ಸದ್ಯ ದೇಶಾದ್ಯಂತ ಮಹಾತ್ಮ ಗಾಂಧಿಯ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಾದರೂ ಇಡೀ ತಿಂಗಳು ಗಾಂಧಿಯ ತತ್ವಗಳನ್ನು ಸಾರುವ ಕೆಲಸವನ್ನು ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ನರೇಂದ್ರ ಮೋದಿ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಬಾಲಿವುಡ್ನ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಸಂವಾದಕ್ಕೆ #ಚೇಂಜ್ ವಿತಿನ್ ಎಂದು ಹೆಸರಿಡಲಾಗಿದ್ದು, ಸಂವಾದದಲ್ಲಿ ಸಿನಿಮಾ ಮತ್ತು ಟಿವಿ ಶೋಗಳಲ್ಲಿ ಗಾಂಧಿ ವಿಚಾರಧಾರೆಗಳನ್ನು ಪಸರಿಸುವಂತೆ ಮೋದಿ ಭಾಷಣ ಮಾಡಿದ್ದಾರೆ.
-
#ChangeWithin And here is https://t.co/AfAs0uCyfq the short by everybody’s favourite Director...Thank u @RajkumarHirani @RHFilmsOfficial for making me a part of it.
— Shah Rukh Khan (@iamsrk) October 19, 2019 " class="align-text-top noRightClick twitterSection" data="
">#ChangeWithin And here is https://t.co/AfAs0uCyfq the short by everybody’s favourite Director...Thank u @RajkumarHirani @RHFilmsOfficial for making me a part of it.
— Shah Rukh Khan (@iamsrk) October 19, 2019#ChangeWithin And here is https://t.co/AfAs0uCyfq the short by everybody’s favourite Director...Thank u @RajkumarHirani @RHFilmsOfficial for making me a part of it.
— Shah Rukh Khan (@iamsrk) October 19, 2019
-
Thank u @narendramodi for hosting us & having such an open discussion on #ChangeWithin & the role artistes can play in spreading awareness of the msgs of The Mahatma. Also the idea of a University of Cinema is extremely opportune! pic.twitter.com/kWRbNk3xzo
— Shah Rukh Khan (@iamsrk) October 19, 2019 " class="align-text-top noRightClick twitterSection" data="
">Thank u @narendramodi for hosting us & having such an open discussion on #ChangeWithin & the role artistes can play in spreading awareness of the msgs of The Mahatma. Also the idea of a University of Cinema is extremely opportune! pic.twitter.com/kWRbNk3xzo
— Shah Rukh Khan (@iamsrk) October 19, 2019Thank u @narendramodi for hosting us & having such an open discussion on #ChangeWithin & the role artistes can play in spreading awareness of the msgs of The Mahatma. Also the idea of a University of Cinema is extremely opportune! pic.twitter.com/kWRbNk3xzo
— Shah Rukh Khan (@iamsrk) October 19, 2019
ಕಾರ್ಯಕ್ರಮದಲ್ಲಿ ಅಮಿರ್ ಖಾನ್, ಶಾರುಖ್ ಖಾನ್, ಕಂಗನಾ ರನೌತ್, ಜಾಕಿ ಶ್ರಾಫ್ ಸೇರಿ ಹಲವು ತಾರೆಯರು ಭಾಗಿಯಾಗಿದ್ದರು. ಇದೀಗ ದಕ್ಷಿಣ ಭಾರತದ ಸಿನಿಮಾ ಮಂದಿ ಈ ಬಗ್ಗೆ ಅಸಮಧಾನ ಹೊರ ಹಾಕಿದ್ದು, ನೀವು ನಮ್ಮನ್ನು ಕಡೆಗಳಿಸಿದ್ದೀರಿ ಎಂದು ಮೋದಿಗೆ ಸಂದೇಶ ಕಳುಹಿಸಿದ್ದಾರೆ.
ಈ ಬಗ್ಗೆ ಮೋದಿಗೆ ಸಂದೇಶ ಬರೆದಿರುವ ತೆಲುಗು ನಟ ರಾಮ್ಚರಣ್ ಪತ್ನಿ ಉಪಾಸನ ಕಮಿನೇನಿ, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಭಾರತದ ನಾವುಗಳು ನಿಮ್ಮನ್ನು ಗೌರವಿಸುತ್ತೇವೆ. ನಾವು ಹೆಮ್ಮೆಯಿಂದ ಹೇಳುತ್ತೇವೆ, ನರೇಂದ್ರ ಮೋದಿ ನಮ್ಮ ಪ್ರಧಾನಿ ಎಂದು. ಆದರೆ, ನೀವು ನಿನ್ನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇವಲ ಹಿಂದಿ ಸೆಲೆಬ್ರಿಟಿಗಳನ್ನು ಆಹ್ವಾನಿಸಿ, ನಮ್ಮನ್ನು ಕಡೆಗಣಿಸಿದ್ದೀರಿ ಎಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ತಮ್ಮಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಇನ್ನು, ನಿನ್ನೆ ನಡೆದ ಚೇಂಜ್ ವಿತಿನ್ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾರುಖ್ ಖಾನ್ ಮೋದಿ ಜೊತೆಗಿನ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ಭಾರೀ ಸದ್ದು ಮಾಡುತ್ತಿದೆ.