ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಚಿತ್ರತಂಡ ಶೂಟಿಂಗ್ನಲ್ಲಿ ಭಾಗಿಯಾಗಿದೆ. ಈ ಸಂಬಂಧ ನಡುಗುವ ಚಳಿಯಲ್ಲಿ ಚಿತ್ರತಂಡ ಕಷ್ಟ ಪಡುತ್ತಿರುವುದನ್ನು ಆರ್ಆರ್ಆರ್ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ.
ಆರ್ಆರ್ಆರ್ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ನಿರ್ದೇಶಕ ರಾಜಮೌಳಿ, ಛಾಯಗ್ರಾಹಕ ಸೆಂಥಿಲ್ ಕುಮಾರ್ ಸೇರಿದಂತೆ ಚಿತ್ರತಂಡದವರು ಚಳಿ ತಡೆಯಲಾರದೆ ಹೀಟರ್ಗಳ ಮೊರೆ ಹೋಗಿದ್ದಾರೆ. ರಾತ್ರಿ ವೇಳೆ ಶೂಟಿಂಗ್ ಮಾಡುತ್ತಿದ್ದ ಕಾರ್ಮಿಕರೆಲ್ಲಾ ಮುಖಕ್ಕೆ ಮಾಸ್ಕ್ ಮತ್ತು ಕಿವಿಗಳಿಗೆ ಟವೆಲ್ ಸುತ್ತಿಕೊಂಡು ಕೆಲಸ ಮಾಡುತ್ತಿದ್ದಾರೆ.
-
No one can escape the cold winds with out these on set heaters 🔥
— RRR Movie (@RRRMovie) November 16, 2020 " class="align-text-top noRightClick twitterSection" data="
Throwback to last week's midnight shoots! #RRRDiaries #RRRMovie pic.twitter.com/bFmYqC9low
">No one can escape the cold winds with out these on set heaters 🔥
— RRR Movie (@RRRMovie) November 16, 2020
Throwback to last week's midnight shoots! #RRRDiaries #RRRMovie pic.twitter.com/bFmYqC9lowNo one can escape the cold winds with out these on set heaters 🔥
— RRR Movie (@RRRMovie) November 16, 2020
Throwback to last week's midnight shoots! #RRRDiaries #RRRMovie pic.twitter.com/bFmYqC9low
ಆರ್ಆರ್ಆರ್ ಚಿತ್ರದಲ್ಲಿ ರಾಮ್ಚರಣ್ ಅಲ್ಲೂರಿ ಸೀತಾರಾಮ ಪಾತ್ರದಲ್ಲಿ ಮತ್ತು ಜೂ. ಎನ್ಟಿಆರ್ ಕೋಮರಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಜೂ. ಎನ್ಟಿಆರ್ ದುಬೈನಲ್ಲಿದ್ದು, ಅವರಿಲ್ಲದ ಸೀನ್ಗಳನ್ನು ಶೂಟ್ ಮಾಡಲಾಗುತ್ತಿದೆ. ದುಬೈನಿಂದ ಎನ್ಟಿಆರ್ ವಾಪಸಾದ ಬಳಿಗೆ ಅವರ ಸೀನ್ಗಳನ್ನು ಶೂಟ್ ಮಾಡಲಾಗುತ್ತದೆ.
ಇನ್ನು ಚಿತ್ರದಲ್ಲಿ ಬಿಟೌನ್ ತಾರೆಯರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ.