ETV Bharat / entertainment

ಹನುಮಾನ್​ ಪಾತ್ರದಲ್ಲಿ ಪ್ರಭಾಸ್​? ಹೊಂಬಾಳೆ ಫಿಲ್ಮ್ಸ್​​ನಿಂದ ಸರ್ಪೈಸ್​​: ನಾಳೆ ಫಸ್ಟ್ ಲುಕ್ ರಿಲೀಸ್​ - HOMBALE FILMS NEW MOVIE

ಹೊಂಬಾಳೆ ಫಿಲ್ಮ್ಸ್​ನಿಂದ ಹೊಸ ಪ್ರಾಜೆಕ್ಟ್​​​ ಘೋಷಣೆಯಾಗಿದೆ. ಕುತೂಹಲ ಕೆರಳಿಸುವಂತ ಪೋಸ್ಟರ್​ ಕೂಡಾ ಅನಾವರಣಗೊಂಡಿದೆ.

New movie announcement from Hombale Films
ಹೊಂಬಾಳೆ ಫಿಲ್ಮ್ಸ್​​ನಿಂದ ಹೊಸ ಸಿನಿಮಾ ಘೋಷಣೆ (Film Poster)
author img

By ETV Bharat Entertainment Team

Published : Nov 15, 2024, 2:00 PM IST

ಅದ್ಧೂರಿ, ಹಿಟ್​ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ನಿಂದ ಹೊಸ ಪ್ರಾಜೆಕ್ಟ್​​​ ಘೋಷಣೆಯಾಗಿದೆ. ಕುತೂಹಲ ಕೆರಳಿಸುವಂತ ಪೋಸ್ಟರ್ ಅನಾವರಣಗೊಳಿಸಿ ಇಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ನಾಳೆ ಚಿತ್ರದ ಫಸ್ಟ್ ಲುಕ್​​ ಹೊರಬೀಳಲಿದೆ.

ಇತ್ತೀಚೆಗಷ್ಟೇ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​​ ಜೊತೆಗೆ ಮೂರು ಹೊಸ ಸಿನಿಮಾಗಳನ್ನು ಘೋಷಿಸುವ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಸಖತ್​ ಸದ್ದು ಮಾಡಿದ್ದ ದಕ್ಷಿಣ ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯೀಗ ಒಂದು ಅನೌನ್ಸ್​​ಮೆಂಟ್​​​​ ಮಾಡಿದೆ. ಈ ಅನೌನ್ಸ್​​ಮೆಂಟ್​ ಆ ಮೂರು ಚಿತ್ರಗಳಿಗೆ ಸಂಬಂಧಿಸಿದ್ದೇ? ಅಥವಾ ಸಂಪೂರ್ಣ ಹೊಸ ಸಿನಿಮಾವೇ? ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದ್ದು, ಅಶ್ವಿನ್​ ಕುಮಾರ್​ ಆ್ಯಕ್ಷನ್​​ ಕಟ್​ ಹೇಳಲಿದ್ದಾರೆ. ಪೌರಾಣಿಕ ಪಾತ್ರದ ಕೈಯುಳ್ಳ ಪೋಸ್ಟರ್​​ ನೋಡುಗರ ಕುತೂಹಲ ಕೆರಳಿಸಿದೆ. ನಾಳೆ ಮಧ್ಯಾಹ್ನ 3:33ಕ್ಕೆ ಚಿತ್ರದ ಫಸ್ಟ್ ಲುಕ್​ ಹೊರಬೀಳಲಿದೆ. ನಂಬಿಕೆಗೆ ಸವಾಲು ಎದುರಾಗಾದ, ಅವನು ಕಾಣಿಸಿಕೊಳ್ಳುತ್ತಾನೆ​​ ಎಂಬ ಕ್ಯಾಪ್ಷನ್​​​ ಸಿನಿಮಾ ಸುತ್ತಲಿನ ನಿರೀಕ್ಷೆ, ಕುತೂಹಲವನ್ನು ಹೆಚ್ಚಿಸಿದೆ. ಈ ಪೋಸ್ಟರ್ ಗಮಿಸಿದ್ರೆ ಸೂಪರ್ ಸ್ಟಾರ್​ ಪ್ರಭಾಸ್​ ಹನುಮಾನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಸದ್ಯ ಕೆಜಿಎಫ್ ನಿರ್ಮಾಪಕರಿಂದ ಅನಾವರಣಗೊಂಡಿರುವ ಸರ್​​ಪ್ರೈಸಿಂಗ್​​ ಪೋಸ್ಟರ್ ಗಮನಿಸಿದ ನೆಟ್ಟಿಗರು, ಅಭಿಮಾನಿಗಳು ಈ ಪೋಸ್ಟರ್ ಯಾವ ಪ್ರಾಜೆಕ್ಟ್‌ನಿಂದ ಬಂದಿದೆ ಎಂಬ ಗೊಂದಲದಲ್ಲಿದ್ದಾರೆ. ಇತ್ತೀಚೆಗಷ್ಟೇ ಘೋಷನೆಯಾಗಿರುವ ಮೂರು ಮೆಗಾ ಪ್ರಾಜೆಕ್ಟ್​​ಗಳಲ್ಲಿ ಯಾವುದಾದರೊಂದೇ ಅಥವಾ ಹೊಸ ಸಿನಿಮಾವೇ ಎಂಬುದು ನಾಳೆ ಸ್ಪಷ್ಟವಾಗಲಿದೆ. ಸದ್ಯ ನಿರ್ದೇಶಕರ ಮಾಹಿತಿ ಅಷ್ಟೇ ಇದ್ದು, ನಾಯಕ ನಟ ಮತ್ತು ಟೈಟಲ್​​ ನಾಳೆ ಹೊರಬೀಳುವ ಸಾಧ್ಯತೆ ಇದೆ. ಸದ್ಯ ಪೋಸ್ಟರ್​ ಕುರಿತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ಭೈರತಿ ರಣಗಲ್​: ಡಾಲಿ ಧನಂಜಯ್​ ಭರ್ಜರಿ ಡ್ಯಾನ್ಸ್; ಹೇಗಿದೆ ಸಿನಿಮಾ?

