ಇತ್ತೀಚೆಗಷ್ಟೆ ಬಿಡುಗಡೆಯಾದ ನಂದಕಿಶೋರ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರ ಇದೇ ಏಪ್ರಿಲ್ 13ರ ಯುಗಾದಿ ಹಬ್ಬದಂದು ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಬಿ ಕೆ ಗಂಗಾಧರ್ ನಿರ್ಮಾಣದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಬಾಕ್ಸಾಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡಿತ್ತು. ಕುರಿ ಪ್ರತಾಪ್, ಚಿಕ್ಕಣ್ಣ, ರವಿಶಂಕರ್, ಬುಲೆಟ್ ಪ್ರಕಾಶ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸೇರಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.
ಇದನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ನಂತರ ತಮಿಳು ಭಾಷೆಯಲ್ಲಿಯೂ ಡಬ್ ಮಾಡಲಾಗಿತ್ತು. ಈ ಚಿತ್ರದ ಖರಾಬು ಹಾಡು ಸ್ಯಾಂಡಲ್ವುಡ್ನಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಹಾಡು ಎಂಬ ದಾಖಲೆ ಸೃಷ್ಠಿಸಿದೆ.
ಯುಗಾದಿ ಸಂಭ್ರಮ : ಯುಗಾದಿ ಹಬ್ಬದ ಸಂಭ್ರಮದ ಸಲುವಾಗಿ ಏಪ್ರಿಲ್ 12 ರಿಂದ 17ರವರೆಗೆ ಮನರಂಜನೆಯ ಮಹಾಪೂರವೇ ಹರಿಯಲಿದೆ. ಯಾರಿವಳು ಧಾರಾವಾಹಿಯ ಶ್ರೇಷ್ಠಾ ತಾಯಿ ಸ್ಥಾನ ತುಂಬಲಿರೋ ಮಾಯಾ, ಗೌರಿಪುರದ ಗಯ್ಯಾಳಿಗಳ ಬೇವಿನಂತಹ ನೋವನ್ನು ಮರೆಸಿ ಬೆಲ್ಲದ ಸವಿ ನೀಡೋ ಗುಲಾಬಿ, ಕಸ್ತೂರಿ ನಿವಾಸದಲ್ಲಿ ಮೂಡಿರುವ ಒಡಕು ಅನ್ನೋ ಕಹಿ ಬೇರಿಗೆ ಪ್ರೀತಿಯ ಸಿಹಿ ನೀರಿರೆಯೋ ಖುಷಿ, ಶ್ರೀಮಂತಿಕೆಯ ನೆರಳಲ್ಲಿ ಮಾಯವಾಗಿರುವ ಸಂತೋಷದ ಸಿರಿ ಹರಿಸೋ ನೇತ್ರಾವತಿ, ನೊಂದಿರುವ ಸುಂದರಿ ಬಾಳಲ್ಲಿ ಭರವಸೆಯ ಸಿಹಿ ತರಲಿದೆ ಈ ಯುಗಾದಿ.
ನಾಯಕನ ಬಾಳಿಗೆ ಅಮ್ಮನ ಪ್ರೀತಿ ಪಾಯಸ ಬಡಿಸೋ ನಯನ, ತಾಯಿ ಮಮತೆಯ ಹೂರಣ ಆಗಲಿದೆ ಸೇವಂತಿ ಬದುಕಿಗೆ ತೋರಣ. ಇವೆಲ್ಲದರ ಜೊತೆ ಯುಗಾದಿ ಹಬ್ಬಕ್ಕೆ ಇನ್ನಷ್ಟು ಮೆರುಗು ತುಂಬಲು ಮಹಾಸಂಗಮದಲ್ಲಿ ಒಂದಾಗಲಿದೆ ಕಾವ್ಯಾಂಜಲಿ ಮನಸಾರೆ ಧಾರಾವಾಹಿಗಳು.
ಯುಗಾದಿ ಹಬ್ಬದ ಸಡಗರಕ್ಕೆ ಮತ್ತಷ್ಟು ರಂಗು ತುಂಬಲಿದೆ ಮನಸಾರೆ ನಾಯಕಿ ಪ್ರಾರ್ಥನಾ ಮದುವೆ ದಿಬ್ಬಣ. ಇಷ್ಟ ಪಟ್ಟ ಹುಡುಗ ಯುವರಾಜನ ಜೊತೆ ಅಪ್ಪನ ಆಶೀರ್ವಾದ ಪಡೆದು ಮನಸಾರೆ ಸಪ್ತಪದಿ ತುಳಿಯಲಿದ್ದಾಳೆ ಪ್ರಾರ್ಥನಾ. ಮದುವೆಗೆ ಸಾಕ್ಷಿಯಾಗಲಿದ್ದಾರೆ ಕಾವ್ಯಾಂಜಲಿಯ ಅರಸ್ ಕುಟುಂಬ.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ನಟ ಪುನೀತ್ ರಾಜ್ಕುಮಾರ್: ಜಗ್ಗೇಶ್ ದಂಪತಿಗೂ ಕೋವಿಡ್ ಲಸಿಕೆ
ಈ ಎಲ್ಲಾ ಕಾರ್ಯಕ್ರಮಗಳು ಯುಗಾದಿ ಹಬ್ಬದಂದು ಪ್ರಸಾರವಾಗಲಿವೆ.