ಕೊರೊನಾ ಐದನೇ ಹಂತದ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಯುವರತ್ನ ಹಾಗೂ ಜೇಮ್ಸ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲದಿನಗಳಿಂದಷ್ಟೇ ಯುವರತ್ನ ಸಿನಿಮಾದ ಓಪನ್ ಸಾಂಗ್ ಚಿತ್ರೀಕರಣ ಮುಗಿಸಿರೋ ಪುನೀತ್, ಈಗ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಅಕ್ಟೋಬರ್ 13 ರಿಂದ ಜೇಮ್ಸ್ ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಲಿದ್ದು, ಬಹದ್ದೂರ್, ಭರಾಟೆ ಸಿನಿಮಾಗಳ ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾನೆ. ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಹೆಸರಾಂತ ಸಾಹಸ ನಿರ್ದೇಶಕರಾದ ರಾಮ್ ಲಕ್ಷ್ಮಣ್ ಜೇಮ್ಸ್ ಟೀಮ್ ಸೇರಿಕೊಂಡಿದ್ದಾರೆ.
ಈಗಾಗಲೇ ಪವರ್ ಸ್ಟಾರ್ ಹಲವು ಸಿನಿಮಾಗಳಿಗೆ, ಸಾಹಸ ನಿರ್ದೇಶನ ಮಾಡಿರೋ ರಾಮ್ ಲಕ್ಷ್ಮಣ್ ಈಗ ಜೇಮ್ಸ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಸಹೋದರರು ಪುನೀತ್ ರಾಜ್‍ಕುಮಾರ್, ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಕಿಶೋರ್ನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಿರ್ದೇಶಕ ಚೇತನ್ ಮೊದಲಿಗೆ ಆಕ್ಷನ್ ಸಿಕ್ವೇನ್ಸ್ಗಳನ್ನ ಚಿತ್ರೀಕರಣ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರಂತೆ. ಪೋಸ್ಟರ್ನಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋ ಜೇಮ್ಸ್ ಚಿತ್ರಕ್ಕೆ, ಈಗ ಸೌತ್ ಚಿತ್ರರಂಗದ ಬಹು ಬೇಡಿಕೆಯ ಸ್ಟಂಟ್ ಮಾಸ್ಟರ್ಸ್ ಅಂತಾ ಕರೆಯಿಸಿಕೊಂಡಿರುವ ರಾಮ ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡ್ತಾ ಇರೋದು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.