ETV Bharat / sitara

'ಆ ಮಧುರ ಕ್ಷಣ ಇಂದಿಗೂ ಸವಿನೆನಪು' : 33 ವರ್ಷಗಳ ಹಿಂದಿನ ಫೋಟೋ ಹಂಚಿಕೊಂಡ ಪವರ್ ಸ್ಟಾರ್ - ರಾಜ್‌ಕುಮಾರ್ ವಿಶ್ವವಿಖ್ಯಾತ ನಯಾಗರ ಫಾಲ್ಸ್ ವೀಕ್ಷಣೆ

ಸಾಮಾಜಿಕ ಜಾಲತಾಣದಲ್ಲಿ ಪುನೀತ್​ ರಾಜ್​ಕುಮಾರ್ ಸಕ್ರಿಯವಾಗಿದ್ದಾರೆ. ಆಗಾಗ್ಗೆ ಪುನೀತ್​ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಹಳೇ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಇದೀಗ ತಂದೆಯ ಜೊತೆಗಿರುವ 33 ವರ್ಷಗಳ ಹಿಂದಿನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

puneeth rajkumar
ಪವರ್ ಸ್ಟಾರ್
author img

By

Published : Sep 25, 2021, 6:54 AM IST

Updated : Sep 25, 2021, 3:03 PM IST

ಕನ್ನಡ ಚಿತ್ರರಂಗದ ಐಕಾನ್ ಅಂತಾನೇ ಕರೆಯಿಸಿಕೊಳ್ಳುವ ಡಾ. ರಾಜ್ ಕುಮಾರ್ ವಿಭಿನ್ನ ಪಾತ್ರಗಳು, ಸರಳ ವ್ಯಕ್ತಿತ್ವದ ಮೂಲಕ ಅಭಿಮಾನಿಗಳನ್ನ ದೇವರು ಅಂತಾ ಕರೆದ ಮಹಾನ್ ನಟ. ಅಣ್ಣಾವ್ರು ನಮ್ಮನ್ನೆಲ್ಲಾ ಅಗಲಿ 15 ವರ್ಷಗಳು ಕಳೆದಿದ್ದರೂ ಕೂಡ ರಾಜ್ ಕುಮಾರ್ ಇವತ್ತಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮನೆ ಮಾಡಿದ್ದಾರೆ.

33 ವರ್ಷಗಳ ಹಿಂದಿನ ಅಣ್ಣಾವ್ರ ಫೋಟೋ:

ಈ ಬಂಗಾರದ ಮನುಷ್ಯನ ಬಗ್ಗೆ ಅವರ ಮೆಚ್ಚಿನ ಮಗ ಪುನೀತ್ ರಾಜ್‍ಕುಮಾರ್, ಸಾಮಾಜಿಕ ಜಾಲತಾಣದಲ್ಲಿ 33 ವರ್ಷಗಳ ಹಿಂದಿನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅದು 1988 ರಲ್ಲಿ ಅಣ್ಣಾವ್ರು ಅಮೆರಿಕ ಪ್ರವಾಸದಲ್ಲಿದ್ದಾಗ ಕ್ಲಿಕ್ ಮಾಡಿದ ಫೋಟೋ. ಈ ಫೋಟೋದಲ್ಲಿ ಡಾ. ರಾಜ್‌ಕುಮಾರ್ ಪುನೀತ್​ ಜೊತೆ ವಿಶ್ವವಿಖ್ಯಾತ ನಯಾಗರ ಫಾಲ್ಸ್​ ಭೇಟಿ ನೀಡಿದಾಗ ಜ್ಯೂಸ್​ ಸೇವಿಸುತ್ತ ಮಗ ಪುನೀತ್​ ಅವರೊಂದಿಗೆ ಮಾತನಾಡುತ್ತಿರುವಂತಿದೆ. ಫೋಟೋದ ಮೇಲೆ 'ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು' ಅಂತಾ ಪವರ್ ಸ್ಟಾರ್​​ ಬರೆದುಕೊಂಡಿದ್ದಾರೆ.

