ಮದರಂಗಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ, ಇವತ್ತಿಗೂ ಡಾರ್ಲಿಂಗ್ ಕೃಷ್ಣ ಅಂತಾನೇ ಪ್ರಖ್ಯಾತಿ ಹೊಂದಿರುವ ನಟ ಮದರಂಗಿ ಕೃಷ್ಣ, ದೊಡ್ಮನೆ ಹುಡ್ಗ ಸಿನಿಮಾ ನಂತ್ರ ಬ್ರೇಕ್ ತೆಗೆದುಕೊಂಡು ಇದೀಗ ಲೋಕಲ್ ಟ್ರೈನ್ ಸಿನಿಮಾ ಮೂಲಕ ಗುಡ್ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ.
ಶೂಟಿಂಗ್ ಮುಗಿಸಿ, ರಿಲೀಸ್ಗೆ ಸಜ್ಜಾಗಿರೋ ಲೋಕಲ್ ಟ್ರೈನ್ ಸಿನಿಮಾದ ಆಡಿಯೋವನ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದ್ರು. ಜಾಕಿ ಸಿನಿಮಾದಿಂದ ಈ ಸಿನಿಮಾವರೆಗೂ ಮದರಂಗಿ ಕೃಷ್ಣನಿಗೆ ಅಪ್ಪು ಒಂದಲ್ಲಾ ಒಂದು ರೀತಿ ಸಪೋರ್ಟ್ ಮಾಡ್ತಾ ಇದ್ದಾರೆ. ಹೀಗಾಗಿ ಮದರಂಗಿ ಕೃಷ್ಣ ಪುನೀತ್ ಸರ್ ನನ್ನ ದೊಡ್ಡ ಅಣ್ಣನಂತೆ ಎಂದು ಅಪ್ಪು ಅವರನ್ನ ಗುಣಗಾನ ಮಾಡಿದ್ರು.
ಲವ್, ಆಕ್ಷನ್ ಇರುವ ಲೋಕಲ್ ಟ್ರೈನ್ ಸಿನಿಮಾ ರೈಲಿನಲ್ಲಿ ನಡೆಯುವ ಕಥೆಯಂತೆ. ಕೃಷ್ಣ ಈ ಸಿನಿಮಾದಲ್ಲಿ ಲವ್ ಜೊತೆ ಭರ್ಜರಿ ಸ್ಟಂಟ್ಗಳನ್ನ ಮಾಡಿದ್ದಾರೆ. ಕೃಷ್ಟನಿಗೆ ಜೊತೆಯಗಿ ಮೀನಾಕ್ಷಿ ದೀಕ್ಷಿತ್ ಮತ್ತು ಎಸ್ತಾರ್ ನರೋನಾ ರೊಮ್ಯಾನ್ಸ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಸಾಧು ಕೋಕಿಲ, ಮೈಕೆಲ್ ಮಧು, ಸುಚೇಂದ್ರ ಪ್ರಸಾದ್, ರೇಖಾ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರಕ್ಕೆ ವೈ.ಎನ್ ರುದ್ರಮುನಿ ನಿರ್ದೇಶನವಿದ್ದು, ಸುಬ್ರಾಯ ವಾಲ್ಕೆ ಬಂಡವಾಳ ಹಾಕಿದ್ದಾರೆ.