ಮುಂಬೈ: ರಾಜಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಅಭಿನಯದ ಹಾರರ್ ಕಾಮಿಡಿ ಸಿನಿಮಾ "ರೂಹಿ" ಇದೇ ಮಾರ್ಚ್ 11 ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ ಎಂದು ಸಿನಿಮಾ ತಯಾರಕರು ಇಂದು ತಿಳಿಸಿದ್ದಾರೆ.
ಕೋವಿಡ್-19 ಸುರಕ್ಷತಾ ಪ್ರೋಟೊಕಾಲ್‌ಗಳನ್ನು ಅನುಸರಿಸಿ ಫೆಬ್ರವರಿ 1 ರಿಂದ ದೇಶಾದ್ಯಂತ ಸಿನೆಮಾ ಮಂದಿರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅನುಮತಿ ನೀಡಿದ ನಂತರ ಚಿತ್ರಮಂದಿರಗಳಿಗೆ ಆಗಮಿಸಿದ ಮೊದಲ ಬಾಲಿವುಡ್ ಸಿನಿಮಾ ಇದಾಗಲಿದೆ.
ಜಿಯೋ ಸ್ಟುಡಿಯೋಸ್ ಮತ್ತು ಮ್ಯಾಡ್ಡಾಕ್ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ "ರೂಹಿ" ಚಿತ್ರದಲ್ಲಿ ವರುಣ್ ಶರ್ಮಾ ಕೂಡ ನಟಿಸಿದ್ದಾರೆ. ಹಾರ್ದಿಕ್ ಮೆಹ್ತಾ ಈ ಚಿತ್ರವನ್ನು "ಫಕ್ರಿ" ಹೆಲ್ಮರ್ ಮೃಗದೀಪ್ ಸಿಂಗ್ ಲಂಬಾ ಬರೆದ ಚಿತ್ರಕಥೆಯಿಂದ ನಿರ್ದೇಶಿಸಿದ್ದಾರೆ. ಮೃಗದೀಪ ಲಂಬಾ ಅವರು ಚಿತ್ರದ ಸಹ-ನಿರ್ಮಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ತಯಾರಕರ ಪ್ರಕಾರ, "ರೂಹಿ" ದೇಶಾದ್ಯಂತ 1,500 ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆ.