ETV Bharat / sitara

ರಘು ದೀಕ್ಷಿತ್​ ಹೊಸ ಪ್ರಯತ್ನ : ಬರಲಿದೆಯಂತೆ ಹತ್ತು ಹಾಡುಗಳ ಆಲ್ಬಂ

ರಘು ದೀಕ್ಷಿತ್​ ವಿಶೇಷ ಪ್ರಯತ್ನ ಒಂದಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಹತ್ತು ಹಾಡುಗಳನ್ನು ಹೊಂದಿರುವ ಒಂದು ಆಲ್ಬಂ ರೆಡಿ ಮಾಡುತ್ತಿದ್ದು, ಈ ಹಾಡುಗಳನ್ನು ಸಂತ ಶಿಶುನಾಳ ಶರೀಫ್​ ಮತ್ತು ದಾ.ರಾ ಬೇಂದ್ರೆ ಸಾಹಿತ್ಯವನ್ನು ಬಳಸಿಕೊಂಡು ತಯಾರು ಮಾಡಲಾಗುತ್ತಿದೆ. ಈ ಹಾಡುಗಳನ್ನು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್​ ಮಾಡಲಾಗಿದೆ.

ರಘು ದೀಕ್ಷಿತ್​ ಹೊಸ ಪ್ರಯತ್ನ : ಬರಲಿದೆಯಂತೆ ಹತ್ತು ಹಾಡುಗಳ ಆಲ್ಬಂ
author img

By

Published : Aug 6, 2019, 10:04 PM IST

ಕನ್ನಡದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಘು ದೀಕ್ಷಿತ್​​, ತಮ್ಮ ವಿಶೇಷ ಹಾಡುಗಾರಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ ಎಂಬ ಹಾಡಿನ ಮೂಲಕ ಸಿನಿ ಲೋಕಕ್ಕೆ ಲಗ್ಗೆ ಇಟ್ಟ ರಘು, ಇದೀ ಹತ್ತಾರು ಹಾಡುಗಳನ್ನು ಕಾಂಪೋಸ್​ ಮಾಡಿದ್ದಾರೆ.

‘ಹ್ಯಾಪಿ ನ್ಯೂ ಇಯರ್’ ಸಿನಿಮಾಕ್ಕೆ ಸಂಗೀತ ನೀಡಿದ್ದ ರಘು ದೀಕ್ಷತ್​ ಸದ್ಯ ‘ನಿನ್ನ ಸನಿಹಕೆ’ ಎಂಬ ಸಿನಿಮಾದ ಗೀತೆಗಳಿಗೆ ನಿರ್ದೇಶನ ಮಾಡಿದ್ದಾರೆ. ಆದ್ರೆ ಮ್ಯಾಟ್ರು ಅದಲ್ಲ. ಇದೀಗ ರಘು ದೀಕ್ಷಿತ್​ ವಿಶೇಷ ಪ್ರಯತ್ನ ಒಂದಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಹತ್ತು ಹಾಡುಗಳನ್ನು ಹೊಂದಿರುವ ಒಂದು ಆಲ್ಬಂ ರೆಡಿ ಮಾಡುತ್ತಿದ್ದು, ಈ ಹಾಡುಗಳನ್ನು ಸಂತ ಶಿಶುನಾಳ ಶರೀಫ್​ ಮತ್ತು ದಾ.ರಾ ಬೇಂದ್ರೆ ಸಾಹಿತ್ಯವನ್ನು ಬಳಸಿಕೊಂಡು ತಯಾರು ಮಾಡಲಾಗುತ್ತಿದೆ.

ಇನ್ನು ಈ ಹಾಡುಗಳನ್ನು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್​ ಮಾಡಲಾಗಿದ್ದು, ಆಯಾ ಭಾಷೆಯ ಲಿರಿಕಲ್​ ರೈಟರ್​ಗಳ ಹುಡುಕಾಟ ನಡೆಯುತ್ತಿದೆ. ದಾ.ರಾ ಬೇಂದ್ರೆಯವರ ‘ಕುಡ್ಲಿಕ್ಕೆ ಹೊಂಟಿದೆ ನಾ ಜ್ವಾಕಿ...ಎಂಬ ಹಾಡನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲಾಗುತ್ತಿದೆ.

