ETV Bharat / sitara

ದರ್ಶನ್​ ಎಂಟ್ರಿಯಾದಾಗ ಶಿಳ್ಳೆ ಹೊಡೆದ್ರಂತೆ ಪ್ರಜ್ವಲ್​ ದೇವರಾಜ್​​​ - darshan movie

ಪ್ರಜ್ವಲ್​ ನಟನೆಯ 30ನೇ ಸಿನಿಮಾ ಇನ್ಸ್​ಪೆಕ್ಟರ್​​ ವಿಕ್ರಮ್​​. ಸಿನಿಮಾ ಬಗ್ಗೆ ಮಾತನಾಡಿದ ಪ್ರಜ್ವಲ್​, ಈ ಸಿನಿಮಾ ನನಗೆ ಹೊಸ ಅನುಭವ ನೀಡಿದೆ. ಅಲ್ಲದೆ ವಿಶೇಷ ಶೇಡ್​​ನಲ್ಲಿ ಕಾಣಿಸಿಕೊಂಡಿರುವುದು ಖುಷಿ ನೀಡಿದೆ. ಇನ್ನು ಸಿನಿಮಾದಲ್ಲಿ ದರ್ಶನ್​ ಎಂಟ್ರಿಯಾದಾಗ ನಾನೇ ಶಿಳ್ಳೆ ಹೊಡೆದು ಖುಷಿ ಪಟ್ಟೆ ಎಂದು ಹೇಳಿದ್ದಾರೆ.

ದರ್ಶನ್​ ಎಂಟ್ರಿಯಾದಾಗ ನಾನು ಶಿಳ್ಳೆ ಹೊಡ್ದೆ : ಪ್ರಜ್ವಲ್​ ದೇವರಾಜ್​​​

author img

By

Published : Feb 5, 2021, 5:44 PM IST

ರಾಜ್ಯ ಸರ್ಕಾರ ಇಂದಿನಿಂದ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ನೀಡಿದ ಬೆನ್ನಲ್ಲೇ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್​​ಪೆಕ್ಟರ್ ವಿಕ್ರಂ ಸಿನಿಮಾಗೆ ಗ್ರ್ಯಾಂಡ್ ವೆಲ್​ಕಮ್ ಸಿಕ್ಕಿದೆ. ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್ ಆಗಿ ನಟಿಸಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಪ್ರಜ್ವಲ್​ ನಟನೆಯ 30ನೇ ಸಿನಿಮಾ ಇನ್​​ಸ್ಪೆಕ್ಟರ್​​ ವಿಕ್ರಮ್​​. ಸಿನಿಮಾ ಬಗ್ಗೆ ಮಾತನಾಡಿದ ಪ್ರಜ್ವಲ್,​ ಈ ಸಿನಿಮಾ ನನಗೆ ಹೊಸ ಅನುಭವ ನೀಡಿದೆ. ಅಲ್ಲದೆ ವಿಶೇಷ ಶೇಡ್​​ನಲ್ಲಿ ಕಾಣಿಸಿಕೊಂಡಿರುವುದು ಖುಷಿ ನೀಡಿದೆ. ಇನ್ನು ಸಿನಿಮಾದಲ್ಲಿ ದರ್ಶನ್​ ಎಂಟ್ರಿಯಾದಾಗ ನಾನೇ ಶಿಳ್ಳೆ ಹೊಡೆದು ಖುಷಿ ಪಟ್ಟೆ ಎಂದು ಹೇಳಿದ್ದಾರೆ.

ದರ್ಶನ್​ ಎಂಟ್ರಿಯಾದಾಗ ಶಿಳ್ಳೆ ಹೊಡೆದರಂತೆ ಪ್ರಜ್ವಲ್​ ದೇವರಾಜ್​​​

ಇನ್ಸ್​​ಪೆಕ್ಟರ್ ವಿಕ್ರಂ ಸಿನಿಮಾ ಡ್ರಗ್ಸ್ ಮಾಫಿಯಾ ಸುತ್ತಾ ನಡೆಯುವ ಕಥೆ. ಪ್ರಜ್ವಲ್ ದೇವರಾಜ್ ಲವರ್ ಬಾಯ್ ಜೊತೆ ನಿಷ್ಠಾವಂತ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದು, ಭಾವನಾ ಜೊತೆ ಪ್ರಜ್ವಲ್ ದೇವರಾಜ್ ಕೆಮಿಸ್ಟ್ರಿ ಸಖತ್ತಾಗಿ ವರ್ಕ್ ಔಟ್ ಆಗಿದೆ.

ನಿರ್ದೇಶಕ ನರಸಿಂಹ ಚೊಚ್ಚಲ ಚಿತ್ರದಲ್ಲಿ ಒಳ್ಳೆ ಕಥೆಯನ್ನ ಹೇಳೋದಿಕ್ಕೆ ಹೊರಟಿದ್ರು. ಚಿತ್ರದ ಮೊದಲ ಭಾಗದಲ್ಲಿ ಎಡವಿದ್ದಾರೆ‌. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ನವೀನ್ ಕುಮಾರ್ ಕ್ಯಾಮರಾ ವರ್ಕ್ ಚಿತ್ರಕ್ಕೆ ಬೋನಸ್ ಪಾಯಿಂಟ್. 100 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ಇರುವ ಕಾರಣ ನಿರ್ಮಾಪಕ ವಿಖ್ಯಾತ್ ಕೂಡ ಖುಷಿಯಾಗಿದ್ದಾರೆ‌. 10‌ ತಿಂಗಳ ಬಳಿಕ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದನ್, ಸಹೋದರ ಪ್ರಣಮ್ ಹಾಗೂ ಚಿತ್ರತಂಡದ ಜೊತೆ ಸಿನಿಮಾ ವೀಕ್ಷಿಸುವ ಮೂಲಕ ಚಿತ್ರ ಸಕ್ಸಸ್​ಗೆ ಅಭಿಮಾನಿಗಳು ಕಾರಣ ಅಂತಾ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.