ETV Bharat / sitara

ಅರಮನೆ ಮೈದಾನದಲ್ಲಿ ಇಂದು ಮಧ್ಯಾಹ್ನ 3ಗಂಟೆಗೆ ಪುನೀತ್​ ನಮನ ಕಾರ್ಯಕ್ರಮ

ಇಂದು ಅರಮನೆ ಮೈದಾನದಲ್ಲಿ 'ಪುನೀತ್ ಗೀತ ನಮನ' ಕಾರ್ಯಕ್ರಮ (Puneeth geetha namana programme) ಆಯೋಜನೆಗೊಂಡಿದ್ದು, ಚಿತ್ರರಂಗದ ಸಾವಿರಾರು ಮಂದಿ ಆಗಮಿಸುವ ಹಿನ್ನೆಲೆ ಭದ್ರತೆ ಸಂಬಂಧ ಕೇಂದ್ರ ವಿಭಾಗ ಪೊಲೀಸ್ ಆಯುಕ್ತರ ಕಚೇರಿಯಿಂದ ಆಯೋಜಕರಿಗೆ ಪತ್ರ ಬರೆಯಲಾಗಿದೆ.

Puneeth geethanamana programme  Puneeth geethanamana programme today  Puneeth geethanamana programme today in Bengaluru  Puneeth Rajkumar news  ಪುನೀತ್ ಗೀತನಮ ಕಾರ್ಯಕ್ರಮ  ಪುನೀತ್ ಗೀತನಮ ಕಾರ್ಯಕ್ರಮ ಸುದ್ದಿ  ಇಂದು ಪುನೀತ್ ಗೀತನಮ ಕಾರ್ಯಕ್ರಮ  ಪುನೀತ್​ ರಾಜ್​ಕುಮಾರ ಸುದ್ದಿ
ಅರಮನೆ ಮೈದಾನದಲ್ಲಿ ಇಂದು ಮಧ್ಯಾಹ್ನ 3ಗಂಟೆಗೆ ಪುನೀತ್​ ನಮನ ಕಾರ್ಯಕ್ರಮ
author img

By

Published : Nov 16, 2021, 9:58 AM IST

Updated : Nov 16, 2021, 12:37 PM IST

ಬೆಂಗಳೂರು: ಇಂದು ಇಡೀ ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತದ ಕಲಾವಿದರು ಅಗಲಿದ ಪವರ್ ಸ್ಟಾರ್ ದಿ.ಪುನೀತ್ ರಾಜ್​​ಕುಮಾರ್​​ಗೆ (Puneeth Rajkumar) ಗೀತನಮನವನ್ನ ಸಲ್ಲಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸುತ್ತಿರುವ 'ಪುನೀತ್ ಗೀತ ನಮನ'ಕ್ಕೆ(Puneeth geetha namana) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಪ್ರತಿಯೊಂದು ಕೆಲಸವೂ ಅಪ್ಪು ನೆನಪನ್ನ ಹಸಿರಾಗಿಸುವ ಪ್ರಯತ್ನ ಮಾಡುತ್ತಿದೆ.

ಪುನೀತ್ ರಾಜ್​ಕುಮಾರ್ ಅಗಲಿ 19 ದಿನಗಳು ಕಳೆದಿವೆ. ಅಪ್ಪು ಸಮಾಧಿಗೆ ದರ್ಶನಕ್ಕಾಗಿ ಪ್ರತಿದಿನವೂ ಅಭಿಮಾನಿಗಳ ಸಾಗರವೇ ಹರಿದು ಬರ್ತಿದೆ. ಸಾವಿರ ಕನಸುಗಳನ್ನ ಹೊತ್ತಿದ್ದ ದೊಡ್ಮನೆ ಹುಡುಗನ ನೆನಪು ಎಂದೆಂದಿಗೂ ನಿತ್ಯಚೇತನ ಎಂಬ ನೆನಪಿನಲ್ಲೇ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ಗೀತನಮನ ನೆರವೇರಲಿದೆ.

