ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹೈ ವೋಲ್ಟೇಜ್ ಜೇಮ್ಸ್ ಸಿನಿಮಾ ಟೀಸರ್ ಹಾಗೂ ಪೋಸ್ಟರ್ಗಳಿಂದ ಸಾಕಷ್ಟು ಸದ್ದು ಮಾಡ್ತಿದೆ. ಚಿತ್ರದಲ್ಲಿ ಅಪ್ಪು ಸೇನಾ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಮಾರ್ಚ್.17ಕ್ಕೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.
ಇದೀಗ ಜೇಮ್ಸ್ ಚಿತ್ರತಂಡ ಸಿನಿಮಾದ ಮೇಕಿಂಗ್ ಸ್ಟಿಲ್ಗಳನ್ನು ಅನಾವರಣಗೊಂಡಿದ್ದು, ಪುನೀತ್ ಗೆಟಪ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲರಿಂದಲೂ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಈ ಮೂಲಕ ಜೇಮ್ಸ್ ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ.
ಸಿನಿಮಾದಲ್ಲಿ ಪುನೀತ್ ಜೊತೆ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡಿದ್ದು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ತೆಲುಗು ನಟ ಶರತ್ ಕುಮಾರ್, ಶ್ರೀಕಾಂತ್, ಆದಿತ್ಯಾ ಮೆನನ್, ಮುಕೇಶ್ ರಿಷಿ, ಸಾಧು ಕೋಕಿಲ, ರಂಗಾಯಣ ರಘು, ಹೀಗೆ ದೊಡ್ಡ ತಾರಬಳಗವನ್ನು ಜೇಮ್ಸ್ನಲ್ಲಿ ಕಾಣಬಹುದು.
ಈ ಸಿನಿಮಾ ಕನ್ನಡ ಮಾತ್ರವಲ್ಲದೇ, ಹಿಂದಿ ಹಾಗೂ ಇತರ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಪುನೀತ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಅವರ ಅಭಿಮಾನಿಗಳ ವಲಯದಲ್ಲಿ ಖುಷಿ ಇದೆ.
‘ನನಗೆ ರೆಕಾರ್ಡ್ ಬ್ರೇಕ್ ಮಾಡಿಯೇ’ ಅಭ್ಯಾಸ ಎನ್ನುವ ಡೈಲಾಗ್ ಪ್ರೇಕ್ಷಕರಿಗೆ ಖುಷಿ ನೀಡಿದೆ. ಇಂತಹ ಹಲವು ಡೈಲಾಗ್ಗಳು ಸಿನಿಮಾದಲ್ಲಿದೆ ಎನ್ನಲಾಗಿದೆ. ಈ ಡೈಲಾಗ್ಗಳಿಗೆ ಚಿತ್ರಮಂದಿರಗಳಲ್ಲಿ ಸಿಳ್ಳೆ ಬೀಳೋದು ಪಕ್ಕಾ.
ನಿರ್ದೇಶಕ ಚೇತನ್ ಕುಮಾರ್, ಕಥೆ, ಚಿತ್ರಕಥೆ ಬರೆದು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿಗೌಡ ಚಿತ್ರಗೆ ಛಾಯಾಗ್ರಾಹಕರಾಗಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಸಿನಿಮಾವನ್ನು ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ನಿರ್ಮಾಪಕ ಕಿಶೋರ್ ಪ್ಲಾನ್ ಮಾಡಿದ್ದಾರೆ. ಪುನೀತ್ ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ಬಿಡುಗಡೆ ಆಗುತ್ತಿದೆ.