ETV Bharat / sitara

ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ 'ಅರ್ಜುನ್ ಗೌಡ'...ಅಕ್ಟೋಬರ್​​​ನಲ್ಲಿ ಆಡಿಯೋ ರಿಲೀಸ್​​​ - ಸಾಧು ಕೋಕಿಲ

ಲಕ್ಕಿ ಶಂಕರ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅರ್ಜುನ್ ಗೌಡ’ ಸಿನಿಮಾ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದು, ಮುಂದಿನ ತಿಂಗಳು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ರಾಮು ತಿಳಿಸಿದ್ದಾರೆ.

'ಅರ್ಜುನ್ ಗೌಡ'
author img

By

Published : Sep 14, 2019, 12:42 PM IST

ನಾಯಕ ಪ್ರಜ್ವಲ್ ದೇವರಾಜ್ ಪ್ರಥಮ ಬಾರಿಗೆ ಬಾಕ್ಸರ್ ಆಗಿ ಅಭಿನಯಿಸಿರುವ ಚಿತ್ರ ‘ಅರ್ಜುನ್ ಗೌಡ’ ಬಹುತೇಕ ಚಿತ್ರೀಕರಣ ಮುಗಿದಿದೆ. ವಿದೇಶದಲ್ಲಿ ಚಿತ್ರೀಕರಣವಾಗುವ ದೃಶ್ಯಗಳಷ್ಟೇ ಬಾಕಿ ಇವೆ ಎನ್ನಲಾಗಿದೆ.

prajwal
ಪ್ರಜ್ವಲ್ ದೇವರಾಜ್​​, ಪ್ರಿಯಾಂಕ ತಿಮ್ಮೇಶ್

ಅಕ್ಟೋಬರ್ ತಿಂಗಳಿನಲ್ಲಿ ಧ್ವನಿಸುರಳಿ ಸಮಾರಂಭವನ್ನು ಏರ್ಪಡಿಸುವುದಾಗಿ ನಿರ್ಮಾಪಕ ರಾಮು ಹೇಳಿದ್ದಾರೆ. ಇನ್ನು ಈ ಸಿನಿಮಾ ಖಂಡಿತ ತೆಲುಗಿನ 'ಅರ್ಜುನ್ ರೆಡ್ಡಿ' ರೀಮೇಕ್ ಅಲ್ಲ ಎಂದು ರಾಮು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಹೆಸರು ಕೇಳಿದೊಡನೆ ಎಲ್ಲರೂ ಇದು ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ರೀಮೇಕ್ ಇರಬಹುದು ಎಂದುಕೊಂಡಿದ್ದರು. ಇನ್ನು ಈ ಚಿತ್ರದಲ್ಲಿ ಬಾಕ್ಸರ್ ಆಗಿ ಅಭಿನಯಿಸಲು ಪ್ರಜ್ವಲ್ ದೇವರಾಜ್​ ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

prajwal
ಬಾಕ್ಸರ್ ಪಾತ್ರದಲ್ಲಿ ಪ್ರಜ್ವಲ್​​​

ಲಕ್ಕಿ ಶಂಕರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಹಾಡುಗಳಿಗೆ ಧರ್ಮ ವಿಶ್ ಸಂಗೀತವಿದೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ವಹಿಸಿದ್ದಾರೆ. ಪ್ರಿಯಾಂಕ ತಿಮ್ಮೇಶ್ ಚಿತ್ರದಲ್ಲಿ ಪ್ರಜ್ವಲ್​​​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನಾ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್​​​​​​​​​ ಮಂಗಳೂರು, ಹನುಮಂತೇ ಗೌಡ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಅರ್ಜುನ್ ಗೌಡ ಚಿತ್ರೀಕರಣ ಮುಗೀತು

ನಾಯಕ ಪ್ರಜ್ವಲ್ ದೇವರಾಜ್ ಪ್ರಥಮ ಬಾರಿಗೆ ಬಾಕ್ಸರ್ ಆಗಿ ಅಭಿನಯಿಸಿರುವ ಚಿತ್ರ ಅರ್ಜುನ್ ಗೌಡ ದೇಸೀ ಭಾಗದ ಚಿತ್ರೀಕರಣವನ್ನು ಪೂರ್ತಿಗೊಳಿಸಿದೆ.

ಸಧ್ಯಕ್ಕೆ ವಿದೇಶದಲ್ಲಿ ಕೆಲವು ಭಾಗದ ಚಿತ್ರೀಕರಣ ಈ ತಿಂಗಳ ಅಂತ್ಯದಲ್ಲಿ ಪೂರೈಸಿಕೊಂಡು ಅಕ್ಟೋಬರ್ ತಿಂಗಳಿನಲ್ಲಿ ಧ್ವನಿ ಸುರುಳಿ ಸಮಾರಂಭ ಎಂದು ಹೆಸರಾಂತ ನಿರ್ಮಾಪಕ ರಾಮು ಹೇಳುತ್ತಾರೆ. ಇದು ತೆಲುಗಿನ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಚಿತ್ರದ ಅವತರಿಣಿಕೆ ಅಲ್ಲ ಎಂದು ಸಹ ನಿರ್ಮಾಪಕರು ಹೇಳುತ್ತಾರೆ.

ನಾಯಕ ಬಾಕ್ಸರ್ ಆಗಲು ಹಲವು ತಯಾರಿಗಳನ್ನು ಮಾಡಿಕೊಂಡು ಚಿತ್ರೀಕರಣದಲ್ಲಿ ಭಾಗವಸಿದ್ದಾರೆ. ಲಕ್ಕಿ ಶಂಕರ್ ರಚನೆ ಹಾಗೂ ನಿರ್ದೇಶನ ಈ ಚಿತ್ರಕ್ಕಿದೆ. ಧರ್ಮ ವಿಶ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ವಹಿಸಿದ್ದಾರೆ.

ಪ್ರಿಯಾಂಕ ತಿಮ್ಮೆಶ್ (ಗಣಪ ಚಿತ್ರದ ನಾಯಕಿ, ಪಟಾಕಿ ಚಿತ್ರದ ತಂಗಿ ಪಾತ್ರದಾರಿ) ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಎದುರು ನಾಯಕಿ. ಸಾಧು ಕೋಕಿಲ, ಕಡ್ಡಿ ಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಷ್, ಯಮುನ ಶ್ರೀನಿದಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಷ್ ಮಂಗಳೂರು, ಹನುಮಂತೆ ಗೌಡ ಹಾಗೂ ಇತರರು ತಾರಗಣದಲ್ಲಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.