ETV Bharat / sitara

ಪ್ಲಾಸ್ಟಿಕ್​​ ಮುಕ್ತ ಭಾರತಕ್ಕೆ ಮುಂದಾದ ರಾಜ್​​​​ ಫ್ಯಾಮಿಲಿ: ಜಾಗೃತಿಗಾಗಿ ಪರಿಸರ ಸ್ನೇಹಿ ಬ್ಯಾಗ್​​​​ ತಯಾರಿಕೆ - ಜಾಗೃತಿಗಾಗಿ ಪರಿಸರ ಸ್ನೇಹಿ ಬ್ಯಾಗ್​​ ತಯಾರಿಕೆ

ಪ್ಲಾಸ್ಟಿಕ್​​ ನಿರ್ನಾಮ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್​ ಬ್ಯಾಗ್​ ಬಳಸದಂತೆ ವರನಟ ಡಾ. ರಾಜ್​​ಕುಮಾರ್​​ ಕುಟುಂಬ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಬ್ಯಾಗ್​​ ತಯಾರಿಸುವಲ್ಲಿ ರಾಜ್​​ಕುಮಾರ್​​ ಕುಟುಂಬ ಮುಂದಾಗಿದೆ.

Raj Kumar Family, Plastic Free India
ಪ್ಲಾಸ್ಟಿಕ್​​ ಮುಕ್ತ ಭಾರತಕ್ಕೆ ಮುಂದಾದ ರಾಜ್​​ ಫ್ಯಾಮಿಲಿ
author img

By

Published : Dec 9, 2019, 10:53 AM IST

ಡಾ.ರಾಜ್​ಕುಮಾರ್​​ ಫ್ಯಾಮಿಲಿ ಆಗಾಗ್ಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಕರ್ನಾಟಕದ ಜನರ ಪ್ರೀತಿಗೆ ಪಾತ್ರವಾಗಿದೆ. ಈ ಹಿಂದೆ ರಕ್ತದಾನ, ನೇತ್ರದಾನ, ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಸಹಾಯ ಮಾಡಿತ್ತು.

ಇದೀಗ ಮತ್ತೊಂದು ಸಮಾಜದ ಒಳಿತಿನ ಕೆಲಸಕ್ಕೆ ರಾಜ್​​​​ ಫ್ಯಾಮಿಲಿ ಕೈ ಹಾಕಿದೆ. ಅದೇ ಪ್ಲಾಸ್ಟಿಕ್​​ ಮುಕ್ತ ಭಾರತ. ಹೌದು, ಪ್ಲಾಸ್ಟಿಕ್​​ ನಿರ್ನಾಮ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್​ ಬ್ಯಾಗ್​ ಬಳಸದಂತೆ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಬ್ಯಾಗ್​​ ತಯಾರಿಸುವಲ್ಲಿ ರಾಜ್​​​ಕುಮಾರ್​​ ಕುಟುಂಬ ಮುಂದಾಗಿದೆ. ತಮ್ಮ ಮನೆಯ ಯಾವುದಾದರು ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗೆ ಈ ಬ್ಯಾಗ್​ ಕೊಡುವ ಮೂಲಕ ಪ್ಲಾಸ್ಟಿಕ್​​ ಮುಕ್ತ ಭಾರತವನ್ನು ಮಾಡುವುದು ಇದರ ಉದ್ದೇಶ.

Raj Kumar Family, Plastic Free India
ರಾಜ್​​ ಹೆಸರಲ್ಲಿ ಪರಿಸರ ಜಾಗೃತಿ

ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ರಾಜ್​​ಕುಮಾರ್​​​, ನಮ್ಮ ತಂದೆಯ ಹೆಸರಲ್ಲಿ ಏನಾದರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಮಾಜದಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಗುತ್ತದೆ. ಯಾಕಂದ್ರೆ ನಮ್ಮ ತಂದೆಯ ಅಭಿಮಾನಿ ಗಣ ಅಷ್ಟು ದೊಡ್ಡದಿದೆ. ಇನ್ನು ನಮ್ಮ ತಂದೆ ಒಂದು ಮಾತು ಹೇಳುತ್ತಿದ್ದರು. ಬೇರೆಯವರಿಗೆ ಏನನ್ನಾದರೂ ಒಳ್ಳೆ ಕೆಲಸ ಮಾಡು ಎನ್ನುವುದಕ್ಕಿಂತ ಮುಂಚೆ ಆ ಕೆಲಸವನ್ನು ಮೊದಲು ನೀನು ಮಾಡು ಎಂದು ಹೇಳುತ್ತಿದ್ರು ಅಂತಾ ರಾಘವೇಂದ್ರ ರಾಜ್​​ಕುಮಾರ್​​ ಹೇಳಿದರು.

Raj Kumar Family, Plastic Free India
ಶಿವಣ್ಣ, ಪುನೀತ್​​​, ರಾಘವೇಂದ್ರ ರಾಜ್​​ಕುಮಾರ್​​

ಡಾ. ರಾಜ್​​ಕುಮಾರ್ ಹೆಸರಿನಲ್ಲಿರುವ ಐಎಎಸ್ ಅಕಾಡೆಮಿ ಸಹ ಇತ್ತೀಚಿಗೆ ಟ್ರಸ್ಟ್ ಆಗಿ ಬದಲಾವಣೆಯಾಗಿದೆ. ಇನ್ನು ಡಾ. ರಾಜ್​​​ಕುಮಾರ್ ಟ್ರಸ್ಟ್ ಅಡಿಯಲ್ಲಿ ಸಾವಿರಾರು ವ್ಯಕ್ತಿಗಳಿಗೆ ನೇತ್ರ ತಪಾಸಣೆ, ನೇತ್ರ ದಾನ ಬ್ಯಾಂಕ್, ಶಸ್ತ್ರ ಚಿಕಿತ್ಸೆ ಸಹ ನಡೆಯುತ್ತಿದೆ.

