ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಂದು ಮಗುವಿನ ತಾಯಿ ಆದರೂ ಅದೇ ಗ್ಲ್ಯಾಮರ್ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ದಮಯಂತಿ ಸಿನಿಮಾದಿಂದ, ಸ್ಯಾಂಡಲ್ ವುಡ್ ಗೆ ಗುಡ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇಂತಿಪ್ಪ ರಾಧಿಕಾ ಕುಮಾರಸ್ವಾಮಿ ಸಿನಿಮಾ ಹಾಗೂ ರಿಯಾಲಿಟಿ ಶೋ ಅಂತಾ ಬ್ಯುಸಿಯಾಗಿದ್ದಾರೆ.
ಇದರ ಜೊತೆಗೆ ಹೊಸ ಡಾನ್ಸ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುತ್ತಾ ಅಭಿಮಾನಿಗಳನ್ನು ಸದಾ ರಂಜಿಸುತ್ತಿದ್ದಾರೆ. ಈ ಮೂಲಕ ರಾಧಿಕಾ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿ ಗುಡ್ ನ್ಯೂಸ್ ವೊಂದನ್ನು ಕೊಟ್ಟಿದ್ದಾರೆ.
ಸದ್ಯ ಸಿನಿಮಾರಂಗದ ಸೆಲೆಬ್ರೆಟಿಗಳಿಗೆ ಸೋಷಿಲ್ ಮೀಡಿಯಾ ಅನ್ನೋದು ಪಾರ್ಟ್ ಆಫ್ ಲೈಫ್ ಆಗಿದೆ. ಹೀಗಾಗಿ ರಾಧಿಕಾ ಕುಮಾರಸ್ವಾಮಿ ಆಫೀಶಿಯಲ್ ಆಗಿ ಸೋಷಿಯಲ್ ಮೀಡಿಯಾಗೆ ಪದಾರ್ಪಣೆ ಕೂಡಾ ಮಾಡಿದ್ದಾರೆ.
![Radhika Kumaraswamy oppen new official face book account](https://etvbharatimages.akamaized.net/etvbharat/prod-images/kn-bng-04-social-mediage-entry-kotta-radhikakumaraswami-7204735_23022022173048_2302f_1645617648_319.jpg)
ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಅಧಿಕೃತ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿದ್ದಾರೆ. ಈಗಾಗ್ಲೇ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ಹತ್ತಾರು ಫೇಸ್ ಬುಕ್ ಪೇಜ್ ಗಳನ್ನು ಅಭಿಮಾನಿಗಳು ಕ್ರಿಯೇಟ್ ಮಾಡಿದ್ದಾರೆ. ಆದರೆ, ಅವರು ಅಧಿಕೃತವಾದ ಫೇಸ್ ಬುಕ್ ಪೇಜ್ ಹೊಂದಿರಲಿಲ್ಲ. ಈಗ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ರಾಧಿಕಾ ಕುಮಾರಸ್ವಾಮಿ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾರೆ.
![Radhika Kumaraswamy oppen new official face book account](https://etvbharatimages.akamaized.net/etvbharat/prod-images/kn-bng-04-social-mediage-entry-kotta-radhikakumaraswami-7204735_23022022173048_2302f_1645617648_99.png)
ಈ ಬಗ್ಗೆ ಸ್ವತಃ ರಾಧಿಕಾ ಕುಮಾರಸ್ವಾಮಿ ವಿಡಿಯೋ ಮೂಲಕ. ಎಲ್ಲರಿಗೂ ನಮಸ್ಕಾರ ಇಂದಿನಿಂದ ನಾನು ಆಫೀಶಿಯಲ್ ಫೇಸ್ ಬುಕ್ ಅಕೌಂಟ್ ತೆರೆಯುತ್ತಿದ್ದೇನೆ ಅಂತಾ ಸ್ವೀಟಿ ಹೇಳಿದ್ದಾರೆ. ಇದರ ಜೊತೆಗೆ ಖಾಸಗಿ ವಾಹಿನಿ ಡಿಡಿಜೆ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ, ತಮ್ಮ ಫೇಸ್ಬುಕ್ ಪೇಜ್ ನಿಂದ ನಾನು ಲೈವ್ ಬರ್ತೀನಿ, ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೆನೆ ಅಂತಾ ದಮಯಂತಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ರಾಧಿಕಾ ಕುಮಾರಸ್ವಾಮಿ, ಕೆಲ ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಮತ್ತೆ ದಮಯಂತಿ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುವ ಮೂಲಕ ನಿರ್ಮಾಣದಲ್ಲಿ ಮತ್ತೆ ತೊಡಗಿಸಿಕೊಂಡಿದ್ದಾರೆ. ಈಗ ಮತ್ತಷ್ಟು ಚಿತ್ರಗಳನ್ನು ಮಾಡುವ ತಯಾರಿ ಮಾಡಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ತಮ್ಮ, ಹೊಸ ಸಿನಿಮಾಗಳ ಅಪ್ಡೇಟ್ ಬಗ್ಗೆ ತಿಳಿಸಲು ಅಭಿಮಾನಿಗಳ ಜತೆ ಹಂಚಿಕೊಳ್ಳಲು ಫೇಸ್ ಬುಕ್ಗೆ ರಾಧಿಕಾ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಎರಡು ವರ್ಷಗಳ ನಂತರ ಮತ್ತೆ ಸಿನಿಮಾದತ್ತ ಮುಖಮಾಡಿದ ನಟಿ ರಿಯಾ