ETV Bharat / sitara

ಗೋವಾದಲ್ಲಿ ಹೊಸವರ್ಷ ಆಚರಿಸಲಿರುವ ರಾಕಿಂಗ್ ಜೋಡಿ - ಗೋವಾಗೆ ತೆರಳಿದ ರಾಧಿಕಾ-ಯಶ್​​ ಜೋಡಿ

ಕನ್ನಡಚಿತ್ರರಂಗದ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ‌ ಪಂಡಿತ್ 2022ರ ಹೊಸ ವರ್ಷಾಚರಣೆಯನ್ನು ಆಚರಿಸಲು ಮಕ್ಕಳೊಂದಿಗೆ ಗೋವಾಗೆ ತೆರಳಿದ್ದಾರೆ..

Radhika and yash go to goa for new year celebration
ಗೋವಾದಲ್ಲಿ ಹೊಸವರ್ಷ ಆಚರಿಸಲಿರುವ ರಾಕಿಂಗ್ ಜೋಡಿ
author img

By

Published : Dec 31, 2021, 3:42 PM IST

Updated : Dec 31, 2021, 3:56 PM IST

ಸ್ಯಾಂಡಲ್​ವುಡ್​ ಕ್ಯೂಟ್​​ ಜೋಡಿ ಯಶ್ ಮತ್ತು ರಾಧಿಕಾ‌ ಪಂಡಿತ್ ಹೊಸ ವರ್ಷಾಚರಣೆ ಆಚರಿಸಲು ಗೋವಾಗೆ ತೆರಳಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳ ಜೊತೆ ಗೋವಾದಲ್ಲಿ 2022ನೇ ವರ್ಷವನ್ನು ಬರಮಾಡಿಕೊಳ್ಳಲಿದ್ದಾರೆ.

ಈಗಾಗಲೇ ಯಶ್ ದಂಪತಿ ಗೋವಾದಲ್ಲಿದೆ. ಅಲ್ಲಿನ ಹೋಟೆಲ್​​ವೊಂದರಲ್ಲಿ ರಾಧಿಕಾ ಪಂಡಿತ್ ಹಾಗೂ ಮಗಳು ಆಯ್ರಾ ಕ್ರಿಸ್​​​ಮಸ್ ಟ್ರೀ ಮುಂದೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾಳೆ. ಈ ಫೋಟೋಗಳನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

Radhika with daughter Ayra
ರಾಧಿಕಾ ಜೊತೆ ಮಗಳು ಆಯ್ರಾ

ಕ್ರಿಸ್​ಮಸ್​ ಟ್ರೀ ಎದುರು ನಿಂತಿರುವ ಫೋಟೋವನ್ನು ರಾಧಿಕಾ ಪಂಡಿತ್​ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಾಮಾನ್ಯ ಪೋಸ್​ ನೀಡಿದ್ದಾರೆ. ಆದರೆ, ಆಯ್ರಾ ಹಾಗಲ್ಲ. ಸೊಂಟದ ಮೇಲೆ ಕೈ ಇಟ್ಟುಕೊಂಡು, ಒಂದು ಕಣ್ಣನ್ನು ಮುಚ್ಚಿದ್ದಾಳೆ.

ಅವಳು ಕೊಟ್ಟ ಪೋಸ್​ ನೋಡಿ ಅಭಿಮಾನಿಗಳಿಗೆ ಮಾತ್ರವಲ್ಲದೆ, ಸ್ವತಃ ರಾಧಿಕಾ ಪಂಡಿತ್​​ಗೂ ಅಚ್ಚರಿ ಆಗಿದೆ. ಆಯ್ರಾ ನನಗಿಂತಲೂ ಉತ್ತಮವಾಗಿ ಪೋಸ್​ ನೀಡಿದ್ದಾಳೆ ಎಂಬರ್ಥ ಬರುವ ರೀತಿ ರಾಧಿಕಾ ಫೋಟೋಗೆ ಕ್ಯಾಪ್ಶನ್​ ನೀಡಿದ್ದಾರೆ.

Ranking family
ಮಕ್ಕಳೊಂದಿಗೆ ರಾಕಿಂಗ್​ ಜೋಡಿ

ರಾಧಿಕಾ ಪಂಡಿತ್ ಅವರು ಮಗಳು ಆಯ್ರಾ ಹಾಗೂ ಮಗ ಯಥರ್ವ್​ ಹಾಗೂ ಯಶ್​ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಧಿಕಾ‌ ಪಂಡಿತ್ ಸಿನಿಮಾಗೆ ಕಮ್ ಬ್ಯಾಕ್ ಮಾಡಲಿ ಅನ್ನೋದು ಅಭಿಮಾನಗಳ ಆಸೆ.

ಇದನ್ನೂ ಓದಿ: 2021 Rewind: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಮಿಂಚಿದ ಚೆಲುವೆಯರಿವರು

Last Updated : Dec 31, 2021, 3:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.