ರಾಜ್ ಕುಟುಂಬ ಪ್ಲಾಸ್ಟಿಕ್ ತ್ಯಜಿಸಿ ಆಂದೋಲನಕ್ಕೆ

ಡಾ ರಾಜಕುಮಾರ್ ಕುಟುಂಬ ಅಂದು ನೇತ್ರ ದಾನ ಇಂದ ಜನಪರ ಕೆಲಸಗಳಿಗೆ ಹಮ್ಮಿಕೊಂಡಿತು. ಸ್ವತಃ ಡಾ ರಾಜಕುಮಾರ್ ಸಹ ಅವರ ನೇತ್ರ ದಾನ ಮಾಡಿದ್ದರು. ಆಮೇಲೆ ಪರಿಸರ ಕಾಳಜಿ ಬಗ್ಗೆ ರಾಘವೇಂದ್ರ ರಾಜಕುಮಾರ್ ಗಿಡ ನೆಡುವ ಕೆಲಸಕ್ಕೂ ಮುಂದಾದರು. ಅವರ ಕಾರ್ಯಕ್ರಮಗಳಲ್ಲಿ ಸಸಿ ನೀಡುವ ಪದ್ದತಿ ಶುರು ಆಯಿತು. ಪರಿಸರ ಸಂರಕ್ಷಣೆಗೆ ಆಗಾಗ್ಗೆ ಮಾತು ಸಹ ರಾಘವೇಂದ್ರ ರಾಜಕುಮಾರ್ ಆಡುತ್ತಾ ಬಂದರು.

ಈಗ ಡಾ ರಾಜಕುಮಾರ್ ಕುಟುಂಬ ಪ್ಲಾಸ್ಟಿಕ್ ತ್ಯಜಿಸಿ ಕಾರ್ಯಕ್ರಮಕ್ಕೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಕೈ ಜೋಡಿಸಿದ್ದಾರೆ. ಪ್ಲಾಸ್ಟಿಕ್ ಪರ್ಯಾಯವಾಗಿ ಅವರ ಕುಟುಂಬದಿಂದ ಬ್ಯಾಗುಗಳ ತಯಾರಿಕೆ ಸಹ ಶುರು ಆಗಿದೆ. ಅವರ ಮನೆಗೆ, ಕಾರ್ಯಕ್ರಮಗಳಿಗೆ ಬರುವವರಿಗೆ ಈ ಪರಿಸರ ಸ್ನೇಹಿ ಬ್ಯಾಗ್ ನೀಡುವುದಾಗಿ ಸಂಕಲ್ಪ ಮಾಡಿದ್ದಾರೆ.

ನಮ್ಮ ತಂದೆಯವರ ಹೆಸರಲ್ಲಿ ಏನಾದರೂ ಕಾರ್ಯಕ್ರಮ ಹಮ್ಮಿಕೊಂಡರೆ ಅದು ಸಮಾಜದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತದೆ. ಅವರ ಅಭಿಮಾನಿ ಬಳಗ ಅಷ್ಟು ದೊಡ್ಡದಾಗಿದೆ. ಬೇರೆಯವರು ಅನುಸರಿಸಿ ಅನ್ನುವುದಕ್ಕಿಂತ ಮುಂಚೆ ನಾವು ಒಳ್ಳೆಯದನ್ನು ಮಾಡಿ ತೋರಿಸಬೇಕು ಎಂದು ನಮ್ಮ ಅಪ್ಪಾಜಿ ಹೇಳುತ್ತಾ ಇದ್ದರು. ಹಾಗಾಗಿ ಈಗ ಪ್ಲಾಸ್ಟಿಕ್ ಬದಲಿಗೆ ಈ ಬ್ಯಾಗು ಲೋಕಾರ್ಪಣೆ ಆಗಿದೆ ಅನ್ನುತ್ತಾರೆ ರಾಘವೇಂದ್ರ ರಾಜಕುಮಾರ್.

ಡಾ ರಾಜಕುಮಾರ್ ಹೆಸರಿನಲ್ಲಿ ಐ ಎ ಎಸ್ ಅಕಾಡೆಮಿ ಸಹ ಇತ್ತೀಚಿಗೆ ಟ್ರಸ್ಟ್ ಆಗಿ ಬದಲಾವಣೆ ಆಗಿ ಜನಹಿತ ಕಾಪಾಡಲು ಮುಂದಾಗಿದೆ. ಇನ್ನೂ ಡಾ ರಾಜಕುಮಾರ್ ಟ್ರಸ್ಟ್ ಅಡಿಯಲ್ಲಿ ಸಾವಿರಾರು ವ್ಯಕ್ತಿಗಳಿಗೆ ನೇತ್ರ ತಪಾಸಣೆ, ನೇತ್ರ ದಾನ ಬ್ಯಾಂಕ್, ಅದಕ್ಕೆ ಸಂಬಂದಪಟ್ಟ ಶಸ್ತ್ರ ಚಿಕಿತ್ಸೆ ಸಹ ನಡೆಯುತ್ತಾ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.