ಗಟ್ಟಿಮೇಳ ಧಾರಾವಾಹಿಯ ನಾಯಕ ನಟ ವೇದಾಂತ್ ವಸಿಷ್ಠ ಆಗಿ ಎಲ್ಲರ ಮನೆ ಮಾತಾಗಿರುವ ರಕ್ಷ್ ಸದ್ಯ ಕಿರುತೆರೆಯಲ್ಲಿ ಸಖತ್ ಬ್ಯುಸಿ. ಸದಾ ಶೂಟಿಂಗ್ ಎಂದು ಬ್ಯುಸಿಯಾಗಿರುವ ನಟ ರಕ್ಷ್ ಇದೀಗ ವೀಕೆಂಡನ್ನು ಫುಲ್ ಎಂಜಾಯ್ ಮಾಡ್ತಿದ್ದಾರೆ.
- View this post on Instagram
ನನ್ನ ವೀಕೆಂಡ್ ನಮ್ಮ ಕಬಿನಿ ಕಾಡಿನ ಆದಿವಾಸಿ ಮಕ್ಕಳ ಜೊತೆಯಲಿ😊 Happy weekend to you all 😊😊
">
ಹೌದು, ಹೆಚ್ಡಿ ಕೋಟೆಯಲ್ಲಿರುವ ಕಬಿನಿ ಡ್ಯಾಮ್ ಬಳಿಯ ಸ್ಥಳೀಯ ನಿವಾಸಿಗಳ (ಆದಿವಾಸಿಗಳ) ಜೊತೆ ಕಾಲ ಕಳೆದ ಸುಂದರ ಕ್ಷಣವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಫೋಟೋ ಜೊತೆಗೆ ವಿಡಿಯೋವೊಂದನ್ನು ಹಾಕಿರುವ ರಕ್ಷ್ ಸಾಂಪ್ರದಾಯಿಕ ದೇಶಿ ಬೀಟ್ಸ್ ಅನ್ನು ಎಂಜಾಯ್ ಮಾಡಿದ್ದಾರೆ. ಸಂಗೀತವನ್ನು ಎಂಜಾಯ್ ಮಾಡಿರುವುದು ಮಾತ್ರವಲ್ಲದೆ, ದೇಶಿ ಸಂಗೀತ ಉಪಕರಣವನ್ನು ನುಡಿಸಲು ಪ್ರಯತ್ನ ಪಟ್ಟಿದ್ದಾರೆ.
ತಮ್ಮ ವಾರಾಂತ್ಯವನ್ನು ಸಂತಸವಾಗಿ ಕಳೆದಿರುವ ರಕ್ಷ್ ಇತ್ತೀಚಿಗೆ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದ ಕುರಿತಾಗಿ ಕಲಾವಿದರನ್ನು ಹೀಗೆ ತೀರ್ಮಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಪ್ರತಿಯೊಬ್ಬರು ಜೀವನದಲ್ಲಿ ಸಾಧನೆಯ ಮೈಲಿಗಲ್ಲು ತಲುಪಲು ಕಷ್ಟ ಪಡುತ್ತಾರೆ ಎಂದಿದ್ದರು. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಮಹೇಶ ಪಾತ್ರದಿಂದ ಪರಿಚಿತರಾದ ರಕ್ಷ್ ಸದ್ಯ ಗಟ್ಟಿಮೇಳದ ವೇದಾಂತ್ ವಸಿಷ್ಠ ಪಾತ್ರದ ಮೂಲಕ ಮಿಂಚುತ್ತಿದ್ದಾರೆ. ಇದರ ಜೊತೆಗೆ ನರಗುಂದ ಬಂಡಾಯ ಸಿನಿಮಾದಲ್ಲಿಯೂ ನಾಯಕರಾಗಿ ರಕ್ಷ್ ಕಾಣಿಸಿಕೊಂಡಿದ್ದರು.