamJagguBhai as Phaneendra Bhoopathi Teaser from #Rangasthala Kannada Movie.https://t.co/FCAZrLoWvo#ರಂಗಸ್ಥಳ #RamCharan #Sukumar @ThisIsDSP @MythriOfficial @JMovies2019 @LahariMusic #RangasthalamInKannada
— Lahari Music (@LahariMusic) July 1, 2019
2018ರ ಮಾರ್ಚ್ ತಿಂಗಳಿನಲ್ಲಿ ಸುಕುಮಾರ್ ನಿರ್ದೇಶನ ಮಾಡಿ, ರಾಮ್ಚರಣ್ ನಾಯಕನಾಗಿ ಅಭಿನಯಿಸಿದ್ದ ತೆಲುಗಿನ ರಂಗಸ್ತಲಂ ಸಿನಿಮಾದಲ್ಲಿ, ಸಮಂತಾ ಅಕ್ಕಿನೇನಿ, ಅನಸೂಯಾ ಭಾರದ್ವಾಜ್, ಆದಿ ಪಿನಿಶೆಟ್ಟಿ, ಪ್ರಕಾಶ್ ರಾಜ್, ಜಗಪತಿ ಬಾಬು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರು. ಈ ಸಿನಿಮಾಕ್ಕೆ ದೇವಿ ಶ್ರೀಪ್ರಸಾದ್ ಸಂಗೀತ ನೀಡಿದ್ರು.
ಒಂದು ಮಾತಂತೂ ಸತ್ಯ. ಈವರೆಗೂ ಕನ್ನಡಕ್ಕೆ ಡಬ್ ಆದ ಪರಭಾಷಾ ಸಿನಿಮಾಗಳು ಗೆಲುವು ಸಾಧಿಸಿಲ್ಲ. ಇದೀಗ ಒಂದೂವರೆ ವರ್ಷದ ಹಿಂದೆ ಬಿಡುಗಡೆಯಾದ ರಂಗಸ್ತಲಂ ತೆಲುಗು ಸಿನಿಮಾ ಭಾಷೆ ಬದಲಾಯಸಿಕೊಂಡು ಕನ್ನಡಕ್ಕೆ ಬರುತ್ತಿದೆ. ಈ ಮೂವಿ ಎಷ್ಟರ ಮಟ್ಟಿಗೆ ಸಾಧನೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.