ಲಾಕ್ ಡೌನ್ ತೆರೆವುಗೊಳಿಸಿದ ನಂತರ ಸ್ಯಾಂಡಲ್ವುಡ್ ಸೆಲಬ್ರಿಟಿಗಳು ಮತ್ತೆ ಫಿಟ್ನೆಸ್ ಕಡೆ ನಿಧಾನವಾಗಿ ಗಮನ ನೀಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಮನೆಯಲ್ಲೇ ಇದ್ದವರು ಈಗ ಮನೆಯಿಂದ ಹೊರ ಬಂದು ಹಾರ್ಸ್ ರೈಡಿಂಗ್, ಕ್ರಿಕೆಟ್, ಫುಟ್ಬಾಲ್ನಂತ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಬಟ್ಟಲು ಕಣ್ಣುಗಳ ಚೆಲುವೆ, 'ಪೊರ್ಕಿ' ಸುಂದರಿ ಪ್ರಣಿತಾ ಸುಭಾಷ್ ಕೂಡಾ ಲಾಕ್ ಡೌನ್ ನಂತರ ಮತ್ತೆ ಫಿಟ್ನೆಸ್ ಮೇಂಟೈನ್ ಮಾಡೋಕೆ ಮುಂದಾಗಿದ್ಧಾರೆ. ವಿಶೇಷ ಅಂದ್ರೆ ಪ್ರಣಿತಾ ಜಿಮ್ನಲ್ಲಿ ವರ್ಕೌಟ್ ಮಾಡುವುದರ ಜೊತೆಗೆ ಹಾರ್ಸ್ ರೈಡಿಂಗ್ ಮೂಲಕ ಕೂಡಾ ಫಿಟ್ ಆಗೋಕೆ ಹೊರಟಿದ್ದಾರೆ. ಕಳೆದ 2 ವಾರಗಳಿಂದ ಪ್ರಣಿತಾ ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿರುವ ಹಾರ್ಸ್ ರೈಡಿಂಗ್ ಕೋಚಿಂಗ್ ಸೆಂಟರ್ನಲ್ಲಿ ಹಾರ್ಸ್ ರೈಡಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
ಪ್ರಣಿತಾ ಇದ್ದಕ್ಕಿದ್ದಂತೆ ಹಾರ್ಸ್ ರೈಡಿಂಗ್ ಪ್ರಾಕ್ಟೀಸ್ ಮಾಡ್ತಿರೋದಕ್ಕೆ ಫಿಟ್ನೆಸ್ ಜೊತೆಗೆ ಮತ್ತೊಂದು ಬಲವಾದ ಕಾರಣ ಇದೆಯಂತೆ. 'ಈಗಾಗಲೇ ಕಮಿಟ್ ಆಗಿರುವ ದ್ವಿಭಾಷಾ ಚಿತ್ರವೊಂದರಲ್ಲಿ ನಾನು ಹಾರ್ಸ್ ರೈಡರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ ಆದ್ದರಿಂದ ಹಾರ್ಸ್ ರೈಡಿಂಗ್ ಪ್ರಾಕ್ಟೀಸ್ ಮಾಡ್ತಿದ್ದೀನಿ' ಎಂದು ಪ್ರಣಿತಾ ಹೇಳಿದ್ದಾರೆ. ಅಲ್ಲದೆ ಪ್ರಣಿತಾ ಈಗ ಯಾರ ನೆರವು ಇಲ್ಲದೆ, ಭಯವೂ ಇಲ್ಲದೆ ಒಬ್ಬರೇ ಕುದುರೆ ಸವಾರಿ ಮಾಡ್ತಾರಂತೆ.