ಇಡೀ ದಕ್ಷಿಣ ಭಾರತದ ಚಿತ್ರರಂಗದ ತಾರೆಯರು ಸಾಕ್ಷಿಯಾಗಲಿದ್ದಾರೆ‌. ಈಗಾಗಲೇ ಬೆಂಗಳೂರಿನ ಗಾಯಿತ್ರಿ ವಿವಾಹರ್​ನಲ್ಲಿ ಸಲಕ ಸಿದ್ಧತೆಗಳು ನಡೆಯುತ್ತಿದೆ. ಒಂದೇ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ತಾರೆಯರ ಜೊತೆ ದಕ್ಷಿಣ ಭಾರತದ ಸಿನಿದಿಗ್ಗಜರು ಭಾಗಿಯಾಗಲಿದ್ದಾರೆ. ಈಗಾಗಲೇ ಬೆಂಗಳೂರು ಪೊಲೀಸ್ ಕಮಿಷನರ್ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಇನ್ನು ಪಾಸ್ ಇಲ್ಲದವರಿಗೆ ಒಳಗಡೆ ಹೋಗಲು ಅವಕಾಶ ಇಲ್ಲಾ ಜೊತೆಗೆ ಸಾರ್ವಜನಿಕರಿಗೋ ಪ್ರವೇಶಕ್ಕೆ ಅವಕಾಶವಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ. ಸಂಗೀತ ನಿರ್ದೇಶಕ ಗುರು ಕಿರಣ್ ತಂಡದಿಂದ ಪುನೀತ್ ರಾಜ್‍ಕುಮಾರ್ ಸಿನಿಮಾಗಳ ಹಾಡುಗಳನ್ನ ಹಾಡಲಿದ್ದಾರೆ.ಜೊತೆಗೆ ಪ್ರಖ್ಯಾತ ಸ್ಯಾಕ್ಸೋ ಫೋನ್ ವಾದಕ ಮುರಳಿ ಅವ್ರಿಂದ ಕಾರ್ಯಕ್ರಮ ನಡೆಯಲಿದೆ. ಹಾಗೇ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಪುನೀತ್ ರಾಜ್‍ಕುಮಾರ್ ಬಗ್ಗೆ ಬರೆದಿರುವ ಗೀತೆಯನ್ನ ಹಾಡಲಾಗತ್ತೆ.

ಮಧ್ಯಾಹ್ನ 3 ಗಂಟೆಗೆ ನುಡಿನಮನ ಆರಂಭವಾಗುತ್ತೆ‌. ಈ ಕಾರ್ಯಕ್ರಮದಲ್ಲಿ ಸಿ ಎಂ ಬಸವರಾಜ್ ಬೊಮ್ಮಾಯಿ, ಸಚಿವ ಸಂಪುಟದ ಸಚಿವರು, ರಾಜಕೀಯ ಗಣ್ಯರು, ಕನ್ನಡ, ತೆಲುಗು, ತಮಿಳು ಹಾಗು ಮಲೆಯಾಳಂ ಚಿತ್ರರಂಗದ ತಾರೆಯರು ಪುನೀತ್ ನಮನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ‌. ಮೂರು ಗಂಟೆಗಳ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದೆ.

ಅರಮನೆ ಮೈದಾನದಲ್ಲಿ ನಮನ ಕಾರ್ಯಕ್ರಮ: ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ಆಯೋಜನೆಯಾಗಿದೆ. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ, ರಾಜಕೀಯದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇಂದು ಇಡೀ ಕನ್ನಡ ಚಿತ್ರರಂಗ ಕೆಲಸ ಮಾಡುವುದಿಲ್ಲ. ಸಿನಿಮಾ ಚಿತ್ರೀಕರಣಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ ರಜೆ ನೀಡಲಾಗಿದೆ.

ಚಿತ್ರರಂಗಕ್ಕೆ ಸಂಬಂಧಿಸಿದವರು ಎಲ್ಲರೂ ಕಾರ್ಯಕ್ರಮಕ್ಕೆ ಬರಲಿ ಎನ್ನುವ ಏಕೈಕ ಕಾರಣಕ್ಕೆ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿನಿಮಾ ಪ್ರದರ್ಶನಗಳು ಎಂದಿನಂತೆ ನಡೆಯಲಿವೆ. ಇದೇ ಕಾರಣಕ್ಕೆ ದೊಡ್ಡ ಮಟ್ಟದಲ್ಲೇ ಜನಸಾಗರವೊಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ಜಮಾವಣೆಯಾಗಲಿದೆ.

