ಕೊರೊನಾ ವೈರಸ್ ಸೋಂಕು, ಲಾಕ್ಡೌನ್ ಶುರುವಾದ ದಿನದಿಂದ ಸ್ಯಾಂಡಲ್‍ವುಡ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದು,ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಗಿಣಿ ಯಾವುದೇ ಸಂಘ-ಸಂಸ್ಥೆಗಳು ಸಂಕಷ್ಟದಲ್ಲಿರುವವರ ಸಹಾಯಕ್ಕೆ ಕರೆದರೂ ಇಲ್ಲ ಎನ್ನದೆ ಸಹಾಯಕ್ಕೆ ಮುಂದಾಗುತ್ತಿದ್ದಾರೆ. ಕಳೆದ ಕೆಲ ವಾರಗಳ ಹಿಂದೆ ಬಿಬಿಎಂಪಿ ಕಸ ಗುಡಿಸುವವರನ್ನ ಮನೆಗೆ ಕರೆದು ಕುಡಿಯಲು ಟೀ ಕೊಟ್ಟು ಯೋಗಕ್ಷೇಮ ವಿಚಾರಿಸಿದ್ದರು. ಅಷ್ಟೇ ಅಲ್ಲದೇ, ಮಾರತಹಳ್ಳಿಯಲ್ಲಿ ನೆಲಸಿರುವ 3,000 ಜಾರ್ಖಂಡ್ ನಿವಾಸಿಗಳಿಗೆ ಸಹಾಯ ಮಾಡಿದ್ದಾರೆ. ಇನ್ನು, ಎಷ್ಟೋ ಬಾರಿ ಸಿನಿಮಾ ಕಾರ್ಮಿಕರು, ಸಹ ಕಲಾವಿದರಿಗೆ,ಸಂಕಷ್ಟದಲ್ಲಿರುವವರಿಗೆ,ಕೊರೊನಾ ವಾರಿಯರ್ಸ್ಗೆ ತಮ್ಮ ಮನೆಯಿಂದಲೇ ಊಟ ತಯಾರಿಸಿ,ಅವರಿದ್ದಲ್ಲಿಗೆ ಹೋಗಿ ವಿತರಿಸಿದ್ದಾರೆ.
ರಾಗಿಣಿ ಅವರ ತಂದೆ - ತಾಯಿಯ ವಿವಾಹ ವಾರ್ಷಿಕೋತ್ಸವ ನಿಮಿತ್ತ 300 ವ್ಯಕ್ತಿಗಳಿಗೆ ವಿಶೇಷ ಊಟ ತಮ್ಮ ನಿವಾಸದಲ್ಲೇ ತಯಾರಿಸಿ ನೀಡಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ರಾಗಿಣಿ ಅವರು ಬಡವರಿಗೆ ಮಾಡುತ್ತಿರುವ ಕೆಲಸಕ್ಕೆ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.