ನಾಡಿನಾದ್ಯಂತ ವಿಜಯದಶಮಿ ಹಬ್ಬದ ಮನೆ ಮಾಡಿದೆ. ಈ ಕೊರೊನಾ ಮಧ್ಯೆಯು, ನಾಡ ಹಬ್ಬವನ್ನ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬದ ಸಂಭ್ರಮ ಕನ್ನಡ ಚಿತ್ರರಂಗದಲ್ಲಿ ಸಹ ಕಳೆಗಟ್ಟಿದೆ. ಹಬ್ಬಕ್ಕೆ ನಟ ಪುನೀತ್ ರಾಜ್‍ಕುಮಾರ್ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಾಡಿನ ಸಮಸ್ತ ಜನತೆಗೆ, ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಕೂಡ ನಾಡಿನ ಸಮಸ್ತ ಜನತೆಗೆ, ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯವನ್ನ ತಿಳಿಸಿದ್ದಾರೆ. ವಿಶೇಷವಾಗಿ ಸ್ವಾಭಿಮಾನಿ ಮಂಡ್ಯದ ಜನತೆಗೆ ಸುಮಲತಾ ಅಂಬರೀಶ್ ವಿಶೇಷ ಶುಭಾಶಯ ಕೋರಿದ್ದಾರೆ.
ತಾಯಿ ಚಾಮುಂಡೇಶ್ವರಿ ಎಲ್ಲರಿಗೂ, ಆರೋಗ್ಯ ಕೊಟ್ಟು ಕಾಪಾಡಲಿ ಹಾಗೇ ಜಗತ್ತು ಕೊರೊನಾ ಮುಕ್ತವಾಗಲಿ, ಸುಖ, ಶಾಂತಿ, ಸಮೃದ್ಧಿ ಸಿಗಲಿ ಅಂತಾ ಸುಮಲತಾ ಅಂಬರೀಶ್ ಹಾರೈಸಿದ್ದಾರೆ.