ಮಂಗಳೂರು : ನಿಶಾನ್ ವರುಣ್ ಮೂವೀಸ್ ಬ್ಯಾನರ್ನಡಿ ತಯಾರಾಗಿರುವ 'ಪೆಪ್ಪೆರೆರೆ ಪೆರೆರೆರೆ' ತುಳು ಸಿನಿಮಾ ಕುಡ್ಲ ಟಾಕೀಸ್ ಒಟಿಟಿಯಲ್ಲಿ ಮಾ.7ರಂದು ತೆರೆ ಕಾಣಲಿದೆ ಎಂದು ನಟ, ಸಹ ನಿರ್ದೇಶಕ ರಾಹುಲ್ ಅಮೀನ್ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಕಲರ್ಸ್ ಕನ್ನಡದ 'ಗೀತಾ' ಸೀರಿಯಲ್ ಖ್ಯಾತಿಯ ಶೋಭರಾಜ್ ಪಾವೂರು ನಿರ್ದೇಶನವಿರುವ ಪೆಪ್ಪೆರೆರೆ ಪೆರೆರೆರೆ ತುಳು ಸಿನಿಮಾ, ಕುಡ್ಲ ಟಾಕೀಸ್ನಲ್ಲಿ ಮಾ.7ರಂದು ಮಧ್ಯಾಹ್ನ 1.30, ಸಂಜೆ 6 ಹಾಗೂ ರಾತ್ರಿ 9ಕ್ಕೆ ತೆರೆ ಕಾಣಲಿದೆ. ಬಳಿಕ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ರಾಬರ್ಟ್' ರಿಲೀಸ್ಗೂ ಮುನ್ನವೇ ಹೊಸ ದಾಖಲೆ ಮಾಡಲು ಹೊರಟ ದಚ್ಚು ಅಭಿಮಾನಿಗಳು..!
ಶೋಭರಾಜ್ ಪಾವೂರು ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದು, ನಿಶಾನ್ ಕೃಷ್ಣ ಭಂಡಾರಿ ಹಾಗೂ ವರುಣ್ ಸಾಲ್ಯಾನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಪಾಟೀಲ್ ಕ್ಯಾಮರಾ ನಿರ್ವಹಿಸಿದ್ದು, ಅಶೋಕ್ ಹಾಗೂ ಸುಶಾಂತ್ ಶೆಟ್ಟಿ ಸಂಕಲನ ಮಾಡಿದ್ದಾರೆ ಎಂದು ರಾಹುಲ್ ಅಮೀನ್ ಹೇಳಿದರು.