ಲಿರಿಕ್ಸ್​​ ಆದ ನಂತ್ರ ಈ 10 ಹಾಡುಗಳನ್ನು ಸಹ ರಘು ದೀಕ್ಷತ್​ ಹಾಡಲಿದ್ದಾರೆ. ಆದ್ರೆ ಈ ಆಲ್ಬಂ ಹೆಸರನ್ನು ರಘು ದೀಕ್ಷಿತ್ ಇನ್ನೂ ನಿಶ್ಚಯ ಮಾಡಿಲ್ಲ. ಇದರಲ್ಲಿ ಕರ್ನಾಟಕದ ನಾಲ್ಕು ಭಾಷೆಗಳ (ಕನ್ನಡ, ಕೊಡವ, ತುಳು, ಕೊಂಕಣಿ) ಒಳಗೊಂಡ ಒಂದು ಹಾಡು ಸಹ ಇದೆ ಎಂಬ ಸುಳಿವನ್ನು ರಘು ಬಿಚ್ಚಿಟ್ಟಿದ್ದಾರೆ.

ರಘು ದೀಕ್ಷಿತ್ 10 ಹಾಡುಗಳ ನಾಲ್ಕು ಭಾಷೆಯ ಅಲ್ಬಮ್

ಕನ್ನಡ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ನಿನ್ನ ಪೂಜೆಗೆ ಬಂದೆ ಮಾದೇಶ್ವರ....ಸೈಕೋ ಕನ್ನಡ ಚಿತ್ರದಿಂದ ಲಗ್ಗೆ ಇಟ್ಟ ರಘು ದೀಕ್ಷಿತ್ ಅವರದೇ ಆದ ಬ್ಯಾಂಡ್ ಜೊತೆ ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾ ಅಗಾಗೆ ಒಂದು ಹಾಡು ಸಿನಿಮಾಕ್ಕೆ ಹೇಳುತ್ತಾ ಹ್ಯಾಪಿ ನ್ಯೂ ಇಯರ್ ಸಿನಿಮಾಕ್ಕೆ ಸಂಗೀತ ಮಾಡಿದ ಎರಡು ವರ್ಷಗಳ ನಂತರ ಆರು ಕನ್ನಡ ಸಿನಿಮಾಗಳ ನೀಡುವುದರ ಮೂಲಕ ವಾಪಸಾಗುತ್ತಿದ್ದಾರೆ. ನಿನ್ನ ಸನಿಹಕೆ ಸೂರಜ್ ಗೌಡ ಹಾಗೂ ಧನ್ಯ ರಾಮಕುಮಾರ್ ಸಿನಿಮಾ ಸಹ ಅದರಲ್ಲಿ ಒಂದು. ನಾಲ್ಕು ಗೀತೆಗಳಿಗೆ ರಾಗ ಸಂಯೋಜನೆ ಈ ಸಿನಿಮಾಕ್ಕೆ ಮಾಡುವುದರ ಜೊತೆಗೆ ಐದು ಸಿನಿಮಗಳು ಈಗಾಗಲೇ ಸಂಗೀತ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಅದರಲ್ಲಿ ಆರ್ಕೆಸ್ಟ್ರ 9 ಹಾಡುಗಳ ಕನ್ನಡ ಸಿನಿಮಾ, ಅದರ ಜೊತೆಗೆ ಪ್ರದೇಶ ಸಮಾಚಾರ, ಮೈಸೂರು ಮಸಾಲ ಚಿತ್ರದಲ್ಲಿ ಒಂದು ಹಾಡು, ಗರುಡ, ಫ್ಲೈ, ಲವ್ ಮಾಕ್ಟೈಲ್ ಸಹ ರಘು ದೀಕ್ಷಿತ್ ಸಂಗೀತ ನಿರ್ದೇಶನದ ಸಿನಿಮಗಳು ಸಾಲಾಗಿ ನಿಂತಿವೆ.

