ETV Bharat / sitara

ಕಮಾಲ್​ ಮಾಡಿದ 'ಪೊಗರು'... ಹಿಂದಿ ರೈಟ್ಸ್​​ ಕಮಾಯಿ ಎಷ್ಟು ಗೊತ್ತಾ? - ಪೊಗರು ಸಿನಿಮಾದ ಹಿಂದಿ ರೈಟ್ಸ್​​ ಮಾರಾಟ

ನಂದ ಕಿಶೋರ್​​ ಆ್ಯಕ್ಷನ್​​ ಕಟ್​​​ ಹೇಳುತ್ತಿರುವ ಪೊಗರು ಸಿನಿಮಾದ ಹಿಂದಿ ಹಕ್ಕುಗಳನ್ನು ಬಾಲಿವುಡ್ ನಿರ್ಮಾಪಕ ಆರ್.ಕೆ.ದುಗ್ಗಲ್ 7.2 ಕೋಟಿ ರೂ.ಗೆ ಕೊಂಡುಕೊಂಡಿದ್ದಾರಂತೆ.

Pogaru hindi cinema sale for 7.2 crores of
'ಪೊಗರು' ಇದೀಗ ದುಬಾರಿ : 7.2 ಕೋಟಿಗೆ ಮಾರಾಟವಾಯ್ತು ಹಿಂದಿ ರೈಟ್ಸ್​!​​​
author img

By

Published : Nov 26, 2020, 5:08 PM IST

ಆ್ಯಕ್ಷನ್​​​ ಪ್ರಿನ್ಸ್​​​ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಚಿತ್ರ "ಪೊಗರು" ಬಿಡುಗಡೆಗು ಮುನ್ನವೇ ಸಖತ್​​ ಸದ್ದು ಮಾಡುತ್ತಿದೆ. ಈಗಗಲೇ ಚಿತ್ರದ ಪೋಸ್ಟರ್‌ಗಳು, ಟೀಸರ್​​​ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಅಲ್ಲದೆ ಕರಾಬು ಹಾಡು ಕೂಡ ಯೂಟ್ಯೂಬ್​​​​ನಲ್ಲಿ ಧೂಳೆಬ್ಬಿಸಿದೆ. ಇದೀಗ ಮತ್ತೊಂದು ವಿಶಿಷ್ಟ ಸಾಧನೆಗೆ ಪೊಗರು ಮುಂದಾಗಿದೆ.

ನಂದ ಕಿಶೋರ್​​ ಆ್ಯಕ್ಷನ್​​ ಕಟ್​​​ ಹೇಳುತ್ತಿರುವ ಪೊಗರು ಸಿನಿಮಾದ ಹಿಂದಿ ಹಕ್ಕುಗಳನ್ನು ಬಾಲಿವುಡ್ ನಿರ್ಮಾಪಕ ಆರ್.ಕೆ.ದುಗ್ಗಲ್ 7.2 ಕೋಟಿ ರೂ.ಗೆ ಕೊಂಡುಕೊಂಡಿದ್ದಾರಂತೆ. ಈ ಮೂಲಕ ಕೇವಲ ನಾಲ್ಕು ಸಿನಿಮಾಗಳಲ್ಲಿ ನಟಿಸಿದ ಧ್ರುವ ಸರ್ಜಾರ ಚಿತ್ರ ಈ ಬೆಲೆಗೆ ಮಾರಾಟವಾಗಿರುವುದು ಗಾಂಧಿನಗರದ ಜನರ ಹುಬ್ಬೇರುವಂತೆ ಮಾಡಿದೆ.

ಇನ್ನು ಪೊಗರು ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಡಬ್​​ ಮಾಡಿ ರಿಲೀಸ್​ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಹಿಂದಿಗೂ ಡಬ್​​ ಮಾಡಿ ಹಿಂದಿ ಭಾಷೆಯಲ್ಲಿಯೂ ಸಿನಿಮಾವನ್ನು ತೆರೆ ಮೇಲೆ ತರಲು ಚಿತ್ರತಂಡ ಪ್ಲಾನ್​ ಮಾಡಿದೆ.

ನಂದ ಕಿಶೋರ್​ ಆ್ಯಕ್ಷನ್​ ಕಟ್​​ ಹೇಳಿರುವ ಈ ಸಿನಿಮಾಕ್ಕೆ ಚಂದನ್​ ಶೆಟ್ಟಿ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಧನಂಜಯ್​, ಕುರಿ ಪ್ರತಾಪ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.