ನಿರ್ದೇಶಕ ಪೂರಿ ಜಗನ್ನಾಥ್ಗೆ ಸಿನಿಮಾಗಳಿಂದ ವಿಶ್ರಾಂತಿ ಬೇಕಂತೆ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ರಾಮ್ ಪೋತಿನೇನಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಇಸ್ಮಾರ್ಟ್ ಶಂಕರ್' ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ ನಿರ್ದೇಶಕ ಪೂರಿ ಜಗನ್ನಾಥ್.
ಅಯ್ಯೋ, ಇದೇನಿದು ಇಷ್ಟು ಬೇಗ ಸಿನಿಮಾದಿಂದ ದೂರ ಉಳಿಯುತ್ತಾರಾ ಪೂರಿ ಜಗನ್ನಾಥ್? ಎಂದುಕೊಳ್ಳಬೇಡಿ. ಪೂರಿ ಸ್ವಲ್ಪ ದಿನಗಳ ಕಾಲ ಫ್ಯಾಮಿಲಿಯೊಂದಿಗೆ ಟ್ರಿಪ್ ಎಂಜಾಯ್ ಮಾಡಿ ನಂತರ ಮತ್ತೊಂದು ಸಿನಿಮಾ ಆರಂಭಿಸಲಿದ್ದಾರಂತೆ. ಕಳೆದ ವಾರ ರಾಮ್ ಪೋತಿನೇನಿ, ನಭಾ ನಟೇಶ್ ಹಾಗೂ ನಿಧಿ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ದೊರೆತರೂ ಸಿನಿಮಾ ಮಾತ್ರ ಭಾರೀ ಲಾಭ ಮಾಡಿದೆ. ಈ ನೇಪಥ್ಯದಲ್ಲಿ 2 ತಿಂಗಳ ಕಾಲ ಪೂರಿ ಜಗನ್ನಾಥ್ ಸಿನಿಮಾಗಳಿಂದ ದೂರವಿದ್ದು ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುತ್ತಾರಂತೆ.