ETV Bharat / sitara

ಲೋಹಿತ್ ಬ್ಯಾನರ್ ಚಿತ್ರದಲ್ಲಿ ಪೃಥ್ವಿಗೆ ಜೊತೆಯಾಗಲಿದ್ದಾರಾ ಪ್ರಿಯಾಂಕ ಉಪೇಂದ್ರ..? - Lohit Manu Banner first film

ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿರುವ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರ ಬೆಂಗಳೂರು ಹೊರವಲಯದಲ್ಲಿ ಜರುಗುತ್ತಿದ್ದು ಪ್ರಿಯಾಂಕ ಉಪೇಂದ್ರ ಚಿತ್ರತಂಡ ಸೇರಿಕೊಂಡಿದ್ದಾರೆ. ಆದರೆ ಪ್ರಿಯಾಂಕ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಜೊತೆಯಾಗಿ ನಟಿಸುತ್ತಿದ್ದಾರಾ...ಇಲ್ಲವಾ ಎಂಬುದರ ಬಗ್ಗೆ ಸ್ಪಷ್ಟನೆ ದೊರೆತಿಲ್ಲ.

Lohit banner Life is beautiful movie
ಪ್ರಿಯಾಂಕ ಉಪೇಂದ್ರ
author img

By

Published : Sep 16, 2020, 2:51 PM IST

'ಲೈಫ್ ಈಸ್ ಬ್ಯೂಟಿಫುಲ್' ಸ್ಯಾಂಡಲ್​ವುಡ್​​ನಲ್ಲಿ ತಯಾರಾಗುತ್ತಿರುವ ಬ್ಯೂಟಿಫುಲ್ ಸಿನಿಮಾ. 'ದಿಯಾ' ಚಿತ್ರದಲ್ಲಿ ಎಲ್ಲರ ಗಮನ ಸೆಳೆದ ಪೃಥ್ವಿ ಅಂಬರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಎಂಟ್ರಿ ಆಗಿದೆ.

Lohit banner Life is beautiful movie
'ಲೈಫ್ ಈಸ್ ಬ್ಯೂಟಿಫುಲ್'

'ಮಮ್ಮಿ ಸೇವ್ ಮಿ' ಹಾಗೂ 'ದೇವಕಿ' ಚಿತ್ರಗಳನ್ನು ನಿರ್ದೇಶಿಸಿ ಸ್ಯಾಂಡಲ್​​​ವುಡ್ ಭರವಸೆಯ ನಿರ್ದೇಶಕ ಎಂದು ಹೆಸರಾಗಿರುವ ಲೋಹಿತ್ ಮನು ಇದೀಗ ಮೊದಲ ಬಾರಿಗೆ ತಮ್ಮ ಪ್ರೊಡಕ್ಷನ್​​ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಕೆರೋಲಿನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಪ್ರಿಯಾಂಕ ಅವರ ಸಣ್ಣ ಪೋಸ್ಟರ್​​​​​​​​​​​​​​ ರಿವೀಲ್ ಆಗಿದ್ದು ಚಿತ್ರದಲ್ಲಿ ಅವರು ಪೃಥ್ವಿ ಅಂಬರ್​​​ಗೆ ಜೊತೆಯಾಗಿ ನಟಿಸಲಿದ್ದಾರಾ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

Lohit banner Life is beautiful movie
ಪ್ರಿಯಾಂಕ ಉಪೇಂದ್ರ

ಇದಕ್ಕೂ ಮುನ್ನ ಲೋಹಿತ್ ಮನು ನಿರ್ದೇಶನದಲ್ಲಿ ಅಭಿನಯಿಸಿದ್ದ ಪ್ರಿಯಾಂಕ ಉಪೇಂದ್ರ ಈಗ ಲೋಹಿತ್ ಬ್ಯಾನರ್​​​​​​​​​​​​​​​​​ನಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಪ್ರಿಯಾಂಕಾಗೆ ಲೋಹಿತ್ ಥ್ಯಾಂಕ್ಸ್​​​​ ಹೇಳಿದ್ದಾರೆ. ಸದ್ಯದಲ್ಲೇ ಪ್ರಿಯಾಂಕ ಉಪೇಂದ್ರ ಅವರ ಕೆರೋಲಿನ್ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಅರುಣ್ ಕುಮಾರ್ ಹಾಗೂ ಸಬೂ ಅಲೋಶಿಯಸ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ಕಿಶೋರ್ ನರಸಿಂಹ ಮತ್ತು ಬಿ.ಜಿ. ಅರುಣ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ‌. ಬೆಂಗಳೂರಿನ ರಾಮೋಹಳ್ಳಿಯ ಫಾರ್ಮ್​ಹೌಸ್​​​​​​​​​​​​​​​ನಲ್ಲಿ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ಶೂಟಿಂಗ್ ನಡೆಯುತ್ತಿದೆ.

Lohit banner Life is beautiful movie
ಪೃಥ್ವಿ ಅಂಬರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.