puneeth rajkumar
ಪವರ್ ಸ್ಟಾರ್ ಹಂಚಿಕೊಂಡ ಕಳೇ ಫೋಟೋ

ಅಣ್ಣಾವ್ರು ಹಾಗು ಪುನೀತ್ ರಾಜ್‍ಕುಮಾರ್ ಫೋಟೋಕ್ಕೆ ಅಭಿಮಾನಿಗಳು ಕಾಮೆಂಟ್​ ಮೂಲಕ ಉತ್ತಮ ಪ್ರತಿಕ್ರಿಯೆ ನೀಡುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 'ನಿಮ್ಮ ಮತ್ತು ತಂದೆ ಸಂಬಂಧ ನಯಾಗರ ಜಲಪಾತಕ್ಕಿಂತ ದೊಡ್ಡದು', 'ಅಪ್ಪ-ಮಗ ಸಂಬಂಧ ಅಂದ್ರೆ, ನಿಮ್ಮ ಹಾಗೂ ರಾಜ್‌ಕುಮಾರ್ ಅವರ ಸಂಬಂಧದಂತೆ ಇರಬೇಕು. ಇದು ಜಗ ಮೆಚ್ಚಿದ ಅಪ್ಪ-ಮಗನ ಸಂಬಂಧ', ' ಅಪ್ಪಾಜಿ ಅವರ ಹೆಸರು ಹೇಳುವುದೇ ನಮ್ಮ ಭಾಗ್ಯ, ಅವರ ಮಗನಾಗಿ ಹುಟ್ಟಿದ್ದೀರಾ ಅಂದ್ರೆ ನೀವು ಅದಕ್ಕೆ ಸರ್ವ ಗುಣದಲ್ಲೂ ಅರ್ಹರಾಗಿದ್ದೀರ. ಅದಕ್ಕೆ ದೇವರು ನಿಮ್ಮನ್ನು ಆಯ್ಕೆ ಮಾಡಿದ್ದಾನೆ. ಅದಕ್ಕೆ ತಕ್ಕ ಹಾಗೆ ನೀವು ಅವರ ಹೆಸರನ್ನು ಉಳಿಸಿ, ಬೆಳೆಸುತ್ತಾ ಇದ್ದೀರಿ ಅನ್ನುವುದೇ ನಮಗೆಲ್ಲ ಹೆಮ್ಮೆ' ಅಂತಾ ಅಭಿಮಾನಿಗಳು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

puneeth rajkumar
ಪವರ್ ಸ್ಟಾರ್ ಹಂಚಿಕೊಂಡ ಕಳೇ ಫೋಟೋ

ಸದ್ಯ ಈ ಫೋಟೋವನ್ನು ಸಾವಿರಾರು ಮಂದಿ ಲೈಕ್ ಮಾಡಿ, ರೀ-ಟ್ವೀಟ್ ಮಾಡಿದ್ದಾರೆ. ಸದ್ಯ 'ಜೇಮ್ಸ್' ಸಿನಿಮಾದಲ್ಲಿ ಪವರ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಿರ್ದೇಶಕ ಪವನ್‌ ಕುಮಾರ್ ಜೊತೆಗಿನ 'ದ್ವಿತ್ವ' ಶೂಟಿಂಗ್ ಆರಂಭಗೊಳ್ಳಬೇಕಿದೆ. ಇದು ಹೊಂಬಾಳೆ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಪುನೀತ್ ನಟನೆಯ 4ನೇ ಸಿನಿಮಾವಾಗಿದೆ. ರಾಜಕುಮಾರ ಹಾಗೂ ಯುವರತ್ನ ಸಿನಿಮಾ ಬಳಿಕ, ಅದೇ ಬ್ಯಾನರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

Last Updated : Sep 25, 2021, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.