ಮೊದಲು ನನ್ನನ್ನು ಸಿನಿಮಾ ಮಂದಿ ಹೆಚ್ಚು ಆಹ್ವಾನ ನೀಡುತ್ತಾ ಇರಲಿಲ್ಲ. ಈಗ ನಾನೇ ನನ್ನ ಬಗ್ಗೆ ಹಾಡುವುದಕ್ಕಾಗಲಿ, ಸಂಗೀತ ನಿಡುವುದಕ್ಕಾಗಲಿ ಪ್ರಚಾರ ಮಾಡಿಕೊಳ್ಳುತ್ತಿದ್ದೇನೆ. ಅದರ ಜೊತೆಗೆ ನನ್ನ ಸಂಗೀತ ನಿರ್ದೇಶನದ ಹಾಡುಗಳನ್ನು ಯಾವ ಧ್ವನಿ ಸುರುಳಿ ಸಂಸ್ಥೆಗೆ ಹಕ್ಕನ್ನು ನೀಡಲಾರೆ ಎನ್ನುತ್ತಾರೆ ರಘು ದೀಕ್ಷಿತ್. ಕೆಲವೊಮ್ಮೆ ಸಂಗೀತಕ್ಕೆ ತಗಲುವ ವೆಚ್ಚ ನಾನೇ ಭರಿಸಿ ಚಿತ್ರದ ನಿರ್ಮಾಪಕರಲುಗಳಲ್ಲಿ ಒಬ್ಬನಾಗಿದ್ದು ಇದೆ ಅಂತಾರ ರಘು ದೀಕ್ಷಿತ್.

ಅದೆಲ್ಲ ಸರಿ, ರಘು ದೀಕ್ಷಿತ್ ಅವರ ಮಹತ್ತರ ಯೋಜನೆ ಒಂದು ಸಿದ್ದವಾಗಿದೆ. ಅದು ಏನು ಗೊತ್ತ? 10 ಹಾಡುಗಳ ಅಲ್ಬಮ್ – ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ. ಇದರ ವಿಶೇಷ ಏನಪ್ಪಾ ಅಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತ ದ ರಾ ಬೆಂದ್ರ ಅವರ ಒಂದು ಹಾಡು ಮತ್ತು ಸಂತ ಶಿಶುನಾಳ ಶರೀಫರ ಒಂದು ಹಾಡು ಅಡಕವಾಗಿರುತ್ತದೆ. ಪರಭಾಷೆಗಳಿಗೆ ಕನ್ನಡ ಸಾಹಿತ್ಯ ಲೋಕದ ಸತ್ವವನ್ನು ಪರಿಚಯ ಮಾಡುವುದು ಇದರ ಗುರಿ. ದ ರಾ ಬೇಂದ್ರೆ ಹಾಗೂ ಶರಿಫರ ಹಾಡುಗಳಿಗೆ ತರ್ಜುಮೆ ಮಾಡುವುದಕ್ಕೆ ಸರಿಯಾದ ವ್ಯಕ್ತಿಗಳನ್ನು ಹುಡುಕಿದ್ದಾರೆ ರಘು ದೀಕ್ಷಿತ್. ಈ ಅಲ್ಬಮ್ ಹೆಸರು ರಘು ದೀಕ್ಷಿತ್ ಇನ್ನೂ ನಿಶ್ಚಯ ಮಾಡಿಲ್ಲ. ಇದರಲ್ಲಿ ಕರ್ನಾಟಕದ ನಾಲ್ಕು ಭಾಷೆಗಳ (ಕನ್ನಡ, ಕೊಡವ, ತುಳು, ಕೊಂಕಣಿ) ಒಳಗೊಂಡ ಒಂದು ಹಾಡು ಸಹ ಇಟ್ಟುಕೊಂಡಿದ್ದಾರೆ.

ರಘು ದೀಕ್ಷಿತ್ ಪ್ರಕಾರ ದ ರಾ ಬೇಂದ್ರೆ ಅವರ ಕುಡ್ಲಿಕ್ಕೆ ಹೊಂಟಿದೆ ನಾ ಜ್ವಾಕಿ....ಹಾಡಿನ ಅರ್ಥವನ್ನು ಗ್ರಹಿಸಿ ಪರಭಾಷೆಗೆ ತರ್ಜುಮೆ ಮಾಡುವುದು ಅಷ್ಟು ಸುಲಭದ ಮಾತಲ್ಲ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.