ETV Bharat / sitara

Rana Daggubati birthday: 'ಬಲ್ಲಾಳ ದೇವ'ನ ಜನ್ಮದಿನ.. ಯುವಕರಿಗೆ ಸ್ಫೂರ್ತಿ ರಾಣಾ ಬದುಕು - interesting fact about rana daggubati

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ರಾಣಾ ದಗ್ಗುಬಾಟಿ ತನ್ನ ನಟನಾ ಕೌಶಲ್ಯದಿಂದ ದೇಶದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸ್ಟಾರ್​ ಕಿಡ್​​ ಆಗಿ ಹುಟ್ಟಿದ್ರೂ ಸಹ ಕಷ್ಟದ ಜೀವನದಿಂದಲೇ ರಾಣಾ ಮೇಲೆ ಬಂದ್ರು. ಅಲ್ಲದೆ, ಇಂದಿಗೂ ಸಹ ಹಲವಾರು ಆರೋಗ್ಯ ಸಮಸ್ಯೆಗಳು ಬಾಹುಬಲಿ ಬಲ್ಲಾಳ ದೇವನನ್ನು ಕಾಡುತ್ತಿವೆ.

rana-daggubati
ನಟ ರಾಣಾ ದಗ್ಗುಬಾಟಿ
author img

By

Published : Dec 14, 2021, 8:58 AM IST

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವ ಆಗಿ ಅಬ್ಬರಿಸಿದ್ದ ನಟ ರಾಣಾ ದಗ್ಗುಬಾಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತನ್ನ ನಟನಾ ಕೌಶಲ್ಯದಿಂದ ದೇಶದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ರಾಣಾ ಕುರಿತು ಹಲವಾರು ಇಂಟ್ರಸ್ಟಿಂಗ್​ ವಿಚಾರಗಳು ಇಲ್ಲಿವೆ..

rana-daggubati-birthday
ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಬಲ್ಲಾಳ ದೇವ'

2010ರಲ್ಲಿ ತೆಲುಗು ಬ್ಲಾಕ್​ ಬಸ್ಟರ್​ '​​ಲೀಡರ್​' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಣಾ ತಮ್ಮ ಮೊದಲ ಸಿನಿಮಾಗೆ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು. 2011ಕ್ಕೆ 'ದಮ್​ ಮಾರೋ ದಮ್​' ಮೂಲಕ ಹಿಂದಿ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. 2015 ರಲ್ಲಿ ಬಿಡುಗಡೆಯಾದ 'ಬಾಹುಬಲಿ' ಮೂಲಕ ದೇಶಾದ್ಯಂತ ಬಲ್ಲಾಳ ದೇವನಾಗಿ ರಾಣಾ ಪ್ರಖ್ಯಾತಿ ಹೊಂದಿದರು.

rana-daggubati-birthday
ಯುವಕರಿಗೆ ಪ್ರೇರಣೆ 'ರಾಣಾ' ಬದುಕು

interesting facts about Rana Daggubati : ರಾಣಾ ಅವರ ತಂದೆ ಸುರೇಶ್ ಬಾಬು ಜನಪ್ರಿಯ ಚಲನಚಿತ್ರ ನಿರ್ಮಾಪಕ. ಸ್ಟಾರ್ ಕಿಡ್ ಆದ್ರೂ, ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ಹಠ ರಾಣಾರದ್ದು. ಅಲ್ಲದೆ, 4 ವರ್ಷಗಳ ಕಾಲ ವಿಶುವಲ್​ ಎಫೆಕ್ಟ್​​​​ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಿದರು. 2006 ರಲ್ಲಿ ಮಹೇಶ್​ ಬಾಬು ಅವರ 'ಸೈನಿಕುಡು' ಚಿತ್ರದಲ್ಲಿ ವಿಶ್ಯುವಲ್​ ಎಫೆಕ್ಟ್​ ವಿಭಾಗದಲ್ಲಿ ಕೆಲಸ ಮಾಡಿ, ಟಾಲಿವುಡ್​​ನ ಅತಿದೊಡ್ಡ 'ಪ್ರಶಸ್ತಿ ನಂದಿ ಅವಾರ್ಡ್​' ಪುರಸ್ಕಾರಕ್ಕೆ ಭಾಜನರಾದರು. ಛಾಯಾಗ್ರಹಣದಲ್ಲಿಯೂ ರಾಣಾ ಪದವಿ ಪಡೆದಿದ್ದಾರೆ.

rana-daggubati-birthday
ನಟ ರಾಣಾ ದಗ್ಗುಬಾಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಇಷ್ಟೆಲ್ಲ ಟ್ಯಾಲೆಂಟ್​ ಜೊತೆ ಕಟ್ಟುಮಸ್ತಾದ ದೇಹ ಹೊಂದಿರುವ ರಾಣಾಗೆ ಬಲಗಣ್ಣು ಕಾಣುವುದಿಲ್ಲ ಅಂದ್ರೆ ನೀವು ನಂಬಲೇಬೇಕು. ಎಡಗಣ್ಣು ಮುಚ್ಚಿದ್ರೆ ರಾಣಾಗೆ ಏನೂ ಕಾಣಿಸುವುದಿಲ್ಲ. ಅಲ್ಲದೆ, ಕಿಡ್ನಿ ವೈಫಲ್ಯ ಇದೆ. ಶೇ. 70 ರಷ್ಟು ಪಾರ್ಶ್ವವಾಯು ಮತ್ತು ರಕ್ತಸ್ರಾವ ಆಗಿದೆ ಹಾಗೂ ಸಾಯುವ ಸಾಧ್ಯತೆ 30 ರಷ್ಟಿದೆ ಅಂತ ಕಾರ್ಯಕ್ರಮದಲ್ಲಿ ಸ್ವತಃ ರಾಣಾ ಹೇಳಿ ಕಣ್ಣೀರು ಹಾಕಿದ್ರು.

rana-daggubati-birthday
'ಲೀಡರ್​​​​​'ರಾಣಾ

ಹೌದು, ತೆರೆ ಮೇಲೆ ಸಿಂಹದಂತೆ ಘರ್ಜಿಸಿ, ಸಾಧುವಂತೆ ನಟಿಸುವ ಕಲೆಯನ್ನು ಅರಗಿಸಿಕೊಂಡಿರುವ ನಟನ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಆದ್ರೂ ಸಾವಿಗೆ ಚಾಲೆಂಜ್​ ಹಾಕಿ ಮುನ್ನುಗ್ಗುತ್ತಿರುವ ರಾಣಾ ದಗ್ಗುಬಾಟಿ ನಿಜಕ್ಕೂ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಅವರು ಇದೇ ಆತ್ಮವಿಶ್ವಾಸದಿಂದ ನೂರ್ಕಾಲ ಬದುಕಿ ಬಾಳಲಿ ಎಂದು ಹಾರೈಸೋಣ. Happy Birthday Rana..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.