ಬೆಂಗಳೂರು: ಮಿಸ್ಟರ್ ಮೊಮ್ಮಗ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರೋ ನಟ ಎಸ್. ಎಸ್ ರವಿಗೌಡ ಅವರು ಈಗ ರೌಡಿ ಬೇಬಿ ಸಿನೆಮಾದ ಹಿಂದೆ ಬಿದ್ದಿದ್ದಾರೆ.
ಈಗಾಗಲೇ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರೋ ರೌಡಿ ಬೇಬಿ ಸಿನಿಮಾಗೆ ಹೆಬ್ಬುಲಿ ಸಿನಿಮಾ ನಿರ್ಮಾಪಕ ಶ್ರೀನಿವಾಸ್ ಗೌಡರ ಸಪೋರ್ಟ್ ಸಿಕ್ಕಿದೆ. ಹೌದು, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ, ರೌಡಿ ಬೇಬಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
- " class="align-text-top noRightClick twitterSection" data="">
ಉಮಾಪತಿ ಜೊತೆಯಾಗಿ ನಿರ್ಮಾಪಕ ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಸಾಥ್ ನೀಡಿದರು. ಕ್ಯಾಚಿ ಟೈಟಲ್ ಹೊಂದಿರುವ ರೌಡಿ ಬೇಬಿ ಸಿನಿಮಾ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ. ನಾಯಕ ನಟ ಎಸ್. ಎಸ್ ರವಿಗೌಡ ಸ್ವಲ್ಪ ದಪ್ಪ ಇದ್ದ ಕಾರಣ ಪಾತ್ರಕ್ಕಾಗಿ 15 ಕೆಜಿ ತೂಕವನ್ನ ಇಳಿಸಿ ಈ ಪಾತ್ರವನ್ನ ಮಾಡಿದ್ದಾರಂತೆ. ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್, ಬಿಗ್ ಬಾಸ್ ಹೋಗುವುದಕ್ಕಿಂತ ಮುಂಚೆ ಈ ಸಿನಿಮಾದಲ್ಲಿ ನಟಿಸಿದ್ದರಂತೆ.
ಕಾಲೇಜ್ನಲ್ಲಿ ಒಂದು ಗ್ಯಾಂಗ್ ಇರುತ್ತದೆ. ಅದರಲ್ಲಿ ರೌಡಿಬೇಬಿ ನಾನೇ ಅಂತಾರೆ ನಾಯಕಿ ದಿವ್ಯ ಸುರೇಶ್. ಯುವ ನಿರ್ದೇಶಕ ಯುರೋಪ್ ಕೃಷ್ಣ ತಮ್ಮ ಜೀವನದಲ್ಲಿ ನಡೆದ ಎರಡು ಮೂರು ಲವ್ ಬ್ರೇಕ್ ಸ್ಟೋರಿಗಳನ್ನ ಈ ಸಿನಿಮಾದಲ್ಲಿ ಹೇಳುತ್ತಿನಿ. ನಾವು ಮೊದಲ ಸಲ ನಮ್ಮೊಳಗಾದ ಪ್ರೀತಿಯನ್ನು ಮರೆಯುವುದಕ್ಕಾಗಲ್ಲ. ಇದನ್ನೇ ನಾನು ರೌಡಿ ಬೇಬಿ ಚಿತ್ರದಲ್ಲಿ ಹೇಳುತ್ತೇನೆ ಅಂತಾರೆ ನಿರ್ದೇಶಕ ಕೃಷ್ಣ.
ಈ ಸಿನಿಮಾದಲ್ಲಿ ಹಾಸ್ಯ ನಟರಾದ ಅಮಿತ್ ಹಾಗೂ ಕೆಂಪೇಗೌಡ ನಗಿಸುವ ಕೆಲಸ ಮಾಡಿದ್ದಾರೆ. ಅರ್ಮಾನ್ ಹಾಗೂ ಅಭಿಷೇಕ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಮೂರು ಅದ್ಭುತ ಹಾಡುಗಳನ್ನ ಕೊಟ್ಟಿದ್ದಾರೆ. ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ಸದ್ಯ ಟ್ರೈಲರ್ನಿಂದ ಗಮನ ಸೆಳೆಯುತ್ತಿರೋ ರೌಡಿ ಬೇಬಿ ಸಿನಿಮಾ ಫೆಬ್ರವರಿ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.