ಬೆಂಗಳುರು: ಮನೆಕೆಲಸದವರ ಜೊತೆ ಹೊಸ ವರ್ಷಾಚರಣೆಯನ್ನು ಆಚರಿಸಿದ ರಾಘವೇಂದ್ರ ರಾಜ್‌ಕುಮಾರ್ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸಿದ್ದಾರೆ.
ಶ್ರೀಮಂತರ ಮನೆಗಳಲ್ಲಿ ಅಪ್ಪ, ಅಮ್ಮ ಮಕ್ಕಳು ಒಟ್ಟಿಗೆ ಕುಳಿತು ಊಟ ಮಾಡುವುದೇ ವಿರಳ. ಅಂತಹ ಸನ್ನಿವೇಶದಲ್ಲಿ ರಾಘಣ್ಣ ಮನೆ ಕೆಲಸದವರ ಜೊತೆ ಐಶಾರಾಮಿ ಹೋಟೆಲ್ನಲ್ಲಿ ಊಟ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸಿದ್ದಾರೆ.
ರಾಜ್‌ಕುಮಾರ್ ಕುಟುಂಬದವರು ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವ ಪಣ ತೊಟ್ಟಿದ್ದಾರೆ. ರಾಜ್‌ಕುಮಾರ್ ಭಾವಚಿತ್ರ ಇರುವ ಬಟ್ಟೆ ಬ್ಯಾಗ್ ಬಳಸುವ ಮೂಲಕ ಪ್ಲಾಸ್ಟಿಕ್ ಬಳಸಬೇಡಿ ಎಂಬ ಜಾಗೃತಿಯನ್ನ ಮೂಡಿಸ್ತಿರೋದು ಗಮನಾರ್ಹ.
ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಹಾಗೂ ಮನೆ ಕೆಲಸದವರ ಜೊತೆ ಕುಳಿತು ಊಟ ಮಾಡುವ ಮೂಲಕ, ಡಾ. ರಾಜ್‌ಕುಮಾರ್ ಪಾಲಿಸುತ್ತಿದ್ದ ಆದರ್ಶವನ್ನ ರಾಘಣ್ಣ ಕೂಡ ಮುಂದುವರಿಸಿದ್ದಾರೆ.