ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಚಿತ್ರದ 'ಪವರ್ ಆಫ್ ಯೂತ್...' ಎಂಬ ಹಾಡು ಕೆಲವು ದಿನಗಳ ಹಿಂದೆಯೇ ಬಿಡುಗಡೆಯಾಗಿತ್ತು. ಆ ನಂತರ ಕ್ರಿಸ್ಮಸ್ಗೆ ಚಿತ್ರದ ಇನ್ನೊಂದು ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ, ಶುಕ್ರವಾರ ಬೆಳಗ್ಗೆ 'ನೀನಾದೆ ನಾ ...' ಎಂಬ ರೊಮ್ಯಾಂಟಿಕ್ ಹಾಡನ್ನು ಯೂಟ್ಯೂಬ್‍ನ ಹೊಂಬಾಳೆ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.
- " class="align-text-top noRightClick twitterSection" data="">
ರಕ್ಷಿತ್ ಶೆಟ್ಟಿ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರತಂಡದವರ ಪ್ರೀತಿಯ ಒತ್ತಾಯಕ್ಕೆ ಮಣಿದು ರಕ್ಷಿತ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. 'ಯುವರತ್ನ' ತೆಲುಗಿಗೆ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ ಎಂಬ ವಿಷಯ ಗೊತ್ತೇ ಇದೆ. ಈಗಾಗಲೇ 'ಪವರ್ ಆಫ್ ಯೂತ್...' ತೆಲುಗು ಅವತರಣಿಕೆ ಬಿಡುಗಡೆಯಾಗಿತ್ತು. ಇದೀಗ 'ನೀನಾದೆ ನಾ ...' ಹಾಡಿನ ತೆಲುಗು ವರ್ಷನ್ ಕೂಡಾ ಬಿಡುಗಡೆಯಾಗಿದ್ದು, ತೆಲುಗು ನಟ ವಿಜಯ್ ದೇವರಕೊಂಡ ಏಕಕಾಲಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ ಹೈದರಾಬಾದ್ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಅರ್ಮಾನ್ ಮಲ್ಲಿಕ್ ಮತ್ತು ಶ್ರೇಯಾ ಘೋಶಾಲ್ ಹಾಡಿದ್ದು, ಎಸ್.ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: ಥಿಯೇಟರ್ಗೆ ಬಂದ ಶಕೀಲಾ: ನೋಡಿದ ಪ್ರೇಕ್ಷಕರು ಏನಂದ್ರು?
'ಯುವರತ್ನ' ಸಿನಿಮಾ ಏಪ್ರಿಲ್‍ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‍ಡೌನ್‍ನಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ. ಪುನೀತ್ ಜೊತೆಗೆ ಸಯೇಷಾ ಸೆಹಗಲ್, ಧನಂಜಯ್, ದಿಗಂತ್, ಸೋನು ಗೌಡ, ಪ್ರಕಾಶ್ ರೈ ಮುಂತಾದವರು ಅಭಿನಯಿಸಿದ್ದಾರೆ. ಸಂತೋಷ್ ಆನಂದ್ರಾಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಈ ಚಿತ್ರವನ್ನು ವಿಜಯ್‍ಕುಮಾರ್ ಕಿರಗಂದೂರು ನಿರ್ದೇಶನ ಮಾಡಲಿದ್ದಾರೆ.