ETV Bharat / sitara

'ತಲೈವಾ'ಗೆ ಒಲಿದು ಬಂತು ಐಕಾನ್​ ಆಫ್​​ ಗೋಲ್ಡನ್​​​ ಜುಬಿಲಿ ಗೌರವ - ಇಂಟರ್​​ನ್ಯಾಷನಲ್​​ ಫಿಲ್ಮ್​ ಫೆಸ್ಟಿವಲ್​ ಆಫ್​​ ಇಂಡಿಯಾ

ತಮಿಳು ಸೂಪರ್​ ಸ್ಟಾರ್​ ರಜನಿ ಕಾಂತ್​ ಅವರು ಅವರು 'ಐಕಾನ್​ ಆಫ್​​​ ಗೋಲ್ಡನ್​​ ಜುಬಿಲಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರಜಿನಿಕಾಂತ್​​
author img

By

Published : Nov 2, 2019, 1:59 PM IST

ತಮಿಳು ಸೂಪರ್​ ಸ್ಟಾರ್​ ರಜನಿ ಕಾಂತ್​ ಅವರು ಅವರು 'ಐಕಾನ್​ ಆಫ್​​​ ಗೋಲ್ಡನ್​​ ಜುಬಿಲಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಪ್ರಕಾಶ್​ ಜಾವಡೇಕರ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

Rajinikanth
ರಜಿನಿಕಾಂತ್​​

ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ವೀಟ್​ ನಲ್ಲಿ ಹೇಳಲಾಗಿದೆ. ರಜನಿಕಾಂತ್​ ತಮ್ಮ ಜೀವನದಲ್ಲಿ ಮಾಡಿರುವ ಸಾಧನೆಗೆ ಮತ್ತು ಕಳೆದ ಹಲವು ದಶಕಗಳಿಂದ ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಅಲ್ಲದೆ ರಜನಿ ಕಾಂತ್​​ರನ್ನು ಆಯ್ಕೆ ಮಾಡಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಪ್ರಕಾಶ್​ ಜವಡೇಕರ್​ ಟ್ವೀಟ್​ ಮಾಡಿದ್ದಾರೆ.

  • In recognition of his outstanding contribution to Indian cinema, during the past several decades, I am happy to announce that the award for the ICON OF GOLDEN JUBILEE OF #IFFI2019 is being conferred on cine star Shri S Rajnikant.
    IFFIGoa50 pic.twitter.com/oqjTGvcrvE

    — Prakash Javadekar (@PrakashJavdekar) November 2, 2019 " class="align-text-top noRightClick twitterSection" data=" ">

ಗೋವಾದಲ್ಲಿ ಐಎಫ್​ಎಫ್​ಐ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ನವೆಂಬರ್​​ 20 ರಿಂದ 28ರವರೆಗೆ ನಡೆಯಲಿದೆ. ಈ ಫೆಸ್ಟ್​​​ನಲ್ಲಿ ಸುಮಾರು 250 ಸಿನಿಮಾಗಳನ್ನು ಪ್ರದರ್ಶನ ಮಾಡುವ ಯೋಜನೆಯಿದೆ. ಈ ಸಿನಿಮೋತ್ಸವದಲ್ಲಿ ಬೇರೆ ಬೇರೆ ದೇಶದ, ಹಲವಾರು ವಿಷಯಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ತೋರಿಸಲಾಗುತ್ತದೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಫ್ರೆಂಚ್​​ ನಟಿ ಇಸಬೆಲ್​ ಎಂಬುವವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅಲ್ಲದೆ ಇವರಿಗೆ ಜೀವಮಾನದ ಸಾಧನೆಗಾಗಿ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ ಎಂದು ಜಾವಡೇಕರ್​ ಟ್ವೀಟ್​ ಮಾಡಿದ್ದಾರೆ.

Intro:Body:

cinema

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.