2000 ವಿಐಪಿ ಪಾಸ್​ಗಳ ವಿತರಣೆ : ವಿಶೇಷವಾಗಿ ಈಗಾಗಲೇ 2000 ವಿಐಪಿ ಪಾಸ್​​ಗಳನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಗೀತನಮನ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಅಪ್ಪು ಗೀತನಮನಕ್ಕೆ ಬರುವ ಕಾರಣ ಸೂಕ್ತ ಪೊಲೀಸ್​ ಬಿಗಿ ಭದ್ರತೆಯನ್ನೂ ಒದಗಿಸಲಾಗುತ್ತೆ. ಖ್ಯಾತ ಗಾಯಕ ಗುರುಕಿರಣ್ ಹಾಗೂ ಗೀತರಚನೆಕಾರ ವಿ.ನಾಗೆಂದ್ರಪ್ರಸಾದ್ ನೇತೃತ್ವದಲ್ಲೇ ಸಂಗೀತ ಸಂಜೆ ನಡೆಯಲಿದೆ.

ಮೆಗಾಸ್ಟಾರ್​- ಸೂಪರ್​​​ಸ್ಟಾರ್​ಗೂ ಆಮಂತ್ರಣ : ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್, ತಮಿಳಿನ ಸೂರ್ಯ ಸೇರಿದಂತೆ 40ಕ್ಕೂ ಹೆಚ್ಚಿನ ಪರಭಾಷಾ ತಾರೆಯರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸೋ ಸಾಧ್ಯತೆಗಳಿವೆ. ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದ್ದು, ಅರಮನೆ ಮೈದಾನವೂ ಸಜ್ಜಾಗುತ್ತಿದೆ.

ಆಯೋಜಕರಿಗೆ‌ ಸೂಚನೆ‌ ನೀಡಿದ ಪೊಲೀಸರು : ಕಾರ್ಯಕ್ರಮಕ್ಕೆ ಭದ್ರತೆ ಕೋರಿ ಪೊಲೀಸ್ ಇಲಾಖೆಗೆ ಆಯೋಜಕರು ಪತ್ರ ಬರೆದ ಹಿನ್ನೆಲೆ ಈ ಸಂಬಂಧ‌ ಪೊಲೀಸ್ ಇಲಾಖೆಯಿಂದ ಆಯೋಜಕರಿಗೆ ಸೂಚನೆ ನೀಡಲಾಗಿದೆ. ಅವಶ್ಯಕ ಬ್ಯಾರಿಕೇಡ್, ವೇದಿಕೆ ಸಿದ್ಧ ಮಾಡಿಕೊಳ್ಳುವುದು ಆಯೋಜಕರ ಜವಾಬ್ದಾರಿಯಾಗಿರಲಿದೆ. ಕಾರ್ಯಕ್ರಮಕ್ಕೆ ಬರುವ ಗಣ್ಯರಿಗೆ ಪಾಸ್, ಪ್ರತ್ಯೇಕ ಪ್ರವೇಶ ದ್ವಾರ, ವಾಹನ ನಿಲುಗಡೆಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು. ಬರುವ ಜನರಿಗೆ ಹಾಲೋಗ್ರಾಮ್ ಹೊಂದಿರುವ ಪಾಸ್​ಗಳನ್ನು ನೀಡಬೇಕು. ಒಂದು ಪಾಸ್ ಅನ್ನು ಒಬ್ಬರಿಗೆ ಮಾತ್ರ ಸೀಮಿತಪಡಿಸಬೇಕು. ಪಾಸ್​ಗಳಿಗೆ ಅನುಗುಣವಾಗಿ ಆಸನಗಳನ್ನು ನಿರ್ಮಿಸಬೇಕು. ಕಾರ್ಯಕ್ರಮಕ್ಕೆ ಬರುವ ಗಣ್ಯರ ವಿವರವನ್ನು ಮುಂಚಿತವಾಗಿ ಪೊಲೀಸ್ ಅಧಿಕಾರಿಗಳಿಗೆ ನೀಡಬೇಕು.

ಕೋವಿಡ್​ ನಿಯಮ ಪಾಲಿಸಲು ಕಟ್ಟುನಿಟ್ಟಿನ ಸೂಚನೆ : ಹೆಚ್ಚಿನ ಗಣ್ಯರು ಬರುವುದರಿಂದ ಸಿಸಿಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಕೇಂದ್ರ ವಿಭಾಗ ಪೊಲೀಸ್ ಆಯುಕ್ತರ ಕಚೇರಿಯಿಂದ ಆಯೋಜಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರಿಗೆ ಪತ್ರ ಬರೆಯಲಾಗಿದೆ‌.

Last Updated : Nov 16, 2021, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.