'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ಯುವ ನಿರ್ದೇಶಕ ಗುರುದತ್ ಗಾಣಿಗ ಮತ್ತೊಂದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇವರ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರಕ್ಕೆ "ಮಾಫಿಯಾ" ಎಂದು ಹೆಸರಿಡಲಾಗಿದೆ. ಇಂದು ಪ್ರಜ್ವಲ್ ಜನ್ಮದಿನದ ಅಂಗವಾಗಿ ಚಿತ್ರತಂಡ ಮಾಫಿಯಾದ ಫಸ್ಟ್ ಲುಕ್ ಬಿಡುಗೆ ಮಾಡಿದೆ.
ಇಂದು ಪ್ರಜ್ವಲ್ ಹುಟ್ಟುಹಬ್ಬದ ಪ್ರಯುಕ್ತ ಶೀರ್ಷಿಕೆ ಅನಾವರಣ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಕೇಕ್ ಕತ್ತರಿಸುವ ಮೂಲಕ ಪ್ರಜ್ವಲ್ ಅವರ ಹುಟ್ಟುಹಬ್ಬ ಆಚರಿಸಿದ ಚಿತ್ರತಂಡ, ಪ್ರಮೋಷನ್ ಪೋಸ್ಟರ್ ಸಹ ರಿಲೀಸ್ ಮಾಡಿದೆ. ಇದು ಪ್ರಜ್ವಲ್ ನಾಯಕರಾಗಿ ನಟಿಸುತ್ತಿರುವ 35 ನೇ ಚಿತ್ರ.
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಪ್ರಜ್ವಲ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಇನ್ನು ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.
ಇದನ್ನೂ ಓದಿ:Bigg Boss Season 8: ಚಂದ್ರಚೂಡ್ಗೆ ಕಿಚ್ಚ ತರಾಟೆ ತೆಗೆದುಕೊಂಡಿದ್ದೇಕೆ ಗೊತ್ತಾ?