'ಯುವರತ್ನ' ಟೈಟಲ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿರೋ ಚಿತ್ರ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ನಾಳೆ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಅಬ್ಬರಿಸಲು ರೆಡಿಯಾಗಿದೆ.
ಈ ಮಧ್ಯೆ ಯುವರತ್ನ ಚಿತ್ರದ ಹೈವೋಲ್ಟೇಜ್ ಹಾಡು ಪವರ್ ಆಫ್ ಯೂತ್ ಪ್ರೊಮೋವನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಹಾಡಿನಲ್ಲಿ ಪವರ್ ಸ್ಟಾರ್ ಐದಾರು ಸ್ಟೈಲಿಶ್ ಕಾಸ್ಟೂಮ್ನಲ್ಲಿ ಮಿಂಚಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪವರ್ ಸ್ಟಾರ್ ಕಾಂಬಿನೇಷನ್ನಲ್ಲಿ ಮೂಡಿ ಬರ್ತೀರೋ ಹೈ ವೋಲ್ಟೇಜ್ ಚಿತ್ರ. ಪುನೀತ್ ರಾಜ್‍ಕುಮಾರ್ ಜೊತೆ ಟಾಲಿವುಡ್ ಸುಂದರಿ ಸಯೀಶಾ ರೋಮ್ಯಾನ್ಸ್ ಮಾಡಿದ್ದಾರೆ.
ಪ್ರಕಾಶ್ ರೈ, ಸಾಯಿಕುಮಾರ್, ಧನಂಜಯ, ದಿಗಂತ್, ಸೋನು ಗೌಡ, ವಿಶಾಲ್ ಹೆಗ್ಡೆ, ಸಾಧುಕೋಕಿಲ, ರಂಗಾಯಣ ರಘು, ಅಚ್ಯುತ್ ಕುಮಾರ್, ಅವಿನಾಶ್, ಸುಧಾರಾಣಿ, ಪ್ರಕಾಶ್ ಬೆಳವಾಡಿ, ತಾರಕ್ ಪೊನ್ನಪ್ಪ, ರಾಜೇಶ್ ನಟರಂಗ, ಗುರುದತ್, ಕುರಿ ಪ್ರತಾಪ್, ಹನುಮಂತೇ ಗೌಡ ಸೇರಿ ಅದ್ದೂರಿ ತಾರಾ ಬಳಗ ಈ ಚಿತ್ರದಲ್ಲಿದೆ.
- " class="align-text-top noRightClick twitterSection" data="">
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ. ಕಾರ್ತಿಕ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ.
ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ಚಿನ್ನಿ ಪ್ರಕಾಶ್, ಜಾನಿ, ಸಿರೀಶ್, ಮೋಹನ್ ನೃತ್ಯ ನಿರ್ದೇಶನ, ರಾಮ್ ಲಕ್ಷ್ಮಣ್, ಅಂಬು ಅರಿವು, ವಿಜಯ್, ದಿಲೀಪ್ ಸುಬ್ರಹ್ಮಣ್ಯಂ ಸಾಹಸ ನಿರ್ದೇಶನ, ಚಂಪಕಧಾಮ ಬಾಬು, ಕುಮಾರ್ ನಿರ್ಮಾಣ ನಿರ್ವಹಣೆ ಹಾಗೂ ಯೋಗಿ. ಜಿ. ರಾಜ್, ಗಣೇಶ್ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.