ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವರ್ಕೌಟ್ ವಿಡಿಯೋಗಳು ವೈರಲ್ ಆಗುತ್ತಿರುವುದು ನಿಮಗೆ ಗೊತ್ತೇ ಇದೆ. ಲಾಕ್ ಡೌನ್ ಸಮಯದಲ್ಲಿ ಸುಮ್ಮನೆ ಕಾಲಹರಣ ಮಾಡದೆ ಸಿನಿಮಾ ಕೆಲಸ, ಫಿಟ್ನೆಸ್ ಅಂತ ಪುನೀತ್ ಬ್ಯುಸಿಯಾಗಿದ್ದಾರೆ.
ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಿಂದ ತಯಾರಾದ 'ಲಾ' ಹಾಗೂ 'ಫ್ರೆಂಚ್ ಬಿರ್ಯಾನಿ' ಚಿತ್ರಗಳನ್ನು ಪುನೀತ್ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆ ಕೂಡಾ ಮಾಡಿದ್ದರು. ಇದೀಗ ಪುನೀತ್ ತಮ್ಮ ಆಪ್ತರ ಜೊತೆ ಸೇರಿ ಫುಟ್ಬಾಲ್ ಹಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಜೊತೆಗೆ ರಾಘವೇಂದ್ರ ರಾಜ್ಕುಮಾರ್ ಮಕ್ಕಳಾದ ವಿನಯ್ ರಾಜ್‌ಕುಮಾರ್, ಯುವ ರಾಜ್ಕುಮಾರ್, ಪುನೀತ್ ಪರ್ಸನಲ್ ಫಿಟ್ನೆಸ್ ಟ್ರೈನರ್ ಶುಭಾಕರ್ ಶೆಟ್ಟಿ, ಫ್ಯಾಮಿಲಿ ಫ್ರೆಂಡ್ ಚಂದನ್ ಗೌಡ ಸೇರಿದಂತೆ ಕುಟುಂಬದ ಇತರರೊಂದಿಗೆ ಪುನೀತ್ ಫುಟ್ಬಾಲ್ ಆಡಿ ಎಂಜಾಯ್ ಮಾಡಿದ್ದಾರೆ.
ಪುನೀತ್ಗೆ ಫುಟ್ಬಾಲ್ ಎಂದರೆ ಚಿಕ್ಕ ವಯಸ್ಸಿನಿಂದಲೂ ಬಹಳ ಇಷ್ಟವಂತೆ. ಬೆಂಗಳೂರಿನ ರಾಮಯ್ಯ ಕಾಲೇಜು ಪುಟ್ಬಾಲ್ ಮೈದಾನದಲ್ಲಿ ಸ್ಯಾಂಡಲ್ವುಡ್ ರಾಜಕುಮಾರ ಫುಟ್ಬಾಲ್ ಆಡಿದ್ದಾರೆ. ಅಪ್ಪು ಫ್ಯಾಮಿಲಿ ಫ್ರೆಂಡ್ ಚಂದನ್ ಗೌಡ ಪುನೀತ್ ಫುಟ್ಬಾಲ್ ಆಡುತ್ತಿರುವ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ವಿಶೇಷ ಎಂದರೆ ಇತರ ಎಲ್ಲಾ ಆಟಗಳಿಗಿಂತ ಪುನೀತ್ಗೆ ಫುಟ್ಬಾಲ್ ಎಂದರೆ ಬಹಳ ಇಷ್ಟವಂತೆ. ಅಪ್ಪು ಫುಟ್ಬಾಲ್ ಆಟದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.