ETV Bharat / sitara

ಒಂದೇ ಸೆಲ್​​​ನಲ್ಲಿ ನಟಿಮಣಿಯರು... ಕುಟುಂಬದೊಂದಿಗೆ ಫೋನ್ ಮೂಲಕ ಮಾತನಾಡಿದ ರಾಗಿಣಿ

ಸಿಸಿಬಿ ಕಸ್ಟಡಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಈಗ ಒಂದೇ ಸೆಲ್​​ನಲ್ಲಿದ್ದಾರೆ. ಇಂದು ಜೈಲಿನ ಫೋನ್ ಬೂತ್​​ನಿಂದ ಕುಟುಂಬದವರು ಹಾಗೂ ವಕೀಲರ ಜೊತೆ ಮಾತನಾಡಲು ರಾಗಿಣಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.

Ragni and Sanjana staying same sell
ಒಂದೇ ಸೆಲ್​​​ನಲ್ಲಿ ನಟಿಮಣಿಯರು
author img

By

Published : Sep 17, 2020, 1:02 PM IST

Updated : Sep 17, 2020, 1:09 PM IST

ಬೆಂಗಳೂರು: ಸಿಸಿಬಿ ವಿಚಾರಣೆಗಾಗಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೆ ಉಳಿದುಕೊಂಡಿದ್ದ ಸ್ಯಾಂಡಲ್​ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡಾ ಮತ್ತೆ ಒಂದೇ ಸೆಲ್​​​ನಲ್ಲಿ ಜೊತೆಯಾಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊರೊನಾ ಪ್ರಕರಣಗಳು ಇರುವ ಕಾರಣ ಈ ನಟಿಯರನ್ನು ಇಲ್ಲಿಗೆ ಕರೆತಂದಾಗ ಆರಂಭದಲ್ಲಿ ಬೇರೆ ಬೇರೆ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಈ ಇಬ್ಬರೂ ನಟಿಯರಿಗೂ ನೆಗೆಟಿವ್ ಇರುವ ಕಾರಣ ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಇಬ್ಬರಿಗೂ ಮೂರು ಕಾರ್ಪೆಟ್​​ಗಳನ್ನು ನೀಡಲಾಗಿದ್ದು ಜೈಲಿನಲ್ಲೇ ಇದ್ದು ಅಲ್ಲಿ ಕೊಡುವ ಆಹಾರವನ್ನು ಸೇವಿಸುವುದು ಅನಿವಾರ್ಯವಾಗಿದೆ.

ಇನ್ನು ಕಳೆದ 3 ದಿನಗಳಿಂದ ರಾಗಿಣಿ ತಂದೆ ತಾಯಿ ಪರಪ್ಪನ ಅಗ್ರಹಾರದೆಡೆಗೆ ಬಂದು ಹೋಗುತ್ತಿದ್ದಾರೆ. ಆದರೆ ಯಾರಿಗೂ ರಾಗಿಣಿ ಅಥವಾ ಸಂಜನಾರನ್ನು ಭೇಟಿ ಮಾಡಲು ಅವಕಾಶ ಇರಲಿಲ್ಲ. ಆದರೆ ಇಂದು ಅಧಿಕಾರಿಗಳು ಜೈಲಿನ ಫೋನ್ ಬೂತ್​​​​​ನಿಂದ ಪೋಷಕರು ಹಾಗೂ ವಕೀಲರೊಂದಿಗೆ ಮಾತನಾಡಲು ರಾಗಿಣಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಒಂದು ವೇಳೆ ಸಂಜನಾ ಗಲ್ರಾನಿ ಕೂಡಾ ಕುಟುಂಬಸ್ಥರ ಬಳಿ ಮಾತನಾಡಲು ಕೇಳಿದರೆ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಡಲಿದ್ದಾರೆ. ಒಟ್ಟಿನಲ್ಲಿ ಈ ನಟಿಮಣಿಯರು ಕಷ್ಟಸುಖ ಮಾತನಾಡುತ್ತಾ ಈಗ ಜೈಲಿನಲ್ಲಿ ಇರುವುದು ಅನಿವಾರ್ಯವಾಗಿದೆ.

Last Updated : Sep 17, 2020, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.