ಇದೇ ನವೆಂಬರ್​ 8ರಂದು ಹೊಂಬಾಳೆ ಫಿಲ್ಮ್ಸ್​ ಮೂರು ಪ್ರಾಜೆಕ್ಟ್​ಗಳನ್ನು ಅನೌನ್ಸ್​ ಮಾಡಿತ್ತು. ಪ್ಯಾನ್​ ಇಂಡಿಯಾ ಸ್ಟಾರ್​​ ಪ್ರಭಾಸ್​​ ನಾಯಕ ನಟ ಎಂಬುದರ ಜೊತೆಗೆ 2026, 2027, 2028ಕ್ಕೆ ಕ್ರಮವಾಗಿ ಸಿನಿಮಾಗಳು ಬಿಡುಗಡೆ ಆಗಲಿವೆ ಎಂಬುದನ್ನು ತಿಳಿಸಿತ್ತು. ಪೋಸ್ಟ್​ ಶೇರ್ ಮಾಡಿದ್ದ ಚಲನಚಿತ್ರ ನಿರ್ಮಾಣ ಸಂಸ್ಥೆ, ''ಅದ್ಭುತ ಸಿನಿಮೀಯ ಅನುಭವ ಒದಗಿಸುವ ಗುರಿಯನ್ನು ಹೊಂದಿರುವ 3 ಚಲನಚಿತ್ರಗಳನ್ನು ರೆಬೆಲ್ ಸ್ಟಾರ್ ಪ್ರಭಾಸ್​​ ಅವರೊಂದಿಗೆ ಸೇರಿ ಮಾಡಲು ನಾವು ಬಹಳ ಹೆಮ್ಮೆಪಡುತ್ತೇವೆ. ಮುಂದಿನ ನಡೆ ಅಪರಿಮಿತ. ಸಲಾರ್​ 2 ಸಿನಿಮಾದೊಂದಿಗೆ ಈ ಪಯಣ ಪ್ರಾರಂಭವಾಗುತ್ತಿದ್ದು, ರೆಡಿಯಾಗಿ'' ಎಂದು ಬರೆದುಕೊಂಡಿದ್ದರು. ಸಲಾರ್​ 2 ಸೇರಿ ಮತ್ತೆರಡು ಹೊಸ ಸಿನಿಮಾಗಳನ್ನು ಅಂದು ಅನೌನ್ಸ್​​ ಮಾಡಿದ್ದರು. ಅದರಲ್ಲೊಂದು ಇಂದಿನ ಅನೌನ್ಸ್​​ಮೆಂಟ್​ಗೆ ಸಂಬಂಧಿಸಿರುವ ಸಾಧ್ಯತೆ ಹೆಚ್ಚಿದೆ. 2026, 2027, 2028ಕ್ಕೆ ಈ ಸಿನಿಮಾಗಳು ಚಿತ್ರಮಂದಿರಗಳನ್ನು ಪ್ರವೇಶಿಸಲಿದ್ದು, ನಿಗದಿತ ದಿನಾಂಕ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ದಿ ರಾಜಾ ಸಾಬ್, ಸ್ಪಿರಿಟ್, ಕಲ್ಕಿ 2 ಮತ್ತು ಫೌಜಿಯಂತಹ ಸಿನಿಮಾಗಳು ಪ್ರಭಾಸ್​ ಕೈಯಲ್ಲಿದ್ದು, ಈ ಮೂರು ಚಿತ್ರಗಳು ಇತ್ತೀಚಿನ ಅನೌನ್ಸ್​ಮೆಂಟ್​​. ಕೊನೆಯದಾಗಿ ಕಲ್ಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸಾಲಿನ ಮೇ 9ರಂದು ತೆರೆಕಂಡ ಬಹುತಾರಾಗಣದ ಈ ಸಿನಿಮಾ ಸೂಪರ್ ಹಿಟ್​ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.