ETV Bharat / sitara

ಪೂರಿ ಜಗನ್ನಾಥ್​​-ವಿಜಯ್ ದೇವರಕೊಂಡ ಸಿನಿಮಾ ಟೈಟಲ್ ಫಿಕ್ಸ್​​​; ನಾಯಕಿಯಾಗಿ ಜಾನ್ವಿ ಕಪೂರ್​? - Vijay devarakonda

ರಾಮ್​ ಪೋತಿನೇನಿ ಜೊತೆ 'ಇಸ್ಮಾರ್ಟ್ ಶಂಕರ್' ಸಿನಿಮಾ ನಂತರ ಇದೀಗ ನಿರ್ದೇಶಕ ಪೂರಿ ಜಗನ್ನಾಥ್ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುತ್ತಿದ್ದು ಈ ಹೊಸ ಸಿನಿಮಾಗೆ ಶೀರ್ಷಿಕೆ ಕೂಡಾ ಫಿಕ್ಸ್ ಆಗಿದೆ. ಜಾನ್ವಿ ಕಪೂರ್ ಈ ಚಿತ್ರಕ್ಕೆ ನಾಯಕಿ ಬರಬಹುದು ಎಂದು ಹೇಳಲಾಗುತ್ತಿದೆ.

ಪೂರಿ ಜಗನ್ನಾಥ್
author img

By

Published : Aug 23, 2019, 10:49 AM IST

ನಿರ್ದೇಶಕ ಪೂರಿ ಜಗನ್ನಾಥ್ 'ಇಸ್ಮಾರ್ಟ್ ಶಂಕರ್' ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಒಂದು ತಿಂಗಳ ರೆಸ್ಟ್ ಬಳಿಕ ಮುಂದಿನ ಸಿನಿಮಾ ಮಾಡುವುದಾಗಿ ಪೂರಿ ಹೇಳಿದ್ದರು. ಇದೀಗ ತಿಂಗಳ ಮೊದಲೇ ತಮ್ಮ ಮತ್ತೊಂದು ಚಿತ್ರದ ಹೆಸರನ್ನು ಘೋಷಣೆ ಮಾಡಿದ್ದಾರೆ.

ಪೂರಿ ಜಗನ್ನಾಥ್​ ಈ ಚಿತ್ರವನ್ನು ವಿಜಯ್ ದೇವರಕೊಂಡ ಜೊತೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅಭಿನಯದ 'ಡಿಯರ್ ಕಾಮ್ರೇಡ್' ನಿರೀಕ್ಷೆಯನ್ನು ಬುಡಮೇಲು ಮಾಡಿತ್ತು. ಈಗ ಅವರು ಪೂರಿ ಜಗನ್ನಾಥ್ ಜೊತೆ ಹೊಸ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಈ ಸಿನಿಮಾಗೆ 'ಫೈಟರ್​' ಎಂದು ಹೆಸರಿಡಲಾಗಿದೆ. ಸದ್ಯಕ್ಕೆ ಸ್ಕ್ರಿಪ್ಟಿಂಗ್ ಕೆಲಸ ನಡೆಯುತ್ತಿದೆ. ಪೂರಿ ಜಗನ್ನಾಥ್ ಟೂರಿಂಗ್ ಟಾಕೀಸ್, ಪೂರಿ ಕನೆಕ್ಟ್ಸ್​​​​​ ಬ್ಯಾನರ್​ ಅಡಿ ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. 2020 ಜನವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ.

ತಮ್ಮ ಸಿನಿಮಾದಲ್ಲಿ ನಾಯಕರನ್ನು ಮಾಸ್ ಆ್ಯಂಗಲ್​​ನಲ್ಲಿ ತೋರಿಸುವ ಪೂರಿ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರನ್ನು ಡಿಫರೆಂಟ್ ರೋಲ್​ನಲ್ಲಿ ತೋರಿಸಲು ಹೊರಟಿದ್ದಾರಂತೆ. ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲದಿದ್ದರೂ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ವಿಜಯ್ ಜೊತೆ ನಟಿಸಲಿದ್ದಾರೆ ಎಂಬ ಮಾತು ಟಾಲಿವುಡ್​​​​ನಲ್ಲಿ ಕೇಳಿಬರುತ್ತಿದೆ.

Intro:Body:

puri devarakonda

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.