ಪೈಲ್ವಾನ್ ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ನಿರ್ಮಾಪಕಿ ಸ್ವಪ್ನಕೃಷ್ಣ ನಗರ ಪೊಲೀಸ್ ಆಯುಕ್ತ ಕಚೇರಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಪೈಲ್ವಾನ್ ಚಿತ್ರ ಕಳೆದ 12 ರಂದು ಪಂಚಭಾಷೆಗಳಲ್ಲಿ 3 ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ತೆರೆಕಂಡಿತ್ತು. ಆದರೆ, ಚಿತ್ರ ಬಿಡುಗಡೆಯ ದಿನವೇ ಎಲ್ಲಾ ಕಡೆ ಪೈರಸಿಯಾಗಿತ್ತು. ಹೀಗಾಗಿ ದುಷ್ಕರ್ಮಿಗಳ ವಿರುದ್ಧ ಇದೀಗ ದೂರು ದಾಖಲಾಗಿದೆ.
ಇನ್ನು ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ ಮಾಧ್ಯಮದವರ ಜೊತೆ ಮಾತಾನಾಡಿ, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾವನ್ನ ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಇಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3500 ಕ್ಕೂ ಹೆಚ್ಚು ಲಿಂಕ್ಗಳನ್ನ ಪೊಲೀಸರಿಗೆ ನೀಡಿದ್ದಿವಿ. ಇದನ್ನ ಯಾರು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ದರ್ಶನ್ ಅಭಿಮಾನಿಗಳು ಸಿನಿಮಾವನ್ನ ಪೈರಸಿ ಮಾಡಿದ್ದಾರೆಂದು ನಾನು ಹೇಳುವುದಿಲ್ಲ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದ್ರು ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಅನ್ನೋದು ಮಾರಕವಾಗಿದೆ ಎಂದರು.