ETV Bharat / sitara

ಇಷ್ಟವಾಗಲಿಲ್ಲ 'ಸಾಹೋ' ನ್ಯೂ ಲುಕ್​​...ಚಿತ್ರತಂಡದ ಮೇಲೆ ಡಾರ್ಲಿಂಗ್ ಫ್ಯಾನ್ಸ್ ಬೇಸರಗೊಂಡಿದ್ದೇಕೆ? - ಪ್ರಭಾಸ್​

ಇಂದು ರಿಲೀಸ್​ ಆಗಿರುವ 'ಸಾಹೋ' ಚಿತ್ರದ ಸೆಕೆಂಡ್​ ಪೋಸ್ಟರ್​​​ ಪ್ರಭಾಸ್​ ಫ್ಯಾನ್ಸ್​​ಗೆ ಇಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಮೇಲೆ ಡಾರ್ಲಿಂಗ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 27, 2019, 4:52 PM IST

ಸೂಪರ್ ಸ್ಟಾರ್ ಪ್ರಭಾಸ್​​ ನಟನೆಯ ಸಾಹೋ ಚಿತ್ರ ಇದೇ ಆಗಸ್ಟ್​​ 15 ರಂದು ರಿಲೀಸ್​ ಆಗುತ್ತಿದೆ. ಎರಡು ವರ್ಷಗಳ ನಂತರ ತೆರೆ ಮೇಲೆ ಹಾಜರಾಗುತ್ತಿರುವ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ.

ಹಾಲಿವುಡ್​ ಲೆವೆಲ್​​ನ ಮೇಕಿಂಗ್​ನಿಂದಲೇ ಸದ್ದು ಮಾಡುತ್ತಿರುವ ಸಾಹೋ ಚಿತ್ರಕ್ಕೆ ಬರೋಬ್ಬರಿ 200 ಕೋಟಿ ಖರ್ಚು ಮಾಡಲಾಗಿದೆ. ಕೇವಲ 20-25 ನಿಮಿಷಗಳ ಆ್ಯಕ್ಷನ್​ ಸೀನ್​​ಗಳಿಗೆ ಅಂತಾನೇ 50 ಕೋಟಿ ರೂ. ವ್ಯಯಿಸಲಾಗಿದೆ.

ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ರೆಡಿಯಾಗಿರುವ ಈ ಚಿತ್ರ ಬಾಲಿವುಡ್​​ಲ್ಲಿ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಬಾಹುಬಲಿ ಸರಣಿ ಚಿತ್ರಗಳಿಂದ ಬೆರಗಾಗಿರುವ ಬಿಟೌನ್​ ಮಂದಿ, ಸಾಹೋ ಮೇಲೆ ಸ್ವಲ್ಪ ಜಾಸ್ತಿನೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಬಾಹುಬಲಿ ಚಿತ್ರಕ್ಕೆ ಮಾಡಿರುವ ಪ್ರಮೋಷನ್​ನಂತೆ ಸಾಹೋ ಚಿತ್ರಕ್ಕೆ ಮಾಡುತ್ತಿಲ್ಲ ಎನ್ನುವುದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ನಿರ್ದೇಶಕ ಎಸ್​.ಎಸ್.​ ರಾಜಮೌಳಿ ತಮ್ಮ ಬಾಹುಬಲಿ ಚಿತ್ರದ ಪ್ರಮೋಷನ್ ಭರ್ಜರಿಯಾಗೇ ಮಾಡಿದ್ದರು. ಇದು ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದರಂತೆ ಸಾಹೋ ಚಿತ್ರಕ್ಕೂ ಪ್ರಮೋಷನ್ ಸಿಗಬೇಕೆನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ.

ಮೊನ್ನೆಯಷ್ಟೆ ರಿಲೀಸ್ ಡೇಟ್​​ ಒಳಗೊಂಡು ಫಸ್ಟ್ ಲುಕ್​ ರಿಲೀಸ್ ಮಾಡಲಾಗಿತ್ತು. ಇದನ್ನು ನೋಡಿದ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ಇಂದು ರಿಲೀಸ್ ಆಗಿರುವ ಎರಡನೇ ಪೋಸ್ಟರ್ ಅಭಿಮಾನಿಗಳ ಬೇಸರ ಮತ್ತಷ್ಟು ಹೆಚ್ಚಿಸಿದೆ. ಪ್ರಭಾಸ್​ ಅವರ ಈ ಲುಕ್ ಫೋಟೋಶಾಪ್​​ನಲ್ಲಿ ಮಾಡಿದಂತಿದ್ದು, ಅಭಿಮಾನಿಗಳ ಮನ ಮುಟ್ಟುವಲ್ಲಿ ವಿಫಲಗೊಂಡಿದೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಕೂಡ ಮೂರು ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ ಈ ಲುಕ್​.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.