ETV Bharat / sitara

1980 : ರೆಟ್ರೋ ಲುಕ್​​ನಲ್ಲಿ ಪ್ರಿಯಾಂಕ ಉಪೇಂದ್ರ - Priyanka Upendra at Retro Look

ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ 1980 ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಫಸ್ಟ್​​ ಲುಕ್​ ರಿವೀಲ್​ ಆಗಿದೆ..

priyanka upendra in retro look
1980 : ರೆಟ್ರೋ ಲುಕ್​​ನಲ್ಲಿ ಪ್ರಿಯಾಂಕ ಉಪೇಂದ್ರ
author img

By

Published : Nov 18, 2020, 7:23 PM IST

ಪ್ರಿಯಾಂಕ ಉಪೇಂದ್ರ ಒಂದಾದ ಮೇಲೆ ಒಂದು ಸಿನಿಮಾ ಪ್ರಕಟ ಮಾಡುವ ಮೂಲಕ ಸಖತ್​​ ಬ್ಯುಸಿ ಇದ್ದಾರೆ. ಅಲ್ಲದೆ ಚಿತ್ರೀಕರಣದಲ್ಲಿಯೂ ಭಾಗಿಯಾಗುತ್ತಿದ್ದಾರೆ. ಸದ್ಯ ಪ್ರಿಯಾಂಕ ನಟಿಸುತ್ತಿರುವ 1980 ಚಿತ್ರದ ಪ್ರಿಯಾಂಕರ ಫಸ್ಟ್​​ ಲುಕ್​​ ರಿವೀಲ್​ ಆಗಿದೆ. ಕೆಂಪು ಸೀರೆಯುಟ್ಟು ರೆಟ್ರೋ ಶೈಲಿಯಲ್ಲಿ ಪ್ರಿಯಾಂಕ ಗಮನ ಸೆಳೆದಿದ್ದಾರೆ.

1980 ಚಿತ್ರವು ಟೈಟಲ್​​ನಿಂದಲೇ ಸಿನಿಮಾ ಬಗ್ಗೆ ಕ್ರೇಜ್​​ ಹುಟ್ಟಿಸಿದೆ. ಅಲ್ಲದೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್​ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಸದ್ಯ ಮಡಿಕೇರಿಯ ಸುಂದರ ತಾಣಗಳಲ್ಲಿ 1980 ಚಿತ್ರದ ಶೂಟಿಂಗ್​ ನಡೆಯುತ್ತಿದ್ದು, ಸಿನಿಮಾದ ಹೆಚ್ಚಿನ ಚಿತ್ರೀಕರಣ ಕೊಡಗಿನ ಭಾಗದಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

1990 ಚಿತ್ರಕ್ಕೆ ‘ಸವಾರಿ 2’, ‘ವಸಂತ ಕಾಲ’ ಸಿನಿಮಾಗಳಿಗೆ ಆ್ಯಕ್ಷನ್-ಕಟ್​​ ಹೇಳಿರುವ, ರಾಜ್ ಕಿರಣ್ ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ. ಆ್ಯಕ್ಷನ್-ಕಟ್​ ಹೇಳಲಿದ್ದಾರೆ. ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಮುಂತಾದವರು ನಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.