ETV Bharat / sitara

ಚಿತ್ರರಂಗದ 'ಕಾಮನಬಿಲ್ಲು', ಡಾ.'ರಾಜ್‌'ಯೋಗಿ.. ಅಪ್ಪನ ಪವರ್​ಫುಲ್​ ವಿಡಿಯೋ ಶೇರ್​ ಮಾಡಿದ ಅಪ್ಪು.. - ಡಾ ರಾಜ್ ಕುಮಾರ್

ಯೋಗದಿಂದ ನಾವು ಆರೋಗ್ಯವಾಗಿರುತ್ತೇವೆ ಎಂದು ವರ ನಟ ಡಾ ರಾಜ್ ಕುಮಾರ್ ಬಹಳ ವರ್ಷಗಳ ಹಿಂದೆಯೇ ಅಭಿಮಾನಿ ದೇವರುಗಳಿಗೆ ಮನವರಿಕೆ ಮಾಡಿ ಕೊಟ್ಟಿದ್ರು. ಸರಳತೆಗೆ ಹೆಸರಾಗಿದ್ದ ಡಾ. ರಾಜ್​ ಬದುಕಿನಲ್ಲಿ ಯೋಗ ಒಂದು ಪ್ರಮುಖ ಅಂಗವಾಗಿತ್ತು.

Yoga day
ಡಾ ರಾಜ್ ಕುಮಾರ್
author img

By

Published : Jun 21, 2020, 5:47 PM IST

ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಯೋಗ ಬಲ್ಲವರಿಂದ ರೋಗ ಬಹುದೂರ ಇರುತ್ತದೆ.

ರಾಜ್​ ವಿಡಿಯೋ ಶೇರ್​ ಮಾಡಿದ ಪವರ್​ ಸ್ಟಾರ್..

ಯೋಗದಿಂದ ನಾವು ಆರೋಗ್ಯವಾಗಿರುತ್ತೇವೆ ಎಂದು ವರನಟ ಡಾ. ರಾಜ್‌ಕುಮಾರ್ ಬಹಳ ವರ್ಷಗಳ ಹಿಂದೆಯೇ ಅಭಿಮಾನಿ ದೇವರುಗಳಿಗೆ ಮನವರಿಕೆ ಮಾಡಿ ಕೊಟ್ಟಿದ್ರು. ಸರಳತೆಗೆ ಹೆಸರಾಗಿದ್ದ ಡಾ. ರಾಜ್​ ತಮ್ಮ ಬದುಕಿನಲ್ಲಿ ಯೋಗಕ್ಕೂ ಒಂದು ಪ್ರಮುಖ ಸ್ಥಾನ ಕಲ್ಪಿಸಿದ್ದರು. ಅಲ್ಲದೆ ಅಣ್ಣಾವ್ರು ಬದುಕಿದ್ದಷ್ಟೂ ವರ್ಷ ಯೋಗ ಮಾಡುತ್ತಿದ್ದರು.

ಬಹುತೇಕರಿಗೆ ಇದು ತಿಳಿಯದ ವಿಷಯವೇನಲ್ಲ. ಅಲ್ಲದೆ ಅಣ್ಣಾವ್ರು ಯೋಗ ಮಾಡುವುದಕ್ಕೆ ಅದೆಷ್ಟೋ ಮಂದಿಗೆ ಸ್ಫೂರ್ತಿ ಕೂಡ ಆಗಿದ್ರು. ಜತೆಗೆ ಕಾಮನಬಿಲ್ಲು ಚಿತ್ರದಲ್ಲಿ ಡಾ.ರಾಜ್‌ ಯೋಗಾಸನ ಮಾಡಿದ್ದರು.ಆ ಚಿತ್ರ ಆರಂಭವಾಗುವುದೇ ಅಣ್ಣಾವ್ರು ಯೋಗಾಸನದ ಮೂಲಕ. ಹಾಗಾಗಿ ಪವರ್‌ಸ್ಟಾರ್ ಪುನೀತ್‌ರಾಜ್​ಕುಮಾರ್ ರಾಜ್​ ಕುಮಾರ್​ ಅವರ ವಿವಿಧ ಭಂಗಿಯಲ್ಲಿ ಯೋಗ ಮಾಡುವ ಸ್ಪೆಷಲ್ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.